ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುಚ್ಚಲ್ಪಟ್ಟಿದ್ದ ಶಾಲೆಗಳು ಮತ್ತೆ ಆರಂಭಗೊಳ್ಳಲಿದೆ. ಈ ಮಧ್ಯೆ ಪೋಷಕರ ಒಪ್ಪಿಗೆ ಪತ್ರ ಕೂಡ ಕಡ್ಡಾಯವಾಗಲಿದೆ. ರಾಜ್ಯಾದ್ಯಂತ 9 ಹಾಗೂ 10ನೇ ತರಗತಿ ಪ್ರಾರಂಭಕ್ಕೆ 16,850 ಪ್ರೌಢಶಾಲೆಗಳು ಸಜ್ಜಾಗಿವೆ. ಜೊತೆಗೆ ಪ್ರಥಮ ಹಾಗೂ ದ್ವಿತೀಯ ಪಿ.ಯು.ಸಿ ಪ್ರಾರಂಭಿಸಲು 5,492 ಪಿ.ಯು ಕಾಲೇಜುಗಳು ಸಿದ್ಧತೆ ಮಾಡಿಕೊಂಡಿವೆ. ಆಗಸ್ಟ್ 23ರಿಂದ 9,10,11 ಮತ್ತು 12ನೇ ತರಗತಿಗಳು ಶುರುವಾಗಲಿದ್ದು, ಶಿಕ್ಷಣ ಇಲಾಖೆ ಸಕಲ ಸಿದ್ದತೆಯನ್ನು ಮಾಡಿಕೊಂಡಿದೆ. ಬರೋಬ್ಬರಿ 18 ತಿಂಗಳ ಬಳಿಕ ಶಾಲೆಗಳು ತೆರೆಯುತ್ತಿದ್ದು, ಕಳೆದ ಒಂದೂವರೆ ವರ್ಷದಿಂದ ಮನೆಯಲ್ಲೇ ಆನ್ಲೈನ್ ಕ್ಲಾಸ್ ಕೇಳಿ ಕೇಳಿ ಬೇಸರಗೊಂಡಿದ್ದ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಉತ್ಸುಕರಾಗಿದ್ದಾರೆ. ಈಗ ಶಾಲೆಯ ವಾತಾವರಣದಲ್ಲಿ ನೇರವಾಗಿ ಪಾಠ ಕೇಳುವ ಅವಕಾಶ ಸಿಕ್ಕಿದೆ.
- +91 73497 60202
- [email protected]
- October 6, 2024 10:32 PM