ನ್ಯೂಸ್ ನಾಟೌಟ್ : ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವ ಭಾರತದ ಕ್ರಿಕೆಟ್ ತಂಡದ ಜೆರ್ಸಿ ಪ್ರಾಯೋಜಕ ‘ಬೈಜೂಸ್‘ ಜೊತೆಗಿನ ಒಪ್ಪಂದ ಕಡಿತ ಹಾಗೂ ಪಂದ್ಯಗಳ ಪ್ರಸಾರ ಮಾಡುವ ಮಾಧ್ಯಮ ಹಕ್ಕಿನ ನವೀಕರಣ ಸಂಬಂಧ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೋಮವಾರ ತುರ್ತು ಸಭೆ ಸೇರಲಿದೆ. ವರ್ಚ್ಯುವಲ್ ಆಗಿ ಈ ಸಭೆ ನಡೆಯಲಿದೆ.
ಬೆಂಗಳೂರು ಮೂಲದ ಎಜುಟೆಕ್ ಸ್ಟಾರ್ಟಪ್ ಬೈಜೂಸ್, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರಿಂದ ಬಿಸಿಸಿಐ ಜೊತೆ ಮಾಡಿಕೊಂಡಿರುವ ಜೆರ್ಸಿ ಸ್ಪಾನ್ಸರ್ ಒಪ್ಪಂದವನ್ನು ಮುರಿದುಕೊಳ್ಳುವುದಾಗಿ ಹೇಳಿತ್ತು. ಆದರೆ 2023ರ ಮಾರ್ಚ್ವರೆಗೆ ಮುಂದುವರಿಸಿ ಎಂದು ಬಿಸಿಸಿಐ ಮನವಿ ಮಾಡಿಕೊಂಡಿತ್ತು. 2023ರ ನವೆಂಬರ್ ವರೆಗೂ ಬೈಜೂಸ್ ಭಾರತದ ಕ್ರಿಕೆಟ್ ತಂಡದ ಜೆರ್ಸಿಯ ಪ್ರಾಯೋಜಕತ್ವ ಪಡೆದುಕೊಂಡಿತ್ತು. ಸುಮಾರು 35 ಮಿಲಿಯನ್ ಡಾಲರ್ಗೆ ಈ ಒಪ್ಪಂದ ನಡೆದಿತ್ತು. ಆದರೆ ಆರ್ಥಿಕ ಸಂಕಷ್ಟದಿಂದಾಗಿ ಈ ಒಪ್ಪಂದ ಮುರಿದುಕೊಳ್ಳುವುದಾಗಿ ಬೈಜೂಸ್ ಹೇಳಿದೆ. ಹೀಗಾಗಿ ಈ ಕುರಿತು ಹಾಗೂ ಹೊಸ ಪ್ರಾಯೋಜಕರ ಹುಡುಕಾಟದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ನೇರಪ್ರಸಾರದ ಹಕ್ಕು ಮಾರಾಟದ ಬಗ್ಗೆಯೂ ಚರ್ಚೆ ಈ ಸಭೆಯಲ್ಲಿ ಒಂದೇ ಅಜೆಂಡಾ ಇದ್ದು, ‘ಬೈಜೂಸ್ ಹಾಗೂ ಸ್ಟಾರ್ ಮೀಡಿಯಾ ಹಕ್ಕು ಪಾವತಿ ಬಗ್ಗೆ ಚರ್ಚೆ‘ ಎಂದು ನಮೂದಿಸಲಾಗಿದೆ. ಸದ್ಯ ಭಾರತದಲ್ಲಿ ನಡೆಯುವ ಪಂದ್ಯಗಳ ಪ್ರಸಾರ ಹಕ್ಕು ಸ್ಟಾರ್ ಸಂಸ್ಥೆ ಬಳಿ ಇದ್ದು, ಮಾರ್ಚ್ 31ಕ್ಕೆ ಅಂತ್ಯವಾಗಲಿದೆ. ಇದರ ನವೀಕರಣದ ಬಗ್ಗೆಯೂ ಚರ್ಚೆ ನಡೆಯಲಿದೆ.