ಕರಾವಳಿ

ಬೆಟ್ಟದ ನೆಲ್ಲಿಕಾಯಿ ಮತ್ತು ಹಲವು ಪ್ರಯೋಜನಗಳನ್ನು ತಿಳಿಯೋಣ

ನ್ಯೂಸ್ ನಾಟೌಟ್: ನೆಲ್ಲಿಕಾಯಿ ಅಂದರೆ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಇಷ್ಟವೇ. ಆದರೆ ಅದು ಇತ್ತೀಚಿನ ದಿನಗಳಲ್ಲಿ ಕಾಣುವುದೇ ತೀರ ಅಪರೂಪ. ಘಟ್ಟ ಕಡೆಗಳಲ್ಲಿ ಹೆಚ್ಚಾಗಿ ಆಗುವುದರಿಂದ ಕೆಲವೊಂದು ಪ್ರದೇಶದ ಜನರು ನೆಲ್ಲಿಕಾಯಿ ಪ್ರಿಯರೇ ಆಗಿದ್ದಾರೆ. ಆದರೆ ಬೆಟ್ಟದ ನೆಲ್ಲಿಕಾಯಿ ತಿನ್ನಲು ಎಲ್ಲರು ತಿನ್ತಾರೆ. ಆದರೆ ಅದರ ಪ್ರಯೋಜನಗಳು ಏನು ಅಂತ ತಿಳಿದಿರುವುದೇ ಇಲ್ಲ. ಇದೀಗ ಈ ಬೆಟ್ಟದ ನೆಲ್ಲಿಕಾಯಿಂದಾಗುವ ಪ್ರಯೋಜನಗಳು ಏನು ಅನ್ನುವುದನ್ನು ತಿಳಿಯೋಣ.

ನೆಲ್ಲಿಕಾಯಿಯು ಕಿತ್ತಾಳೆಗಿಂತ ಹೆಚ್ಚು ವಿಟಮಿನ್ – ಸಿ ಅನ್ನು ಹೊಂದಿರುತ್ತದೆ. ಬಾಯಿಗೆ ಸ್ವಲ್ಪ ಕಹಿ ಅನಿಸಿದರೂ ದೇಹಕ್ಕೆ ಹಿತವಾಗಿದೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕೇವಲ 1 ನೆಲ್ಲಿಕಾಯಿ ತಿಂದರೆ ಸಾಕಾಗುತ್ತದೆ. ಇದು ದೇಹದ ಜೀರ್ಣ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ಹಲವಾರ ಆರೋಗ್ಯ ಸಮಸ್ಯೆಗಳಿಗೆ ಔಷಧಿಯಾಗಿದೆ. ಇದರಲ್ಲಿ ನಾರಿನಂಶ, ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣ, ಕ್ಯಾರೋಟೀನ್ , ಥಯಾಮಿನ್ , ರೈಬೋಫ್ಲಾಮಿನ್ ಮುಂತಾದ ಹಲವು ಪೋಷಕಾಂಶಗಳು ಇದೆ.

ಯಾವೆಲ್ಲಾ ಆರೋಗ್ಯ ಸಮಸ್ಯೆ ನಿವಾರಣೆಯಾಗುತ್ತದೆ…?

ಈ ನೆಲ್ಲಿಕಾಯಿಯಲ್ಲಿ ವಿಟಮಿನ್ – ಸಿ ಇರುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ದೆಹದ ರೋಗ ನಿರೋಧಕ ಶಕ್ತಿಯು ಬಲಗೊಂಡಾಗ ನೆಗಡಿಯಂತಹ ಸೋಂಕುಗಳನ್ನು ನಿವಾರಿಸಬಹುದು. ನೆಗಡಿ ಸಮಸ್ಯೆಗೆ 2 ಚಮಚ ನೆಲ್ಲಿಕಾಯಿ ಪುಡಿ , 2 ಚಮಚ ಜೇನುತುಪ್ಪ ಬೆರೆಸಿ ದಿನಕ್ಕೆ 3 ರಿಂದ 4 ಬಾರಿ ಸೇವಿಸಬೇಕು.

ದೃಷ್ಟಿ ಸಮಸ್ಯೆ ಬಂದಲ್ಲಿ ಪ್ರತಿದಿನ ನೆಲ್ಲಿಕಾಯಿ ಸೇವಿಸಬೇಕು. ಇದರಲ್ಲಿ ಕ್ಯಾರೋಟಿನ್ ಇರುವುದರಿಂದ ಇದು ದೃಷ್ಟಿ ಹೆಚ್ಚಿಸುವುದರ ಜೊತೆಗೆ ಕಣ್ಣಿನ ಪೊರೆ, ಕಣ್ಣುಗಳ ಮೇಲಿನ ಅತಿಯಾದ ಒತ್ತಡ ಕಣ್ಣುಗಳಲ್ಲಿ ತುರಿಕೆ ಮುಂತಾದ ಸಮಸ್ಯೆಗಳಿಗೆ ಇದು ಪರಿಹಾರವಾಗಿದೆ.

ನೆಲ್ಲಿಕಾಯಿಯು ಹಸಿವನ್ನು ನಿಯಂತ್ರಿಸುತ್ತದೆ. ಅದರಲ್ಲಿ ಕೊಬ್ಬು ಕಾರ್ಬೋಹೈಡ್ರೇಟ್ ಗಳ ಪ್ರಮಾಣವು ತುಂಬಾ ಕಡಿಮೆಯಾಗಿದೆ. ಹಾಗಗಿ ಇದು ಕೊಬ್ಬು ಕರಗಿಸುವಲ್ಲಿ ಸಹಾಯ ಮಾಡುತ್ತದೆ.

ದುರ್ಬಲ ಮತ್ತು ಒಣ ಕೂದಲಿನ ಸಮಸ್ಯೆಯಿಂದ ತೊಂದರೆ ಆಗಿದ್ದರೆ, ಇದಕ್ಕೆ ನೆಲ್ಲಿಕಾಯಿ ಸೇವನೆ ಮಾಡಿದರೆ ಪರಿಹಾರವಾಗುತ್ತದೆ. ಇದನ್ನು ಸೇವಿಸುವುದರಿಂದ ಕೂದಲಿಗೆ ಒಳ್ಳೆಯ ಪ್ರಯೋಜನಕಾರಿಯಾಗುತ್ತದೆ. ಕೂದಲು ಬಿಳಿಯಾಗುವುದನ್ನು ನಿಯಂತ್ರಿಸುತ್ತದೆ. ಕೂದಲು ಬಲವಾಗಿ ಹಾಗೂ ಅರೋಗ್ಯಕರವಾಗಿ ಬೆಳೆಯುತ್ತದೆ.

ನೆಲ್ಲಿಕಾಯಿ ಸಂಧಿವಾತಕ್ಕೆ ಸಂಬಂಧಿಸಿದ ನೋವನ್ನು ನಿವಾರಿಸುತ್ತದೆ. ಹಾಗೂ ಬಾಯಿಯಲ್ಲಿ ಹುಣ್ಣುಗಳಾಗಿದ್ದರೆ ಅದಕ್ಕೂ ಪರಿಹಾರ ನೀಡುತ್ತದೆ. ಇದರಲ್ಲಿರುವ ಉರಿಯೂತ ನಿವಾರಕ ಗುಣಗಳು ಇದಕ್ಕೆ ಕಾರಣವಾಗಿದೆ.

( ಈ ಸಲಹೆ ಪಡೆದುಕೊಳ್ಳುವ ಮೊದಲು ವ್ಯೆದ್ಯರ ಸಲಹೆ ಪಡೆದುಕೊಳ್ಳಿ)

Related posts

ಸಂಪಾಜೆ: ರಾಷ್ಟ್ರೀಯ ಹೆದ್ದಾರಿಗೆ ಉರುಳಿದ ಬೃಹತ್ ಮರ, ವಾಹನ ಸಂಚಾರ ಅಸ್ತವ್ಯಸ್ತ

ವಿದ್ಯಾರ್ಥಿ ನಿಲಯದಿಂದ ಇಬ್ಬರು ವಿದ್ಯಾರ್ಥಿಗಳು ನಿಗೂಢ ನಾಪತ್ತೆ ಪ್ರಕರಣ..! ವಿಟ್ಲದ ಸರ್ಕಾರಿ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಪುತ್ತೂರಿನಲ್ಲಿ ಪತ್ತೆ!

ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಗೆ ಅಭಿನಂದಿಸಿ ಹಾಕಿದ್ದ ಬ್ಯಾನರ್ ಹರಿದು ಹಾಕಿದ ಕಿಡಿಗೇಡಿಗಳು..! ಮಂಗಳೂರಿನ ಉಳ್ಳಾಲದಲ್ಲಿ ನಡೆದ ಕೃತ್ಯ