ನ್ಯೂಸ್ ನಾಟೌಟ್ :ನಳೀನ್ ಕುಮಾರ್ ಕಟೀಲ್ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಕಾನೂನು ಜ್ಞಾನ ಇಲ್ಲದೆ ಮಾತನಾಡುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕಟೀಲ್ ಜೋಕರ್ ಇದ್ದಂತೆ:
ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ನೀಡಿದ ಸಿದ್ಧರಾಮಯ್ಯ ಅವರು, ನಳಿನ್ ಕುಮಾರ್ ಕಟೀಲ್ ಒಬ್ಬ ಜೋಕರ್ ಇದ್ದಂತೆ ಹೀಗಾಗಿ ಪ್ರತಿಕ್ರಿಯಿಸೋ ಅಗತ್ಯವಿಲ್ಲ ಎಂದಿದ್ದಾರೆ. ಈ ಬಾರಿ ನಾನು ಹೈಕಮಾಂಡ್ ಹೇಳಿದ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತೇನೆ. ಯಾವ ಕ್ಷೇತ್ರ ಎಂಬುವುದು ಇನ್ನೂ ನಿರ್ಧಾರವಾಗಿಲ್ಲ, ನಾನು ಸಿಎಂ ಅವರನ್ನು ನಾಯಿ ಅಂತ ಕರೆದಿಲ್ಲ.ಆದರೆ ಕೇಂದ್ರದಿಂದ ಅನುದಾನ ತರಲು ಧೈರ್ಯ ಇರಬೇಕು ಎಂದು ಹೇಳಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ಯಡಿಯೂರಪ್ಪ ಹುಲಿಯಾ?
ನನ್ನನ್ನು ಟಗರು, ಹುಲಿಯಾ ಎಂದು ಕರೆಯುತ್ತಾರೆ, ಯಡಿಯೂರಪ್ಪರನ್ನು ರಾಜಾ ಹುಲಿ ಎಂದು ಪಕ್ಷದವರೇ ಕರೆಯುತ್ತಾರೆ ಹಾಗಾದರೆ ಯಡಿಯೂರಪ್ಪ ಅವರು ಹುಲಿಯಾ? ಎಂದು ಸಮರ್ಥಿಸಿಕೊಂಡರು.ರಾಜ್ಯದ ಸಮಸ್ಯೆಗಳ ಬಗ್ಗೆ ಕೇಂದ್ರ ಸರಕಾರದ ಜೊತೆ ಮಾತನಾಡುವ ಧೈರ್ಯ ರಾಜ್ಯದ ಮುಖ್ಯಮಂತ್ರಿಗೆ ಇರಬೇಕು. ರಾಜ್ಯಕ್ಕೆ ಬರಬೇಕಾದ ಅನುದಾನ ತರಬೇಕು, ನಾಯಿಮರಿ ತರ ಇರಬಾರದೆಂದು ಹೇಳಿದ್ದೇನಷ್ಟೇ ಎಂದು ಈ ಹಿಂದೆ ನೀಡಿದ ಹೇಳಿಕೆಯನ್ನು ಸ್ಪಷ್ಟಪಡಿಸಿದರು.
ಬಿಜೆಪಿ ಸರ್ಕಾರ ಭ್ರಷ್ಟರ ಕೊಂಪೆ:
ಉಳ್ಳಾಲ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ಮಾತನಾಡಿದ ಅವರು, ನಾನೇನು ಅಲೆಮಾರಿ ರಾಜಕಾರಣಿಯೇ?. ಕೋಲಾರದವರು ಕರೆಯುತ್ತಾರೆ. ಬಾದಾಮಿಯವರು ಅಲ್ಲೇ ನಿಲ್ಲಿ ಎನ್ನುತ್ತಿದ್ದಾರೆ. ವರುಣಾ ಕ್ಷೇತ್ರದವರು ಇಲ್ಲೇ ನಿಲ್ಲಿ ಎಂದು ಕರೆಯುತ್ತಿದ್ದಾರೆ. ಹೈಕಮಾಂಡ್ ಎಲ್ಲಿ ಸೂಚಿಸುತ್ತದೆಯೋ ಅಲ್ಲಿ ಸ್ಪರ್ಧಿಸುತ್ತೇನೆ ಎಂದರು.ಮುಂದುವರಿದು ಮಾತನಾಡಿದ ಅವರು ಬಿಜೆಪಿ ಸರ್ಕಾರದಲ್ಲಿ ಬೇಕಾದಷ್ಟು ಭ್ರಷ್ಟಾಚಾರದ ಪ್ರಕರಣಗಳು ನಡೆಯುತ್ತಿದೆ. ಆದ್ದರಿಂದ ಇವರನ್ನು ಗುತ್ತಿಗೆದಾರರ ಸಂಘದವರು 40% ಕಮಿಷನ್ ಸರ್ಕಾರ ಎಂದು ಕರೆದಿದ್ದಾರೆ. ಈಶ್ವರಪ್ಪ ಲಂಚ ಕೇಳಿದರೆಂದು ಸಂತೋಷ್ ಆತ್ಮಹತ್ಯೆ ಮಾಡಿಕೊಂಡರು. ಮೊನ್ನೆ ಪ್ರಸಾದ್ ಎಂಬವವರು ಹೀಗೆ ಹಲವಾರು ಮಂದಿ ಇವರ ಭ್ರಷ್ಟಾಚಾರದಿಂದ ಸಾವಿಗೆ ಶರಣಾಗುತ್ತಿದ್ದಾರೆ. ಈ ಸರ್ಕಾರಲ್ಲಿ ಭ್ರಷ್ಟಾಚಾರವಿಲ್ಲದೆ ಏನೂ ನಡೆಯುವುದಿಲ್ಲ ಎಂದು ಗುಡುಗಿದರು.