ನ್ಯೂಸ್ ನಾಟೌಟ್ :ಮದುವೆ ಅನ್ನೋದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ ಎಂದು ಹಿರಿಯರು ಹೇಳುವುದು ವಾಡಿಕೆ.ಮದುವೆ ಎಂದರೆ ಅಲ್ಲಿ ಗಮ್ಮತ್ತು ಇದೆ.ಫ್ರೆಂಡ್ಸ್ ,ಬಂಧುಗಳು,ಊರವರು ಬಂದು ಆ ಜಾಗದಲ್ಲಿ ಸೇರುತ್ತಾರೆ. ಗಂಡು-ಹೆಣ್ಣಿಗೆ ಪುರೋಹಿತರ ಮಂತ್ರದ ಮೂಲಕ ಅವರ ಸಮ್ಮುಖದಲ್ಲಿ ತಾಳಿ ಕಟ್ಟಿಸಿ ಅಕ್ಷತೆ ಹಾಕುತ್ತಾರೆ. ಇದು ಪದ್ದತಿ.ಆದರೆ ಇದನ್ನು ಮೀರಿ ಮದುವೆಯಾದರೆ ಅದನ್ನ ವಿಚಿತ್ರ ಅಥವಾ ವಿಭಿನ್ನ ಮದುವೆ ಅಂತಾನು ಕರಿಬಹುದು.ಇಲ್ಲೊಂದು ಕಡೆ ಮದುವೆಯ ವಿಡಿಯೋವೊಂದು ಬಾರಿ ವೈರಲ್ ಆಗುತ್ತಿದೆ.
ಏನಿದು ವಿಡಿಯೋ?
ಗದಗ ನಗರದ ಡಾ. ಬಿ.ಆರ್ ಅಂಬೇಡ್ಕರ್ ಸಭಾಭವನದಲ್ಲಿ ನಡೆದ ವಿಭಿನ್ನ ವಿವಾಹದಲ್ಲಿ ಕಲಬುರಗಿಯ ಪೂಜಾ ಮತ್ತು ಗದಗ ನಗರದ ಸೋಮಶೇಖರ್ ಎಂಬ ಜೋಡಿ ಮಂತ್ರ ಘೋಷಗಳಿಲ್ಲದೇ ಮದುವೆಯಾಗಿದ್ದಾರೆ. ಸಾಹಿತಿಗಳ ಮಾತೇ ಇಲ್ಲಿ ಮಂತ್ರ. ಪರಸ್ಪರ ಸಂವಿಧಾನದ ಪೀಠಿಕೆ ಓದಿ ಪರಸ್ಪರ ಒಪ್ಪಿ ಸಂಗಾತಿಗಳಾಗಿ ಅರ್ಪಿಸಿಕೊಂಡಿದ್ದೇವೆ ಎಂಬ ವಾಗ್ದಾನದ ಮೂಲಕ ಮದುವೆಯಾಗಿದ್ದಾರೆ.
ಇವರ ವಿವಾಹಕ್ಕೆ ಸಾಕ್ಷಿಯಾಗಿ ಸಂವಿಧಾನ ಪ್ರತಿಜ್ಞೆ ಬೋಧನೆಯನ್ನು ಹೋರಾಟಗಾರ್ತಿ ಕೇ. ನೀಲಾ ಅವರು ಮಾಡಿದರು. ಅದರಂತೆ ಅವರು ಹೂ ಹಾರವನ್ನು ಬದಲಿಸಿದರು. ಮದುವೆಗೆ ಬಂದ ಅತಿಥಿಗಳಿಗೆ ವಚನ ಸಾಹಿತ್ಯದ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದರು. ಇವರ ಮದುವೆಗೆ ನೂರಾರು ಮಂದಿ ಭಾಗಿಯಾಗಿದ್ದರು.