ನ್ಯೂಸ್ ನಾಟೌಟ್: ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಕುರುಂಜಿಭಾಗ್ ನಲ್ಲಿ ಜ.5 ರಿಂದ ಜ. 15ರವರೆಗೆ ಉಚಿತ ಆರೋಗ್ಯ ಭಾಗ್ಯ ಯೋಜನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ನುರಿತ ವೈದ್ಯರುಗಳಿಂದ ಉಚಿತ ತಪಾಸಣೆ ಮತ್ತು ನಿಗದಿತ ರಿಯಾಯಿತಿ ದರದಲ್ಲಿ ಚಿಕಿತ್ಸೆಗಳನ್ನು ರೋಗಿಗಳಿಗೆ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೊರರೋಗಿಗಳಿಗೆ ರಿಯಾಯಿತಿ ದರದಲ್ಲಿ ಔಷಧಿ, ಕಂಪ್ಯೂಟರೀಕೃತ ರಕ್ತ ತಪಾಸಣೆ, X-RAY, ಸ್ಕ್ಯಾನಿಂಗ್ ಸೌಲಭ್ಯಗಳು ಹಾಗೂ ಒಳರೋಗಿಗಳಿಗೆ ಜನರಲ್ ವಾರ್ಡಿನಲ್ಲಿ ಐದು ದಿವಸಕ್ಕಿಂತ ಹೆಚ್ಚು ಚಿಕಿತ್ಸೆ ಪಡೆಯುವವರಿಗೆ ಉಚಿತ ಹಾಸಿಗೆ, ಊಟ, ಮತ್ತು ರಿಯಾಯಿತಿ ದರದಲ್ಲಿ ಶಸ್ತ್ರ ಚಿಕಿತ್ಸೆ, ಹೆಂಗಸರಿಗೆ ಒಳರೋಗಿಯಾಗಿ ಹೆರಿಗೆ, ಸಂತಾನ ಹರಣ ಶಸ್ತ್ರ ಚಿಕಿತ್ಸೆ, ಗರ್ಭಕೋಶದ ಕಾಯಿಲೆಗಳ ತಪಾಸಣೆ, ಇನ್ನಿತರ ಶಸ್ತ್ರ ಚಿಕಿತ್ಸೆ, X-RAY, ಸ್ಕ್ಯಾನಿಂಗ್, ಕಣ್ಣಿನ ಪೊರೆಯ ಚಿಕಿತ್ಸೆಯನ್ನು ಮಾಡಲಾಗುತ್ತಿದೆ. ಈ ಯೋಜನೆಯಡಿಯಲ್ಲಿ ಕಣ್ಣಿನ ಪೊರೆಯ ಚಿಕಿತ್ಸೆಯನ್ನು ಸೂಕ್ಷ್ಮದರ್ಶಕದಲ್ಲಿ ಬಿಪಿಎಲ್ ಅಳವಡಿಸಿ ರಿಯಾಯಿತಿ ದರದಲ್ಲಿ ಮಾಡಲಾಗುವುದು ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ. ಆರೋಗ್ಯ ಮೇಳವು ಅಸ್ಪತ್ರೆಯ ನಿಬಂಧನೆಗಳಿಗೆ ಒಳಪಟ್ಟಿರುತ್ತದೆ.