ಬೆಂಗಳೂರು

ಬಿಪಿಎಲ್ ಕಾರ್ಡ್ ದಾರರಿಗೆ ಇನ್ಮುಂದೆ 4 ಕೆಜಿ ಅಕ್ಕಿ ಕಡಿತ,10 ಕೆಜಿ ಅಕ್ಕಿ ಬದಲಾಗಿ ೬ ಕೆಜಿ ಅಕ್ಕಿ ಲಭ್ಯ

ನ್ಯೂಸ್ ನಾಟೌಟ್ : ಕೇಂದ್ರ ಸರಕಾರವು ಬಿಪಿಎಲ್ ಕಾರ್ಡ್ ದಾರರಿಗೆ ಬಿಗ್ ಶಾಕ್ ಒಂದನ್ನು ನೀಡಿದೆ.ಕಳೆದ 2 ವರ್ಷಗಳಿಂದ ಪಡಿತರದಾರರಿಗೆ 10 ಕೆಜಿ ಅಕ್ಕಿಯನ್ನು ವಿತರಿಸಲಾಗುತ್ತಿತ್ತು. ಆದರೆ ಇದೀಗ ಪಡಿತರದಾರರಿಗೆ ನೀಡುತ್ತಿದ್ದ 10ಕೆಜಿ ಉಚಿತ ಅಕ್ಕಿಯಲ್ಲಿ 4ಕೆಜಿ ಅಕ್ಕಿಯನ್ನು ಕಡಿತಗೊಳಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ವಿಜಯ್ ಕುಮಾರ್ ತಿಳಿಸಿದ್ದಾರೆ.

ಕೋವಿಡ್ ಹಿನ್ನಲೆಯಲ್ಲಿ 2020-21 ರ ಮೇ ತಿಂಗಳಿಂದ ಇಲ್ಲಿಯವರೆಗೆ ಕೇಂದ್ರ ಸರಕಾರ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಪ್ರತಿ ಫಲಾನುಭವಿಗಳಿಗೆ ತಲಾ 5ಕೆಜಿ ಅಕ್ಕಿ ವಿತರಿಸುತ್ತಿತ್ತು. ರಾಷ್ಟೀಯ ಆಹಾರ ಭದ್ರತಾ ಕಾಯ್ದೆ ಅನ್ವಯ ರಾಜ್ಯ ಸರಕಾರವು ಪ್ರತಿ ಫಲಾನುಭವಿಗಳಿಗೆ ತಲಾ 5ಕೆಜಿ ಅಕ್ಕಿ ವಿತರಿಸುತ್ತಿತ್ತು. ಅದರೆ ಈಗ ಹತ್ತು ಕೆಜಿ ಅಕ್ಕಿ ಬದಲಾಗಿ 6 ಕೆಜಿ ಮಾತ್ರ ಅಕ್ಕಿ ವಿತರಣೆ ಮಾಡಲಾಗುವುದು ಎಂದು ಹೇಳಿದ್ದಾರೆ.

Related posts

ಪ್ರಧಾನಿ ಮೋದಿ ಪ್ರೇರಣೆಯಿಂದ ‘ಗಾಂಧೀಜಿ 150- ಸ್ವಚ್ಛತೆಗೆ ಸ್ವಲ್ಪ ಹೊತ್ತು’ ಅಭಿಯಾನ ಕಾರ್ಯಕ್ರಮ

ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ನಾವು ವಿದ್ಯುತ್‌ ಬಿಲ್ ಕಟ್ಟಲ್ಲ…!

ಇಂದು ಸೌಂದರ್ಯ ಅಭಿಮಾನಿಗಳ ಪಾಲಿಗೆ ಕರಾಳ ದಿನ,ಖ್ಯಾತ ನಟಿ ನಮ್ಮನ್ನಗಲಿ 19 ವರ್ಷ