ನ್ಯೂಸ್ ನಾಟೌಟ್ : ಮಾನಸಿಕ ಸಮಸ್ಯೆಯಿಂದ ೯ ವರ್ಷಗಳ ಹಿಂದೆ ಹರಿಯಾಣದಿಂದ ಮನೆ ಬಿಟ್ಟು ಮಡಿಕೇರಿಗೆ ಬಂದಿದ್ದ ಮಹಿಳೆ ಮತ್ತೆ ಮನೆ ಸೇರಿದ ಘಟನೆ ನಡೆದಿದೆ. ಹರಿಯಾಣ ಮೂಲದ ಮಹಿಳೆಯೊಬ್ಬರು ಮಡಿಕೇರಿಯ ತ್ಯಾಗರಾಜ ಕಾಲನಿಯಲ್ಲಿರುವ “ತಣಲ್” ಆಶ್ರಮದ ಪ್ರಯತ್ನದ ಫಲವಾಗಿ ಪತಿಯೊಂದಿಗೆ ತಮ್ಮೂರಿಗೆ ತೆರಳಿದ್ದಾರೆ.
ಯಾರು ಈ ಮಹಿಳೆ?
ಹೆಸರು ದರ್ಶಿನಿ.ಕಳೆದ ೪ ವರ್ಷಗಳಿಂದ ಮಡಿಕೇರಿಯ ‘ತಣಲ್’ ಆಶ್ರಮದಲ್ಲಿ ಆಶ್ರಯ ಪಡೆದು ಮಾನಸಿಕ ಸಮಸ್ಯೆಯಿಂದ ಚೇತರಿಸಿಕೊಂಡಿದ್ದಾರೆ.ಕಳೆದ ೩೨ ವರ್ಷಗಳ ಹಿಂದೆ ಇವರಿಗೆ ದಿಲ್ಲಿಯ ಲೆಹರ್ ಸಿಂಗ್ ಜತೆಗೆ ವಿವಾಹವಾಗಿತ್ತು.ಸಮಸ್ಯೆಗಳ ನಡುವೆ ದಿಲ್ಲಿಯಲ್ಲಿ ಐವರು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದರು.ಆದರೆ ೯ ವರ್ಷಗಳ ಹಿಂದೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಮನೆಯಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು.ಹೀಗಾಗಿ ಅವರನ್ನು ಕುಟುಂಬದವರು ಎಷ್ಟೇ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ.ಆನಂತರ ಎಲ್ಲಾದರೂ ಸತ್ತು ಹೋಗಿರಬಹುದೇನೋ ಎಂದು ಯೋಚಿಸಿದ್ದೂ ಇದೆ.ಆದರೆ ಅದೃಷ್ಟವಶಾತ್ ಮಹಿಳೆ ಬದುಕುಳಿದಿದ್ದು, ಇದೀಗ ಅವರು ಮನೆ ಸೇರಿರೋದು ಎಲ್ಲರು ಸಂತಸ ಪಟ್ಟಿದ್ದಾರೆ .ಐವರು ಮಕ್ಕಳಂತು ಅಮ್ಮ ಮನೆ ಸೇರಿರುವುದಕ್ಕೆ ಖುಷಿ ಪಟ್ಟಿದ್ದಾರೆ.
೨೦೧೮ರಲ್ಲಿ ಜುಲೈಯಲ್ಲಿ ಕುಶಾಲನಗರದಲ್ಲಿ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯನ್ನು ಕಂಡ ಪೊಲೀಸರು ತಣಲ್ ಆಶ್ರಮವನ್ನು ಸಂಪರ್ಕಿಸಿ ಆಶ್ರಯ ನೀಡುವಂತೆ ಮನವಿ ಮಾಡಿದ್ದರು.