ನ್ಯೂಸ್ ನಾಟೌಟ್ : ಹಣವನ್ನು ಡ್ರಾ ಮಾಡಬೇಕಾದರೆ ತಕ್ಷಣ ನೆನಪಿಗೆ ಬರುವುದು ATM . ಅದರಲ್ಲೂ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಇದ್ದರೆ ಮಾತ್ರ ಹಣವನ್ನು ಡ್ರಾ ಮಾಡಬಹುದು. ಆದರೆ ಇತ್ತೀಚಿಗೆ ತಂತ್ರಜ್ಞಾನಗಳ ಬಳಕೆ ಹೆಚ್ಚುತ್ತಿದ್ದು , ಇದೀಗ ಬರೀ ಯುಪಿಐ ಅಪ್ಲಿಕೇಶನ್ ಮೊಬೈಲ್ ಸ್ಕಾನ್ ನಿಂನ ಹಣವನ್ನು ಸುಲಭವಾಗಿ ಪಡೆಯಬಹುದಾಗಿದೆ.ಎಸ್ ಬಿ ಐ, ಎಚ್ ಡಿ ಎಫ್ ಸಿ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿದಂತೆ ಪ್ರಮುಖ ಬ್ಯಾಂಕ್ ಗಳು ಕಾರ್ಡ್ ರಹಿತ ಹಣವನ್ನು ಡ್ರಾ ಮಾಡಲು ಅವಕಾಶ ನೀಡಿದ್ದು, ಬರೀ UPI ಅ್ಯಪ್ ನ ಮೂಲಕ ಎಟಿಎಂ ನಿಂದ ಹಣವನ್ನು ಡ್ರಾ ಮಾಡಬಹುದಾಗಿದೆ.
UPI ಆ್ಯಪ್ ನ ಪ್ರಯೋಜನ :
ಈ ಸೌಲಭ್ಯಕ್ಕೆ ಯಾವುದೇ ರೀತಿ ಶುಲ್ಕವಿರುವುದಿಲ್ಲ. ಪ್ರಯಾಣದ ವೇಳೆ ಕಾರ್ಡ್ ಕೊಂಡೊಯ್ಯುವುದು ಮತ್ತು ಎಟಿಎಂ ಪಿನ್ ಸಂಖ್ಯೆ ನೆನಪಿಟ್ಟುಕೊಳ್ಳುವ ಅಗತ್ಯವಿಲ್ಲ. ಹಾಗೂ ತಪ್ಪಾದ ಪಿನ್ ಸಂಖ್ಯೆ ನಮೂದಿಸಿ ಟ್ರಾನ್ಸಾಕ್ಷನ್ ವಿಫಲವಾಗುವುದು,ಕಾರ್ಡ್ ಕಳೆದುಹೋದರೆ ಇನ್ನಿತರ ಹಲವು ಸಮಸ್ಯೆಗಳಿಗೆ ಇದು ಸಹಾಯಕವಾಗಿದೆ.
ಯುಪಿಐ ಮೂಲಕ ಹಣ ತೆಗೆಯುವುದು ಹೇಗೆ ?
- ಮೊದಲು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಗೂಗಲ್ ಪೇ, ಫೋನ್ ಪೇ , ಪೇಟಿಯಂ, ಅಮೆಜಾನ್ ಪೇ ಹೀಗೆ ಯಾವುದಾದರೂ ಒಂದು ಯಪಿಐ ಅಪ್ಲಿಕೇಶನ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಿ.
- ನಂತರ ನಿಮ್ಮ ಫೋನಿನಲ್ಲಿ ಇಂಟರ್ನೆಟ್ ಅನ್ನು ಸಕ್ರೀಯಗೊಳಿಸಿ.
- ಎಟಿಎಂ ಗೆ ಹೋಗಿ ಮತ್ತು ವಿತ್ ಡ್ರಾ ಕ್ಯಾಶ್ ಮೇಲೆ ಕ್ಲಿಕ್ ಮಾಡಬೇಕು. ಈಗ UPI ಆಯ್ಕೆ ಬರಲಿದೆ. ಇದನ್ನು ಕ್ಲಿಕ್ ಮಾಡಿದಾಗ, ಎಟಿಎಂ ಪರದೆಯ ಮೇಲೆ ಕ್ಯೂ ಆರ್ ಕೋಡ್ ಕಾಣಿಸಿಕೊಳ್ಳುತ್ತದೆ.
- ಈಗ ನಿಮ್ಮ ಫೋನ್ ನಲ್ಲಿ ಯಾವುದಾದರೂ ಒಂದು ಯುಪಿಐ ಅಪ್ಲಿಕೇಶನ್ ತೆರೆಯಿರಿ ಮತ್ತು ಕ್ಯೂ ಆರ್ ಕೋಡ್ ನ್ನು ಸ್ಕಾನ್ ಮಾಡಿ. UPI ಪಿನ್ ನನ್ನು ಕ್ಲಿಕ್ ಮಾಡಿ ಇದರ ನಂತರ ಎಟಿಎಂ ನಿಂದ ಹಣ ಪಡೆಯುವುದು ಸಾಧ್ಯವಾಗುತ್ತದೆ.
- ೫೦೦೦ ಕ್ಕಿಂತ ಹೆಚ್ಚು ಹಣವನ್ನು ಪೆಡೆಯಲು ಸಾಧ್ಯವಾಗುವುದಿಲ್ಲ ಎಂದು ನೆನಪಿರಲಿ..