ನ್ಯೂಸ್ ನಾಟೌಟ್ : ಚಹಾ ಅಂದರೆ ಕೆಲವರಿಗೆ ಪಂಚಪ್ರಾಣ. ಅದರಲ್ಲು ಬೆಳಗ್ಗೆ ಎದ್ದು ಚಹಾ ಕುಡಿದಿಲ್ಲವೆಂದರೆ ಆ ದಿನ ಏನೋ ಕಳೆದುಕೊಂಡ ಅನುಭವ.ಅಷ್ಟೊಂದು ಎನರ್ಜಿ ಬೂಸ್ಟರ್ ಈ ಟೀ.ಆದರೆ ಇದನ್ನು ಕುಡಿಯಲು ಇಷ್ಟ, ಆರೋಗ್ಯಕ್ಕೆ ಆಗಲ್ಲ ಎನ್ನುವವರು ಈ ವರದಿಯನ್ನು ಓದಿ.ಅದಕ್ಕೆ ಸೂಪರ್ ಟಿಪ್ಸ್ ಇಲ್ಲಿದೆ..
ಜಿಂಜರ್ ಟೀ:
ಚಹಾ ಮಾಡುವಾಗ ಅದಕ್ಕೆ ಒಂದು ತುಂಡು ಶುಂಠಿಯನ್ನು ಜಜ್ಜಿ ಸೇರಿಸಿದರೆ ಚಹಾದ ರುಚಿ ದುಪ್ಪಟ್ಟು ಆಗುವುದು . ಇದು ಆರೋಗ್ಯಕ್ಕೂ ಒಳ್ಳೆಯದು. ಶುಂಠಿ ಚಹಾ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಅನೇಕ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ಕಬ್ಬಿಣ, ವಿಟಮಿನ್, ಆ್ಯಂಟಿ ಆಕ್ಸಿಡೆಂಟ್ ಮತ್ತು ವಿಟಮಿನ್ ಸಿ ಮುಂತಾದ ಪೋಷಕಾಂಶಗಳು ಇರುತ್ತವೆ.
ರೋಗನಿರೋಧಕ ಶಕ್ತಿ ಹೆಚ್ಚಳ:
ಶುಂಠಿ ಚಹಾ ರೋಗನಿರೋಧಕ ಶಕ್ತಿ ಹೆಚ್ಚಿಸುವ ಗುಣ ಹೊಂದಿದೆ. ಶುಂಠಿಯಲ್ಲಿರುವ ಪೋಷಕಾಂಶಗಳು ರೋಗಗಳ ವಿರುದ್ಧ ಹೋರಾಡುತ್ತದೆ. ಸಾಂಕ್ರಾಮಿಕ ರೋಗಗಳನ್ನು ಗುಣಪಡಿಸಲು ಕೆಲಸ ಮಾಡುತ್ತದೆ. ಶುಂಠಿ ಚಹಾ ಕುಡಿಯುವುದರಿಂದ ನೆಗಡಿ, ಕೆಮ್ಮು ಮುಂತಾದ ಕಾಯಿಲೆಗಳಿಂದ ಪರಿಹಾರ ಸಿಗುತ್ತದೆ.
ರಕ್ತ ಪರಿಚಲನೆ :
ಚಳಿ ಹೆಚ್ಚಾದಾಗ ದೇಹದ ರಕ್ತ ಪರಿಚಲನೆಯ ಮೇಲೆ ಪರಿಣಾಮ ಬೀರುತ್ತದೆ. ಈ ಹೊತ್ತಿನಲ್ಲಿ ಶುಂಠಿ ಚಹಾವನ್ನು ಕುಡಿಯುವುದರಿಂದ ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ. ಶುಂಠಿಯಲ್ಲಿ ಮೆಗ್ನೀಸಿಯಮ್ ಮತ್ತು ಸತುವುಗಳಂತಹ ಖನಿಜಗಳಿದ್ದು, ರಕ್ತ ಪರಿಚಲನೆ ಸುಧಾರಿಸುತ್ತದೆ. ಇದರಿಂದ ಚಳಿಗಾಲದಲ್ಲಿ ಆರೋಗ್ಯ ಮಟ್ಟವನ್ನು ಸುಧಾರಿಸಬಹುದು.ಆಸ್ಪತ್ರೆಗೆ ಹೋಗುವುದನ್ನೇ ತಪ್ಪಿಸುವ ಗುಣ ಇದು ಹೊಂದಿದೆ.
ಆಯಾಸ ನಿವಾರಣೆ:
ಶುಂಠಿ ಚಹಾದಲ್ಲಿರುವ ಕೆಲವು ಅಂಶಗಳು ಆಯಾಸ ನಿವಾರಿಸಲು ಸಹಾಯ ಮಾಡುತ್ತದೆ. ಈ ಟೀ ಕುಡಿಯುವುದರಿಂದ ನರಗಳ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ತಲೆನೋವಿನಿಂದಲೂ ಪರಿಹಾರ ದೊರೆಯುತ್ತದೆ .