ನ್ಯೂಸ್ ನಾಟೌಟ್ : ಚಾಲಕನ ನಿಯಂತ್ರಣ ತಪ್ಪಿ ಮಾರುತಿ ಕಾರೊಂದು ರಸ್ತೆಯಲ್ಲಿ ಪಲ್ಟಿಯಾಗಿ ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.ರಸ್ತೆಯಿಂದ 15 ಅಡಿ ಆಳದಲ್ಲಿದ್ದ ಶಾಲಾ ಮೈದಾನಕ್ಕೆ ಕಾರು ಪಲ್ಟಿ ಹೊಡೆದಿದ್ದು, ಘಟನೆ ಇದೀಗ ಬೆಳಕಿಗೆ ಬಂದಿದೆ.
ಏನಿದು ಘಟನೆ?
ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಗಂದಾಡಿ ನಿವಾಸಿ ದಿವಾಕರ ಶೆಟ್ಟಿ (58ವ) ಮೃತ ದುರ್ದೈವಿ.ಮೂಡಬಿದಿರೆಯ ಕಡಂದಲೆ ಗ್ರಾಮದ ಜೋಡಿಕಟ್ಟೆ ಮುಕ್ಕಡಪ್ಪು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಿ ಬಿ. ರಸ್ತೆಯ ಬಳಿಯಲ್ಲಿ ಘಟನೆ ನಡೆದಿದೆ. ಈ ಬಗ್ಗೆ ಯಾರ ಗಮನಕ್ಕೂ ಬಂದಿರಲಿಲ್ಲ ಎನ್ನಲಾಗಿದೆ. ಇಂದು ಬೆಳಿಗ್ಗೆ ಅದೇ ರಸ್ತೆಯಲ್ಲಿ ನೆಲ್ಯಾಡಿಕೆಯ ಯೊಗೀಶ್ ಗೌಡ ಬೈಕಲ್ಲಿ ಹೋಗುತ್ತಿದ್ದಾಗ ಕಾರನ್ನು ಗಮನಿಸಿದ್ದು ತಕ್ಷಣ ಮೂಡುಬಿದಿರೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ಪಾಲಡ್ಕ ಪಂಚಾಯತ್ ಅಧ್ಯಕ್ಷ ದಿನೇಶ್ ಕಾಂಗ್ಲಾಯ್, ಹಾಲು ಒಕ್ಕೂಟದ ಜಿಲ್ಲಾಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ, ಗ್ರಾ.ಪಂಚಾಯತ್ ಉಪಾಧ್ಯಕ್ಷ ಸುಕೇಶ್ ಶೆಟ್ಟಿ, ಸದಸ್ಯರಾದ ಜಗದೀಶ್ ಕೋಟ್ಯಾನ್, ಅಮಿತಾ ನಾಗೇಶ್ ಪೂಜಾರಿ, ಕಾಂತಿ ಉದಯ ಶೆಟ್ಟಿ, ಸುರೇಶ್ ಪೂಜಾರಿ, ಸುಧೀರ್ ಶೆಟ್ಟಿ ಭೇಟಿ ನೀಡಿದ್ದರು.