ನ್ಯೂಸ್ ನಾಟೌಟ್ : ಅಡುಗೆ ಮಾಡುವಾಗ ಈರುಳ್ಳಿ ಬೇಕೆ ಬೇಕು.ಈರುಳ್ಳಿ ಹಾಕದಿದ್ದರೆ ಅಡುಗೆಗೆ ರುಚಿಯೇ ಇರುವುದಿಲ್ಲ ,ಈರುಳ್ಳಿಯಿಂದ ತಿಂಡಿ ಕೂಡ ತಯಾರಿಸುತ್ತಾರೆ.ಅದರಲ್ಲು ಈರುಳ್ಳಿ ಬಜೆಯಂತು ಎಲ್ಲರ ಫೇವರಿಟ್. ಆದರೆ ಈರುಳ್ಳಿಯಿಂದ ಏನೆಲ್ಲ ಪ್ರಯೋಜನವಿದೆ ಎಂದು ಗೊತ್ತಿದೆಯಾ?. ಹಾಗಾದರೆ ಈ ಈರುಳ್ಳಿ ಬಗೆಗಿನ ಅನುಕೂಲಗಳನ್ನು ತಿಳಿಯಿರಿ.
ಈರುಳ್ಳಿಯು ಮನುಷ್ಯನ ದೇಹಕ್ಕೆ ಬೇಕಾದ ಎಲ್ಲಾ ಬಗೆಯ ಪೌಷ್ಠಿಕಾಂಶಗಳು ನೀಡುತ್ತದೆ. ತಲೆ ಕೂದಲು , ಹೃದಯ ,ಉಗುರು , ಚರ್ಮ ಹೀಗೆ ಮನುಷ್ಯನ ದೇಹದ ಪ್ರತಿಯೊಂದು ಅಂಗಾಂಗಳಿಗೂ ಒಳ್ಳೆಯ ಪ್ರಯೋಜನ ದೊರಕುತ್ತದೆ ಎಂದು ಆರೋಗ್ಯ ವ್ಯೆದ್ಯರು ಹೇಳುತ್ತಾರೆ. ಈರುಳ್ಳಿಯಲ್ಲಿ ಪಾಲಿಫಿನಲ್ ಎಂಬ ಅಂಶಗಳು ಒಳಗೊಂಡಿದೆ. ಅದು ಆ್ಯಂಟಿ ಆಕ್ಸಿಡೆಂಟ್ ರೂಪದಲ್ಲಿ ನಮ್ಮ ದೇಹಕ್ಕೆ ಫ್ರೀ ರಾಡಿಕಲ್ ಅಂಶಗಳ ಮೂಲಕ ರಕ್ಷಣೆ ನೀಡುತ್ತದೆ. ಇದ್ದರಿಂದ ನಮ್ಮ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಜೀರ್ಣಶಕ್ತಿ ಒದಗಿಸುತ್ತದೆ:
- ಇದರಲ್ಲಿ ನಾರಿನ ಅಂಶ ಅಪಾರ ಪ್ರಮಾಣದಲ್ಲಿದೆ. ಇದು ಹೊಟ್ಟೆಗೆ ಸಂಬಂಧಪಟ್ಟ ಹಲವಾರು ಸಮಸ್ಯೆಗಳನ್ನು ಸರಿಪಡಿಸುತ್ತದೆ. ಅದರಲ್ಲಿ ಅಜೀರ್ಣ, ಮಲಬದ್ಧತೆ ನಿವಾರಿಸುತ್ತದೆ.
- ತಜ್ಞರಾದ ಲವ್ನೀತ್ ಬತ್ರ ಹೇಳುವ ಹಾಗೇ ಈರುಳ್ಳಿಯಲ್ಲಿ ಒಲಿಗೊಫ್ರೌಕ್ಟೊಸ್ (oligofructose ) ಎಂಬ ಕರಗುವ ನಾರಿನ ಅಂಶ ಇದ್ದು, ಇದು ಕರುಳಿನ ಭಾಗದಲ್ಲಿ ಉತ್ತಮ ಬ್ಯಾಕ್ಟೀರಿಯಾ ಬೆಳವಣಿಗೆಗೆ ಇದು ಸಹಕಾರಿ ಯಾಗುತ್ತದೆ ಮತ್ತು ಇದರಿಂದ ಜೀರ್ಣ ಶಕ್ತಿ ಕ್ರಮೇಣವಾಗಿ ಹೆಚ್ಚಾಗುತ್ತದೆ.
ಬ್ಲಡ್ ಶುಗರ್ ನಿರ್ವಹಣೆ:
- ಈರುಳ್ಳಿಯಲ್ಲಿ ಕಂಡುಬರುವ ಸಲ್ಫರ್ ಪ್ರಮಾಣ ದೇಹದ ಬ್ಲಡ್ ಶುಗರ್ ಮಟ್ಟವನ್ನು ನಿರ್ವಹಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
- ಇನ್ಸುಲಿನ್ ಉತ್ಪತ್ತಿಯಲ್ಲಿ ನೆರವಾಗುತ್ತದೆ. ಈರುಳ್ಳಿಯಲ್ಲಿ ಕಂಡುಬರುವ ಸಲ್ಫರ್, ಕ್ರೋಮಿಯಂ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಅದೇ ರೀತಿ ಇರುವಂತೆ ನಿರ್ವಹಿಸುತ್ತದೆ.
ತಲೆ ಕೂದಲಿಗೆ ಉಪಕಾರಿ:
- ಈರುಳ್ಳಿ ತಲೆ ಕೂದಲು ಸೊಂಪಾಗಿ ಬೆಳೆಯುವಂತೆ ನೋಡಿಕೊಳ್ಳುತ್ತದೆ. ಏಕೆಂದರೆ ಇದರಲ್ಲಿ ಪೊಲೇಟ್ ಎಂಬ ಸಣ್ಣ ಪ್ರಮಾಣದ ಪೌಷ್ಟಿಕ ಸತ್ವ ಇದ್ದು, ತಲೆ ಕೂದಲಿನ ಬೇರುಗಳಿಗೆ ಹಾಗೂ ಕಿರು ಚೀಲಗಳಿಗೆ ಇದರ ಅವಶ್ಯಕತೆಯಾಗುತ್ತದೆ.
- ಹಾಗಾಗಿ ಈರುಳ್ಳಿ ಪೇಸ್ಟ್ ಮಾಡಿ ತಲೆಗೆ ಹಚ್ಚುವುದರಿಂದ ತಲೆ ಕೂದಲಿಗೆ ಸಿಗಬೇಕಾದ ಪೌಷ್ಟಿಕಾಂಶ ಸಿಕ್ಕಂತಾಗುತ್ತದೆ ಮತ್ತು ಕೆರೆಟಿನ್ ಉತ್ಪತ್ತಿ ಹೆಚ್ಚಾಗುತ್ತದೆ.
ಹೃದಯಕ್ಕೆ ಉತ್ತಮ:
- ಪ್ರತಿ ದಿನ ಈರುಳ್ಳಿ ಸ್ವಲ್ಪ ಬೆಲ್ಲ ತಿನ್ನುವುದರಿಂದ ಹೃದಯ ಆರೋಗ್ಯಕರವಾಗಿರುತ್ತದೆ. ಮುಖ್ಯವಾಗಿ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟದಂತೆ ನೋಡಿಕೊಂಡು ಸರಾಗವಾದ ರಕ್ತ ಸಂಚಾರವನ್ನು ಈರುಳ್ಳಿ ಕೊಡುತ್ತದೆ.
- ದೇಹದ ಕೊಲೆಸ್ಟ್ರಾಲ್ ಮತ್ತು ಕೊಬ್ಬಿನ ಅಂಶವನ್ನು ಕರಗಿಸುವ ಕೆಲಸ ಮಾಡುತ್ತದೆ. ಹಾಗಾಗಿಯೇ ಹೃದಯದ ಮೇಲಿನ ಒತ್ತಡ ಕಡಿಮೆಯಾಗಿ ಆರೋಗ್ಯಕರವಾದ ಹೃದಯವಾಗುತ್ತದೆ.