ನ್ಯೂಸ್ ನಾಟೌಟ್: ಕಷ್ಟಕಾಲದಲ್ಲಿ ಕೈ ಹಿಡಿಯುವವರು ಎದುರು ನಿಂತಾಗ ಅವರಲ್ಲಿ ನಾವು ದೇವರನ್ನು ಕಾಣುತ್ತೇವೆ. ಅದೇ ರೀತಿ ವೈದ್ಯರು ರೋಗಿಗಳಿಗೆ ಪುನರ್ಜೀವ ಕೊಡಿಸುವ ದೇವರು ಎಂದು ಹೇಳುತ್ತಾರೆ. ಇಲ್ಲೊಂದು ಘಟನೆ ಇದಕ್ಕೆ ಸಾಕ್ಷಿಯಾಗಿದೆ.
ಏನಿದು ಘಟನೆ?
ವ್ಯಕ್ತಿಯೊಬ್ಬರು ಬೆಂಗಳೂರಿನ ಐಕಿಯಾ ಮಾಲ್ನಲ್ಲಿ ನಡೆದುಕೊಂಡು ಹೋಗುವ ವೇಳೆ ನಿಂತಲ್ಲೇ ಕುಸಿದು ಬೀಳುತ್ತಾರೆ. ತಕ್ಷಣ ಅಲ್ಲಿದ್ದ ವೈದ್ಯರೊಬ್ಬರು ವ್ಯಕ್ತಿಗೆ ಪುನರ್ಜೀವ ಕೊಟ್ಟಿದ್ದಾರೆ. ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಬಿದ್ದಿದ್ದ ವ್ಯಕ್ತಿಯ ಎದೆಯನ್ನು ವೈದ್ಯರು ಸುಮಾರು 10 ನಿಮಿಷಕ್ಕೂ ಹೆಚ್ಚು ಕಾಲ ಗಟ್ಟಿಯಾಗಿ ಒತ್ತಿದರು. ನಂತರ ವ್ಯಕ್ತಿಗೆ ಪ್ರಜ್ಞೆ ಬಂದಿದೆ. ಆ ವಿಡಿಯೊವನ್ನು ವೈದ್ಯರ ಮಗ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾನೆ. “ನನ್ನ ತಂದೆ ಒಂದು ಜೀವವನ್ನು ಉಳಿಸಿದರು. ಅಲ್ಲಿ ಯಾರೋ ಒಬ್ಬ ವ್ಯಕ್ತಿ ಕುಸಿದುಬಿದ್ದಿದ್ದರು, ಅವರ ನಾಡಿಮಿಡಿತ ನಿಂತು ಹೋಗಿತ್ತು. ಅಪ್ಪ 10 ನಿಮಿಷಕ್ಕೂ ಹೆಚ್ಚು ಕಾಲ ಅವರನ್ನು ಚಿಕಿತ್ಸೆಗೆ ಒಳಪಡಿಸಿ ಬದುಕಿಸಿದ್ದಾರೆ” ಎಂದು ರೋಹಿತ್ ಡಾಕ್ ಬರೆದುಕೊಂಡಿದ್ದಾರೆ. ಸದ್ಯ ಆ ವೈದ್ಯರಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ವೈದ್ಯೋ ನಾರಾಯಣ ಹರಿ ಎಂದು ಹೇಳುವುದು ಇದಕ್ಕೆಎಂದು ಕೆಲವರು ಕಮೆಂಟ್ನಲ್ಲಿ ತಿಳಿಸುತ್ತಿದ್ದಾರೆ. “ಉದಾತ್ತ ವೃತ್ತಿಯಿಂದ ಉದಾತ್ತ ಕಾರ್ಯದ ಮತ್ತೊಂದು ನೋಟ” ಎಂದು ಮತ್ತೊಬ್ಬರು ಬರೆದಿದ್ದಾರೆ.