ನ್ಯೂಸ್ ನಾಟೌಟ್ : ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತ ಸಂಭ್ರಮದ ಪ್ರಯುಕ್ತ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.ಸರಕಾರಿ ಉನ್ನತೀಕರಿಸಿದ ಹಿ.ಪ್ರಾ. ಶಾಲೆ ಸಂಪಾಜೆಯಲ್ಲಿ ಈ ಕಾರ್ಯಕ್ರಮ ನೆರವೇರಿತು.ಜ.೧,ಜ.೨ ಹಾಗೂ ಜ.೮ರಂದು ನಡೆಯಲಿರುವ ಕ್ರೀಡಾಕೂಟವನ್ನು ಸುಳ್ಯ ತಾಲೂಕು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವೀಣಾ ಎಂ.ಟಿ.ಉದ್ಘಾಟಿಸಿದರು.ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ವೀಣಾ ಸತೀಶ್ ಸೊಸೈಟಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಈ ಸೊಸೈಟಿ ಇನ್ನಷ್ಟು ಎತ್ತರಕ್ಕೆ ಬೆಳೆದು ನಿಲ್ಲಲಿ ಎಂದು ಹಾರೈಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸುಳ್ಯ ಕಾಲೇಜಿನ ಕೊಡಿಯಾಲು ಬೈಲು ಪ್ರಾಂಶುಪಾಲ ಸತೀಶ್ ಕೊಯಿಗಾಜೆ ಮಾತನಾಡಿ” ಅಭಿವೃದ್ದಿ ಕೆಲಸಕ್ಕೆ ಧನ ಸಹಾಯ ಮಾಡಿದ ಸಂಸ್ಥೆಗೆ ಧನ್ಯವಾದ. ಎಲ್ಲರ ಸಹಕಾರದಿಂದ ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಬೆಳೆದು ನಿಂತಿದೆ. ಶತಮಾನದ ವಿಜ್ರಂಭನೆ ಇನ್ನು ಶತ ಶತ ವರ್ಷ ಸಾಗಲಿ ಎಂದು ಹರಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸೋಮಶೇಖರ ಕೊಯಿಂಗಾಜೆ, “ಕ್ರೀಡಾ ಕೂಟವು ಅತ್ಯುತ್ತಮವಾಗಿ ಸಾಗಲಿ, ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳಿಗೆ ಅಭಿನಂದನೆ. ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಭಿವೃದ್ಧಿ ಹೊಂದುವಲ್ಲಿ ಎಲ್ಲರ ಸಹಕಾರ ಇರಲಿ ಎಂದು ವಿನಂತಿಸಿದರು.
ಈ ವೇಳೆ ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರೇಂದ್ರ ಕುಮಾರ್ ಜೈನ್, ಕ್ರೀಡಾ ಸಮಿತಿ ಸಂಚಾಲಕ ಜಗದೀಶ್ ಕೆ.ಪಿ.ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ ಸ್ವಾಗತಿಸಿ, ನಿರ್ದೇಶಕ ಜಗದೀಶ್ ರೈ.ಕೆ.ಆರ್.ವಂದಿಸಿದರು.ಇದಾದ ಬಳಿಕ ಕ್ರೀಡಾ ಸ್ಪರ್ಧೆ ಜರುಗಿತು. ಮೊದಲಿಗೆ ಗುಡ್ಡಗಾಡು ಓಟ, ಗುಂಡೆಸೆತ, ಹಗ್ಗಜಗ್ಗಾಟ ಸೇರಿದಂತೆ ಇತರ ಸ್ಪರ್ಧೆಗಳು ನಡೆದವು.