ನ್ಯೂಸ್ ನಾಟೌಟ್ : ಎರಡೂವರೆ ತಿಂಗಳ ಗರ್ಭಿಣಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮೇಗಳಪುರ ಗ್ರಾಮದಲ್ಲಿ ನಡೆದಿದೆ. ಹೆಚ್.ವೈ.ರಮ್ಯಾ (24) ಮೃತ ಮಹಿಳೆ. ಆಕೆಗೆ ೪ ವರ್ಷದ ಹೆಣ್ಣು ಮಗುವಿದ್ದು ಈಗ ಮತ್ತೆ ಗರ್ಭಿಣಿಯಾಗಿದ್ದಳು.
ಏನಿದು ಘಟನೆ?
ರಮ್ಯಾಳಿಗೆ 5 ವರ್ಷದ ಹಿಂದೆ ಮದುವೆಯಾಗಿತ್ತು.ಆಕೆ ಗಂಡನ ಹೆಸರು ಕುಮಾರ್. ಕುಮಾರ್ ಮನೆಯವರು ಕಳೆದ ಒಂದು ವರ್ಷದಿಂದ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಕೆಲ ತಿಂಗಳ ಹಿಂದೆಯಷ್ಟೇ ಕುಟುಂಬಸ್ಥರ ಕಾಟ ತಾಳಲಾರದೆ ತಂದೆ ಮನೆಯಿಂದ 4.5 ಲಕ್ಷ ರೂ. ತಂದುಕೊಟ್ಟಿದ್ದಳು. ಇಷ್ಟಾದರು ಹಣದ ವ್ಯಾಮೋಹ ಕಡಿಮೆಯಾಗದೆ ಮತ್ತೆ ಬೇಡಿಕೆ ಇಟ್ಟಿದ್ದರು.
೪ ವರ್ಷದ ಕಂದಮ್ಮ ಅನಾಥ:
ವರದಕ್ಷಿಣೆ ವಿಚಾರಕ್ಕೆ ಕುಮಾರ್ ಕುಟುಂಬಸ್ಥರು ಆಗಾಗ ಜಗಳ ತೆಗೆದು ರಮ್ಯಾಗೆ ಕಿರುಕುಳ ನೀಡುತ್ತಿದ್ದರಂತೆ. ನಿನ್ನೆ ಗಂಡ ಹಾಗೂ ಆತನ ಮನೆಯವರೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇನ್ನೂ ರಮ್ಯ ಆತ್ಮಹತ್ಯೆ ಮಾಡಿಕೊಂಡಿಲ್ಲ ಗಂಡ ಹಾಗೂ ಆತನ ಕುಟುಂಬಸ್ಥರು ಕೊಲೆಗೈದು ನೇಣುಹಾಕಿದ್ದಾರೆಂದು ರಮ್ಯಾ ತಂದೆ ಯೋಗೇಶ್ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಕೊಲೆಯೋ , ಆತ್ಮಹತ್ಯೆಯೋ ವರದಕ್ಷಿಗಾಗಿ ಮುಗ್ದ ಜೀವ ಬಲಿಯಾಗಿದ್ದು, ತಾಯಿ ಆರೈಕೆಯಲ್ಲಿ ಬೆಳಿಬೇಕಾಗಿದ್ದ ೪ ವರ್ಷದ ಮುದ್ದು ಕಂದಮ್ಮ ಅಮ್ಮನಿಲ್ಲದೇ ಅನಾಥವಾಗಿದೆ.