ನ್ಯೂಸ್ ನಾಟೌಟ್ : ಕಳೆದ ೯ ತಿಂಗಳಿನಿಂದ ವಾಹನವನ್ನು ಬಾಡಿಗೆಗೆಂದು ಪಡೆದು ಪರಾರಿಯಾದ ಘಟನೆ ಸುಳ್ಯದ ಅಜ್ಜಾವರದಲ್ಲಿ ನಡೆದಿದೆ.ವಾಹನ ಖರೀದಿಸಲು ವ್ಯಕ್ತಿ ಸಾಲ ಮಾಡಿದ್ದು,ಅದರ ಕಂತು ಕಟ್ಟಲಾಗದೇ ಇದ್ದ ಸಂದರ್ಭದಲ್ಲಿ ಬಾಡಿಗೆಗಾಗಿ ಅವರ ವಾಹನ ನೀಡಿದ್ದರು.ಇದೀಗ ಇತ್ತ ಬಾಡಿಗೆಯೂ ಇಲ್ಲ, ಅತ್ತ ಬ್ಯಾಂಕ್ ಸಾಲ ಇವೆರಡರ ಮಧ್ಯೆ ಸಿಲುಕಿ ಹೊರಬರಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವ್ಯಕ್ತಿ ಅಳಲು ತೋಡಿಕೊಂಡಿದ್ದಾರೆ.
ಏನಿದು ಘಟನೆ?
ಸುಳ್ಯದ ಅಜ್ಜಾವರ ನಿವಾಸಿ ವಾಹನ ಮಾಲೀಕ ಪಿ. ಎಮ್ .ಶರೀಫ್ ಕಳೆದ ವರ್ಷ ವಾಹನವೊಂದನ್ನು ಖರೀದಿಸಿದ್ದರು. ಕಂತು ಕಟ್ಟಲಾಗದೆ ಬಾಡಿಗೆಗೆ ಕೊಡಲು ನಿರ್ಧರಿಸಿದರು. ಈ ವೇಳೆ ಕೆ ಎ .೨೧ .ಎ. ೯೫೬೯ ಅಶೋಕ್ ಲೇಲ್ಯಾಂಡ್ ವಾಹನವನ್ನು ಬಾಡಿಗೆಗೆಂದು ಸೋಮಶೇಖರ ಶಾಂತಿನಗರ,ಸುರಹೊಣೆ ದಾವಣೆಗೆರೆ , ಸಚಿನ್ ಕೋಳಿ ಎನ್ .ಟಿ. ಎಸ್ ಟೌನ್, ಭಾರತಿ ಶಿವಮೊಗ್ಗ ಇವರಿಗೆ ನೀಡಿದ್ದರು. ವಾಹನಕ್ಕೆ ಸಂಬಂಧಿಸಿದ ಎಗ್ರಿಮೆಂಟ್ಸ್ ದಾಖಲೆಗಳನ್ನು ಫೆಬ್ರವರಿ ತಿಂಗಳಲ್ಲಿ ಮಾಡಲಾಗಿದ್ದು. ಇದೀಗ ಕಾಲ್ ಮಾಡಿದರೂ ಪೋನ್ ತೆಗಿಯುತ್ತಿಲ್ಲ.ಎಷ್ಟು ಬಾರಿ ಪ್ರಯತ್ನಿಸಿದರೂ ಫೋನ್ ಸ್ವಿಚ್ ಆಫ್ ಬರುತ್ತಿದೆ ಎಂದು ಪಿ.ಎಮ್.ಶರೀಫ್ ಅವರು ಆರೋಪಿಸಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಅವರು ಹೇಳಿದ್ದಾರೆ.