ನ್ಯೂಸ್ ನಾಟೌಟ್: ಪ್ರಧಾನಿ ನರೇಂದ್ರ ಮೋದಿ ಸಿಂಪಲ್ ಅನ್ನುವುದನ್ನು ಹಲವು ಬಾರಿ ತೋರಿಸಿಕೊಟ್ಟಿದ್ದಾರೆ. ಜಾಗತಿಕ ಮಟ್ಟದಲ್ಲಿ ಸಮಾವೇಶಗಳಲ್ಲಿ ಭಾರತದ ಪ್ರಧಾನಿ ಹೇಗಿರಬೇಕೋ ಹಾಗೆ ಮೋದಿ ಡ್ರೆಸ್ಗಳಿವೆ. ಟೀಕೆಗಳ ನಡುವೆಯೂ ಮೋದಿ ತಮ್ಮ ವಿಶೇಷವಾದ ನಡವಳಿಕೆಯಿಂದ ಹಲವು ಸಲ ಜನ ಸಾಮಾನ್ಯರ ಮನ ಗೆದ್ದಿದ್ದಾರೆ. ಇದೀಗ ತಾಯಿಯ ಸಾವಿನ ನೋವಿನ ನಡುವೆಯೂ ಅವರು ಅಂತ್ಯಕ್ರಿಯೆಯನ್ನು ತುರ್ತಾಗಿ, ಸರಳವಾಗಿ ಮಾಡಿ ಮುಗಿಸಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಮೋದಿಯ ಸಿಂಪಲ್ ಲೈಫ್ ಬಗ್ಗೆ ಚರ್ಚೆ ಜೋರಾಗಿದೆ.
ಶುಕ್ರವಾರ ಬೆಳಗ್ಗೆ 6 ಗಂಟೆ ಹೊತ್ತಿಗೆ ಮೋದಿಗೆ ಅವರ ತಾಯಿ ನಿಧನರಾದ ವಿಷಯ ಗೊತ್ತಾಗಿದೆ. ಇದಾಗಿ ಕೇವಲ ಮೂರೂವರೆ ಗಂಟೆಗಳಲ್ಲಿ ಅಂತಿಮ ವಿಧಿ-ವಿಧಾನ ಕಾರ್ಯಕ್ರಮಗಳು ಮುಗಿದು ಬಿಟ್ಟಿವೆ. ದೇಶದ ಜನಪ್ರಿಯ ಪ್ರಧಾನಿಯೊಬ್ಬರ ತಾಯಿಯ ಅಂತ್ಯಕ್ರಿಯೆ ಯಾವುದೇ ಪ್ರಚಾರ, ಆಡಂಬರವಿಲ್ಲದೆ ಮುಗಿದು ಹೋಗಿದ್ದು ವಿಶೇಷವಾಗಿದೆ.
ಮೋದಿ ಸಿಂಪಲ್ ಎನ್ನುವುದಕ್ಕೆ ನವ ಕಾರಣ
- ಬೆಳ್ಳಗ್ಗಿನಿಂದ ಸಂಜೆವರೆಗಿನ ಮಾಧ್ಯಮಗಳ ಲೈವ್ ಇಲ್ಲ
- ದೊಡ್ಡ ದೊಡ್ಡ ವ್ಯಕ್ತಿಗಳ ಭೇಟಿಗೆ ಅವಕಾಶ ಇಲ್ಲ
- ದೊಡ್ಡ ಮಟ್ಟದಲ್ಲಿ ಶವಯಾತ್ರೆಗೆ ವ್ಯವಸ್ಥೆ ಇಲ್ಲ
- ರಸ್ತೆ ಹೆದ್ದಾರಿಗಳ ಟ್ರಾಫಿಕ್ ಜಾಮ್ ಇಲ್ಲ
- ಸಾರ್ವಜನಿಕ ದರ್ಶನಕ್ಕಾಗಿ ವ್ಯವಸ್ಥೆ ಇಲ್ಲ
- ಮಗನ ಅಭಿಮಾನಿಗಳ ಘೋಷಣೆಗಳ ಕೂಗಿಲ್ಲ
- ಅಂತ್ಯಸಂಸ್ಕಾರಕ್ಕಾಗಿ ಎಕರೆಗಟ್ಟಲೆ ಜಾಗದ ನೆಲಸಮ ಇಲ್ಲ
- ಶವದ ಮೇಲೆ ರಾಷ್ಟ್ರಧ್ವಜದ ಹೊದಿಕೆ ಇಲ್ಲ
- ಅಗ್ನಿಸ್ಪರ್ಶಕ್ಕೆ ಶ್ರೀಗಂಧದ ಕಟ್ಟಿಗೆಗಳಿಲ್ಲ
ಮೇಲಿನ ಎಲ್ಲ ಕಾರಣದಿಂದ ಪ್ರಧಾನಿ ಮೋದಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ನಡೆದುಕೊಂಡಿದ್ದಾರೆ. ನೋವಿನ ನಡುವೆಯೂ ಒಬ್ಬ ವಿವಿಐಪಿ ಹೀಗೆ ನಡೆದುಕೊಂಡಿರುವುದಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.