ನ್ಯೂಟ್ ನಾಟೌಟ್ : ಪ್ರೀತಿ ಇರಬೇಕು. ಆದರೆ ಹುಚ್ಚು ಪ್ರೀತಿ ಇರಬಾರದು. ಇದು ಅತಿಯಾದರೆ ಪ್ರಾಣಕ್ಕು ಕಂಟಕವಾಗಬಹುದು ಅನ್ನೊದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.ನಾವು ಈ ಮಾತನ್ನು ಯಾಕೆ ಹೇಳ್ತಾ ಇದ್ದೀವಿ ಅಂದರೆ, ಹಾಡಹಗಲೇ ಯುವಕನೊಬ್ಬ ಅಸಭ್ಯ ರೀತಿಯಲ್ಲಿ ಬೈಕ್ ಟ್ಯಾಂಕ್ ಮೇಲೆ ಯುವತಿಯನ್ನು ಕೂರಿಸಿ ಕರೆದುಕೊಂಡು ಹೋಗಿರುವ ವಿಡಿಯೋ ಲೀಕ್ ಆಗಿದ್ದು,ಈ ಪಾಗಲ್ ಪ್ರೇಮಿಯ ವಿಡಿಯೋ ವೈರಲ್ ಆಗಿದೆ.ಈತನ ಈ ವರ್ತನೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.
ಏನಿದು ಘಟನೆ?
ಯುವಕನೊಬ್ಬ ತನ್ನ ಪ್ರಿಯತಮೆಯನ್ನು ಬೈಕ್ ನ ಟ್ಯಾಂಕ್ ಮೇಲೆ ಕೂರಿಸಿ ತಮ್ಮಿಬ್ಬರ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.ಈ ಘಟನೆ ನಡೆದಿದ್ದು, ಆಂಧ್ರ ಪ್ರದೇಶದ ವಿಶಾಖಪಟ್ಟಣಂನ ಪ್ರಧಾನ ಮಂತ್ರಿ ರಸ್ತೆಯಲ್ಲಿ.ಈತನ ಅಸಭ್ಯ ವರ್ತನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಹಿಗ್ಗಾ ಮುಗ್ಗ ಬೈಯಲಾರಂಭಿಸಿದ್ದಾರೆ.ನೋಡುಗರಿಗೆ ಮುಜುಗರವನ್ನುಂಟು ಮಾಡುತ್ತಿದೆ ಈ ದೃಶ್ಯ.
ಬೈಕ್ ನಲ್ಲಿ ಪ್ರೇಮಿಗಳ ಸರಸಲೀಲೆಯನ್ನು ಕಂಡ ಕಾರಿನಲ್ಲಿ ಹಾದುಹೋಗುವ ಜನರು ವಿಡಿಯೋ ಚಿತ್ರೀಕರಿಸಿದ್ದಾರೆ. ಅಷ್ಟೇ ಅಲ್ಲದೇ ಈ ಘಟನೆ ನಡೆದ ಎರಡೇ ಗಂಟೆಗಳಲ್ಲಿ ಸ್ಟೀಲ್ ಪ್ಲಾಂಟ್ ಪೊಲೀಸರು ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಯುವಕ ಮತ್ತು ಯುವತಿಯನ್ನು ವಶಕ್ಕೆ ಪಡೆದಿದ್ದಾರೆ. ಅವರಿಬ್ಬರ ವಿರುದ್ಧ ಪ್ರಕರಣ ದಾಖಲಾಗಿದ್ದು, ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.