ನ್ಯೂಸ್ ನಾಟೌಟ್: ವಿಶ್ವದಲ್ಲಿ ಲಕ್ಷಾಂತರ ಟ್ವಿಟರ್ ಬಳಕೆದಾರರು ಎಲಾನ್ ಮಸ್ಕ್ ಅವರ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಡೌನ್ ಆಗಿದೆ ಎಂದು ದೂರು ವರದಿಯಾಗಿದೆ. ಟ್ವಿಟರ್ ಖರೀದಿಸಿದ ನಂತರ ಒಂದಲ್ಲ ಒಂದು ನೆಗೆಟಿವ್ ಚರ್ಚೆಗಳು ನಡೆಯುತ್ತಲೇ ಇದೆ. ಬುಧವಾರ ಸಂಜೆಯಿಂದಲೇ ಟ್ವಿಟರ್ ಸರ್ವರ್ ಸಂಪೂರ್ಣ ಡೌನ್ ಆಗಿದೆ ಜನರು ದೂರಿದ್ದಾರೆ.
ಟ್ವಿಟರ್ ಬಳಸುವ ಲಕ್ಷಾಂತರ ಜನರು ದೂರು ನೀಡಿದ್ದು, ಬೆಳಗ್ಗೆ 7 ಗಂಟೆಯೊಳಗೆ 8700ಕ್ಕೂ ಅಧಿಕ ಮಂದಿ ಕಂಪ್ಲೆಂಟ್ ರೈಸ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ಸಮಸ್ಯೆ ಕೇವಲ ಭಾರತ ಮಾತ್ರವಲ್ಲ, ಅಮೇರಿಕ ಸೇರಿದಂತೆ ಬಹುತೇಕ ರಾಷ್ಟ್ರಗಳಲ್ಲಿ ಇದೇ ರೀತಿಯ ಸಮಸ್ಯೆ ಆಗಿದೆ ಎಂದು ವರದಿಯಾಗಿದೆ.ಇಂಡಿಪೆಂಡೆಂಟ್ ಪ್ರತಿಕ್ರಿಯೆಗಾಗಿ ಟ್ವಿಟ್ಟರ್ ಅನ್ನು ಸಂಪರ್ಕಿಸಿದೆ. ಆದರೆ ಕಂಪನಿಯು ತನ್ನ ಸಂವಹನ ತಂಡವನ್ನು ಸಾಮೂಹಿಕ ಕೆಲಸದಿಂದ ತೆಗೆದುಹಾಕಿದೆ ಎಂದು ವರದಿಯಾಗಿದೆ.