ನ್ಯೂಸ್ ನಾಟೌಟ್ : ಕುಕ್ಕರ್ ಬಾಂಬ್ ಸಿಡಿದ ಬೆನ್ನಲ್ಲೇ ಉಗ್ರ ಶಾರಿಕ್ನ ಕರಾಳ ಮುಖಗಳು ಬಯಲಾಗಿದ್ದವು. ಈ ಬೆನ್ನಲ್ಲೇ ಇಂತಹ ಉಗ್ರರು ಕೊಡಗು, ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದ ಹಲವು ಕಾಫಿ ತೋಟಗಳಲ್ಲಿ, ಹೋಟೆಲ್ಗಳಲ್ಲಿ ಅಡಗಿಕೊಂಡಿರುವ ಸಾಧ್ಯತೆ ಇದೆ ಅನ್ನುವ ಬಗ್ಗೆ ನವೆಂಬರ್ ೨೬ರಂದು ನ್ಯೂಸ್ ನಾಟೌಟ್ ವೆಬ್ ಮಾಧ್ಯಮದಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಈ ವರದಿ ಫಲ ನೀಡಿದೆ. ಇದೀಗ ಕೊಡಗು ಪೊಲೀಸರು ಅಕ್ರಮ ಬಾಂಗ್ಲಾ ವಲಸಿಗರು ಮತ್ತು ಉಗ್ರ ಚಟುವಟಿಕೆಯಲ್ಲಿ ನೇರ ಅಥವಾ ಪರೋಕ್ಷವಾಗಿ ಭಾಗಿಯಾಗಿರುವ ವ್ಯಕ್ತಿಗಳ ಹುಡುಕಾಟಕ್ಕೆ ಮುಂದಾಗಿದೆ ಎಂದು ತಿಳಿದು ಬಂದಿದೆ.
ನಕಲಿ ಆಧಾರ್ ಕಾರ್ಡ್ , ಓಟರ್ ಕಾರ್ಡ್ ಮಾಡಿಸಿಕೊಂಡು ಕೊಡಗಿನ ಹಲವು ಕಡೆ ಅಸ್ಸಾಂನವರೆಂದು ಹೇಳಿಕೊಂಡು ಬಾಂಗ್ಲಾದಿಂದ ಬಂದವರು ಕಾಫಿ ತೋಟಗಳಲ್ಲಿ ಅಡಗಿ ಕುಳಿತಿದ್ದಾರೆ ಎನ್ನುವ ದೂರುಗಳು ಕೇಳಿ ಬಂದಿದ್ದವು. ಕೆಲವು ಕಾಫಿ ತೋಟಗಳು ಪೇಟೆಯಿಂದ ತುಂಬಾ ದೂರವಿದ್ದು ಅಲ್ಲಿ ಅಪರಿಚಿತ ವ್ಯಕ್ತಿಗಳ ಚಟುವಟಿಕೆ ನಿಗೂಢವಾಗಿದೆ ಅನ್ನುವ ಅಭಿಪ್ರಾಯಗಳೂ ಕೂಡ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದ್ದವು. ಇದೀಗ ಕೊಡಗು ಪೊಲೀಸ್ ದಿಟ್ಟ ಕ್ರಮಕ್ಕೆ ಮುಂದಾಗಿದೆ. ಅಪರಿಚಿತರ ಗುರುತು ಪತ್ತೆಗೆ ಮುಂದಾಗಿದೆ. ಅಸ್ಸಾಂ, ಮಣಿಪುರದಿಂದ ಕೆಲಸಕ್ಕೆಂದು ಬಂದವರ ಗುರುತಿನ ಕಾರ್ಡ್ ಅನ್ನು ಬಿಡದೆ ಪರಿಶೀಲಿಸಲಾಗುತ್ತಿದೆ. ಅನುಮಾನ ಬಂದವರನ್ನು ಹಿಡಿದು ತನಿಖೆ ನಡೆಸುವ ಕೆಲಸಗಳು ಕೂಡ ಚುರುಕಿನಿಂದ ಸಾಗುತ್ತಿದೆ ಎಂದು ನ್ಯೂಸ್ ನಾಟೌಟ್ ಗೆ ಉನ್ನತ ಮೂಲಗಳು ತಿಳಿಸಿವೆ.
ನವೆಂಬರ್ 26 ರಂದು ನ್ಯೂಸ್ ನಾಟೌಟ್ ನಲ್ಲಿ ಪ್ರಕಟವಾಗಿದ್ದ ವರದಿ ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..
ಕೊಡಗಿನ ಕಾಫೀ ತೋಟಗಳಲ್ಲಿ ಹಾಗೂ ದಕ್ಷಿಣ ಕನ್ನಡದ ಕೆಲವು ಎಸ್ಟೇಟ್ಗಳಲ್ಲಿ ಹೊರ ರಾಜ್ಯದಿಂದ ಕೂಲಿ ಕೆಲಸಕ್ಕೆಂದು ಬಂದವರು ಅನೇಕರು. ಇವರು ಯಾರು? ಕುಲ ಗೋತ್ರ ಗೊತ್ತಿಲ್ಲ. ಯಾರು ಕೇಳಿಯೂ ಇಲ್ಲ. ಕೇಳಲೂ ಹೋದಾಗ ಕೈಗೂ ಸಿಗುವುದಿಲ್ಲ. ತಲೆಮರೆಸಿಕೊಂಡು ತಿರುಗುತ್ತಿರುವ ಇಂತಹವರ ಬಗ್ಗೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಡಬೇಕಿದೆ. ನಕಲಿ ದಾಖಲೆ ಸೃಷ್ಟಿಸಿಕೊಂಡು ಎಸ್ಟೇಟ್ಗಳಲ್ಲಿ ಆರಾಮವಾಗಿರುವ ಇವರ ಹಿನ್ನೆಲೆ ಏನು? ಅನ್ನುವುದನ್ನು ತುರ್ತಾಗಿ ತಿಳಿಯಬೇಕಿದೆ ಎಂದು ನ್ಯೂಸ್ ನಾಟೌಟ್ ವರದಿ ಮಾಡಿತ್ತು. ಅಲ್ಲದೆ ಜನರು ಪೊಲೀಸ್ ಇಲಾಖೆಗೆ ಪೂರ್ಣ ಸಹಕಾರ ನೀಡಬೇಕೆಂದು ತಿಳಿಸಿತ್ತು.