ಸುಳ್ಯ : ಬಿಜೆಪಿ ಜನಾಶೀರ್ವಾದ ಯಾತ್ರೆ ಕೊರೊನಾ ಹರಡುವ ಯಾತ್ರೆ ಆಗದಿರಲಿ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ವೆಂಕಪ್ಪ ಗೌಡ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಮೊದಲು ದೇಶ, ರಾಜ್ಯದಲ್ಲಿ ಕೊವಿಡ್ ಮಹಾಮಾರಿ ಒಂದಷ್ಟು ಕಡಿಮೆ ಪ್ರಮಾಣಕ್ಕೆ ಇಳಿದಾಗ ದೇಶಾದ್ಯಂತ ಚುನಾವಣೆಯನ್ನು ಘೋಷಣೆ ಮಾಡಿ ಬಿಜೆಪಿಯ ಗ್ರಾಮ ಮಟ್ಟದ ನಾಯಕರಿಂದ ಹಿಡಿದು ಮೋದಿಜಿ ಯವರೆಗೆ ಎಗ್ಗಿಲ್ಲದೆ ಪಶ್ಚಿಮ ಬಂಗಾಳ , ಕೇರಳ , ತಮಿಳುನಾಡು , ಪುಧಿಚೇರಿ , ಕರ್ನಾಟಕ ಹಾಗು ಇನ್ನಿತರ ರಾಜ್ಯಗಳ ಚುನಾವಣೆಯ ಬೃಹತ್ ಸಭೆಗಳನ್ನು ನಡೆಸಿ , ಕೊರೊನಾ ರೋಗ ವ್ಯಾಪಕವಾಗಿ ಹರಡಲು ಕಾರಣವಾಗಿತ್ತು. ದಿನವೊಂದಕ್ಕೆ 4 ಲಕ್ಷಕ್ಕಿಂತಲೂ ಅಧಿಕ ಸೋಂಕಿತರು ಮತ್ತು 3 ಸಾವಿರಕ್ಕಿಂತ ಅಧಿಕ ಮಂದಿ ಕಾಯಿಲೆಗೆ ಮೃತರಾಗಿರುವಂತದ್ದು ಈಗ ನಮ್ಮ ದೇಶದ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ . ಇದೀಗ ಕೊರೊನಾ ಮಹಾಮಾರಿ ನಮ್ಮ ರಾಜ್ಯದಲ್ಲಿ ಕೊಂಚ ಇಳಿಮುಖಗೊಂಡಿರುವುದು ಜನ ಸಾಮಾನ್ಯರ ಮನಸ್ಸಿನಲ್ಲಿ ಒಂದಿಷ್ಟು ಧೈರ್ಯವನ್ನು ತಂದುಕೊಳ್ಳುವಂತಾಗಿದೆ . ಆದರೆ , ಕೇಂದ್ರ ಸರಕಾರದ ನಾಲ್ಕು ಮಂತ್ರಿಗಳು ಮೋದಿಯವರ ಸೂಚನೆಯ ಮೇರೆಗೆ ಕರ್ನಾಟಕದ 4 ದಿಕ್ಕುಗಳಿಂದ ಜನಾಶೀರ್ವಾದ ಕಾರ್ಯಕ್ರಮದ ಯಾತ್ರೆ ಯನ್ನು ಈ ದೇಶ ಮತ್ತು ರಾಜ್ಯದ ಜನರು ಹಸಿವು , ರೋಗ , ಪ್ರವಾಹ , ಬೆಲೆಯೇರಿಕೆಯಿಂದ ನರಳುತ್ತಿರುವ ಸಂದರ್ಭದಲ್ಲಿ ಕೈಗೊಂಡು ಅಲ್ಲಲ್ಲಿ ಸಾವಿರಾರು ಜನರನ್ನು ಸೇರಿಸಿ ಕೊವಿಡ್ 19 ರ ನಿಯಮವನ್ನು ಉಲ್ಲಂಘಿಸಿ ಲಂಗು ಲಗಾಮಿಲ್ಲದೆ ಅವರ ಕಾರ್ಯಕ್ರಮದ ಪ್ರಚಾರ ಭಾಷಣಗಳನ್ನು ಮಾಡುತ್ತಿರುವುದು ತೀರ ಕಳವಳಕಾರಿಯಾದ ಸಂಗತಿಯಾಗಿರುತ್ತದೆ. ಇದು ಜನಾಕ್ರೋಶಕ್ಕೆ ಕಾರಣವಾಗಿರುತ್ತದೆ ಎಂದು ತಿಳಿಸಿದ್ದಾರೆ.
- +91 73497 60202
- [email protected]
- November 25, 2024 6:13 PM