ನ್ಯೂಸ್ ನಾಟೌಟ್ : ಯುವ ಬರಹಗಾರರಿಗೆ ಕೇಂದ್ರ ಸರ್ಕಾರ ಹೊಸದೊಂದು ಯೋಜನೆ ಜಾರಿಗೆ ಮಾಡಿದೆ. ಬರಹಗಾರರು ವಿವಿಧ ವಿಷಯಗಳ ಕುರಿತು ಬರಹ ಬರೆಯಲು ಅವಕಾಶವಿದೆ. ಇದರಲ್ಲಿ ಆಯ್ಕೆಯಾದ ಬರಹಗಾರರಿಗೆ ವಿದ್ಯಾರ್ಥಿ ವೇತನ ಸಿಗಲಿದೆ. ಇದಕ್ಕೆ ಜ.15ರೊಳಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹಾಗಿದ್ರೆ ಇನ್ಯಾಕೆ ತಡ ತಕ್ಷಣವೇ ಅರ್ಜಿ ಸಲ್ಲಿಸಿ.
ಕೇಂದ್ರ ಸರ್ಕಾರವು ಯುವಕರಿಗಾಗಿ ‘ಪಿಎಂ ಯುವ 2.0 ಯೋಜನೆ’ ಆರಂಭಿಸಿದೆ. ಈ ಯೋಜನೆಯ ಅಡಿಯಲ್ಲಿ ಯುವ ಬರಹಗಾರರಿಗೆ ಅವಕಾಶ ನೀಡುವ ಉದ್ದೇಶದಿಂದ ಇದರಲ್ಲಿ ವಿವಿಧ ವಿಷಯಗಳ ಕುರಿತು ಬರೆಯುವ ಅವಕಾಶ ನೀಡಲಾಗುತ್ತಿದೆ. ಈ ಯೋಜನೆಯಲ್ಲಿ ಆಯ್ಕೆಯಾಗುವ ಯುವ ಬರಹಗಾರರಿಗೆ ಪ್ರತಿ ತಿಂಗಳು 50,000 ರೂ.ಗಳನ್ನು ವಿದ್ಯಾರ್ಥಿ ವೇತನವಾಗಿ ನೀಡಲಾಗುವುದು ಎಂದು ತಿಳಿಸಿದೆ.
ಯಾರೆಲ್ಲ ಭಾಗವಹಿಸಬಹುದು?
ಯೋಜನೆಯಡಿಯಲ್ಲಿ, 30 ವರ್ಷದೊಳಗಿನ ಯುವಕರು ಭಾಗವಹಿಸಬಹುದು. ಭಾರತೀಯ ಭಾಷೆ ಮತ್ತು ಇಂಗ್ಲಿಷ್ ನಲ್ಲಿ ಯುವ ಮತ್ತು ಹೊಸ ಬರಹಗಾರರ ಭಾಗವಹಿಸುವಿಕೆಯನ್ನು ಗಮನದಲ್ಲಿಡಲಾಗಿದೆ. ಇದಕ್ಕಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಪ್ರಧಾನಮಂತ್ರಿ ಯುವ ಯೋಜನೆಯ ಮೊದಲ ಭಾಗಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ದೇಶದಲ್ಲಿ ಓದುವ ಮತ್ತು ಬರೆಯುವ ಮತ್ತು ಪುಸ್ತಕ ಸಂಸ್ಕೃತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ.
75 ಬರಹಗಾರರ ಆಯ್ಕೆ
ಈ ಯೋಜನೆಯಡಿಯಲ್ಲಿ ದೇಶದಾದ್ಯಂತ ಒಟ್ಟು 75 ಬರಹಗಾರರನ್ನು ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ (NBT) ಆಯ್ಕೆ ಮಾಡುತ್ತದೆ. ತರಬೇತಿ ಮತ್ತು ಮಾರ್ಗದರ್ಶನದ ಕೊನೆಯಲ್ಲಿ ಪ್ರತಿ ತಿಂಗಳಿಗೆ 50,000 ರೂ. ಶಿಷ್ಯವೇತನದಂತೆ ಆರು ತಿಂಗಳಿಗೆ ಪ್ರತಿ ಯುವ ಬರಹಗಾರರಿಗೆ 3 ಲಕ್ಷ ರೂ. ನೀಡಲಾಗುವುದು ಎಂದು ತಿಳಿಸಿದೆ.
ಯಾವೆಲ್ಲ ಭಾಷೆಗಳಲ್ಲಿ ಅರ್ಜಿ ಸಲ್ಲಿಸಬಹುದು?
22 ವಿವಿಧ ಭಾಷೆಗಳನ್ನು ಬಲ್ಲವರು ‘PM ಯುವ 2.0 ಯೋಜನೆ’ಯಲ್ಲಿ ಭಾಗವಹಿಸಬಹುದು. ಇಂಗ್ಲಿಷ್, ಹಿಂದಿ, ಉರ್ದು, ಅಸ್ಸಾಮಿ, ಬಂಗಾಲಿ, ಗುಜರಾತಿ, ಕನ್ನಡ, ಕಾಶ್ಮೀರಿ, ಕೊಂಕಣಿ, ಮಲಯಾಳಂ, ಮಣಿಪುರಿ, ಮರಾಠಿ, ನೇಪಾಳಿ, ಒರಿಯಾ, ಪಂಜಾಬಿ, ಸಂಸ್ಕೃತ, ಸಿಂಧಿ, ತಮಿಳು, ತೆಲುಗು, ಬೋಡೋ, ಸಂತಾಲಿ, ಮೈಥಿಲಿ ಮತ್ತು ಡೋಗ್ರಿ ಭಾಷೆಗಳನ್ನು ಬಲ್ಲವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ವಿಧಾನ :
ಮೊದಲು https://innovateindia.mygov.in/yuva/ ವೆಬ್ ಸೈಟ್ ಗೆ ಹೋಗಿ. ಇಲ್ಲಿ ಕೆಳಗಿನ ಎಡಭಾಗದಲ್ಲಿರುವ ‘Click here to submit’ ಮೇಲೆ ‘ ಕ್ಲಿಕ್ ಮಾಡಿ. PM ಯುವ 2.0 ಯೋಜನೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ವೆಬ್ ಸೈಟ್ ನಲ್ಲಿ ನೀಡಲಾಗಿದೆ. ಇಲ್ಲಿ ನೀವು ಆನ್ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅರ್ಜಿ ಸಲ್ಲಿಸಬಹುದು.