ನ್ಯೂಸ್ ನಾಟೌಟ್ : ಸುಳ್ಯದ ಪ್ರಥಮ ದರ್ಜೆ ಕಾಲೇಜ್ ಗೆ ನ್ಯಾಕ್ ನಿಂದ ‘ಬಿ ಪ್ಲಸ್ ಗ್ರೇಡ್’ ಲಭಿಸಿದೆ. ಇತ್ತೀಚೆಗಷ್ಟೇ ನ್ಯಾಕ್ ಅಧಿಕಾರಿಗಳು ಸುಳ್ಯ ಪ್ರಥಮ ದರ್ಜೆ ಕಾಲೇಜಿಗೆ ಬಂದು ಪ್ರಗತಿ ಪರಿಶೀಲನೆ ನಡೆಸಿ ತೆರಳಿದ್ದರು.ಇದೀಗ ಬಿ ಪ್ಲಸ್ ಗ್ರೇಡ್ ಲಭಿಸಿದ್ದು ಅತೀವ ಸಂತೋಷ ತಂದ ವಿಷಯವಾಗಿದೆ ಎಂದು ಪ್ರಾಂಶುಪಾಲ ಸತೀಶ್ ಕೊಯಿಂಗಾಜೆ ತಿಳಿಸಿದ್ದಾರೆ.
ಪೋಷಕರಿಂದಲೂ ಪ್ರಶಂಸೆ:
ಅದೆಷ್ಟೋ ವಿದ್ಯಾರ್ಥಿಗಳಿಗೆ ಅರಿವು,ಜ್ಞಾನಾರ್ಜನೆ ನೀಡಿದ ಕಾಲೇಜ್. ಪಠ್ಯದ ಜತೆಗೆ, ಕ್ರೀಡೆ, ಸಂಗೀತ, ಚಿತ್ರಕಲೆ,ಸಾಹಿತ್ಯ ಹೀಗೆ ಪಠ್ಯೇತರ ಚಟುವಟಿಕೆಗಳಲ್ಲೂ ಇಲ್ಲಿನ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳಲ್ಲಿ ಶಿಸ್ತಿನ ಜೊತೆಗೆ ಅಧ್ಯಯನಕ್ಕೆ ಹೆಚ್ಚಿನ ಅದ್ಯತೆ ನೀಡಲಾಗುತ್ತಿದ್ದು, ಪೋಷಕರಿಂದಲೂ ಪ್ರಶಂಸೆ ವ್ಯಕ್ತವಾಗುತ್ತಿದೆ. ವಿದ್ಯಾರ್ಥಿಗಳ ಅನುಕೂಲತೆಯ ದೃಷ್ಟಿಯಿಂದ ಸೌಲಭ್ಯಗಳನ್ನು ನೀಡಲಾಗಿದೆ. ಇದರಿಂದ ವಿದ್ಯಾರ್ಥಿಗಳ ಹಾಜರಾತಿ ಪ್ರಮಾಣವೂ ಹೆಚ್ಚಿದೆ.
ಹೆಮ್ಮೆ ಪಡುವ ವಿಚಾರ:
ಇದಕ್ಕೆ ಪೂರಕವಾಗಿ ಕಾಲಕಾಲಕ್ಕೆ ಪೋಷಕರ ಸಭೆಗಳನ್ನು ನಡೆಸಿ, ವಿದ್ಯಾರ್ಥಿಗಳ ನಡವಳಿಕೆಗಳ ಕುರಿತು ಪೋಷಕರ ಗಮನ ಸೆಳೆಯುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ.ಇಲ್ಲಿ ಓದಿದ ವಿದ್ಯಾರ್ಥಿಗಳು ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಉತ್ತಮ ಸಾಧನೆ ಮಾಡಿದ್ದಾರೆ. ಇದೀಗ ನ್ಯಾಕ್ ನಿಂದ ‘ಬಿ ಪ್ಲಸ್’ ಗ್ರೇಡ್ ಪ್ರಕಟಗೊಂಡಿದ್ದು, ಉಪನ್ಯಾಸಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಹೆಮ್ಮೆ ಪಡುವ ವಿಚಾರವಾಗಿದೆ.