ನ್ಯೂಸ್ ನಾಟೌಟ್ : ಪ್ರತಿದಿನ ನಾವು ಹಲವು ಬಗೆಯ ಆಹಾರಗಳನ್ನು ಸೇವಿಸುತ್ತೇವೆ. ಆದರೆ ಕೆಲವೊಂದು ಆಹಾರಗಳು ನಮ್ಮ ಆರೋಗ್ಯವನ್ನು ಕೆಡಿಸುತ್ತದೆ. ಅದಕ್ಕಾಗಿ ದೇಹಕ್ಕೆ ತಂಪಾಗುವ ಆಹಾರಗಳನ್ನು ಸೇವಿಸಬೇಕು. ಅದರಲ್ಲೂ ಮೊಳಕೆ ಕಾಳುಗಳನ್ನು ಸೇವಿಸಿದರೆ ಇನ್ನು ಒಳ್ಳೆಯದು.
ಕಾಳುಗಳು ಅಂದಾಗ ಹಲವು ಕಾಳುಗಳು ನೆನಪಿಗೆ ಬರುತ್ತದೆ. ಎಲ್ಲವು ದೇಹಕ್ಕೆ ತುಂಬಾ ಒಳ್ಳೆಯದು. ಅದನ್ನು ಹಾಗೇಯೇ ಸೇವಿಸುವ ಬದಲು ಮೊಳಕೆ ಬರಿಸಿ ಸೇವಿಸಬೇಕು. ಇದರಿಂದ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಬಹುದು. ನಮಗೆ ಬೇಕಾದ ಅಗತ್ಯ ಪೋಷಕಾಂಶಗಳನನ್ನು ಪಡೆಯಬಹುದು .
ಏನಿದರ ಪ್ರಯೋಜನಗಳು?
- ಇದರಲ್ಲಿ ಹೆಚ್ಚಿನ ಪ್ರೋಟಿನ್ ಅಂಶವಿದೆ.
- ಅಲ್ಲದೆ ಸ್ನಾಯುಗಳ ಬೆಳವಣಿಗೆಗೂ ಸಹಕಾರಿಯಾಗುತ್ತದೆ.
- ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.
- ಪ್ರೋಟೀನ್ ಕೊರತೆಯನ್ನು ನಿವಾರಿಸುತ್ತದೆ.
- ರಕ್ತ ಹೀನತೆ ಸಮಸ್ಯೆಯನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ.
- ಕಬ್ಬಿಣದ ಕೊರತೆ ನಿವಾರಣೆ
- ಶಕ್ತಿ ಹೆಚ್ಚಾಗುತ್ತದೆ.
- ಅಧಿಕ ರಕ್ತದೊತ್ತಡದ ಮೇಲೆ ಪರಿಣಾಮ ಬೀರುವುದನ್ನು ಕಡಿಮೆ ಮಾಡುತ್ತದೆ