ನ್ಯೂಸ್ ನಾಟೌಟ್: ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ (NTRO) ವಿವಿಧ ಹುದ್ದೆಗಳ ಭರ್ತಿಗಾಗಿ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಏವಿಯೇಟರ್ II ಮತ್ತು ಟೆಕ್ನಿಕಲ್ ಅಸಿಸ್ಟೆಂಟ್ನಂತಹ ಒಟ್ಟು 182 ಹುದ್ದೆಗಳಿಗೆ ನೇಮಕ ಮಾಡಲಾಗುವುದು. ಡಿಸೆಂಬರ್ 31ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಲಿದ್ದು, 2023 ಜನವರಿ 21 ರೊಳಗೆ ಅರ್ಜಿ ಸಲ್ಲಿಸಬೇಕು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸಬಹುದು.
ಸಂಸ್ಥೆ:
ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ- NTRO
ಒಟ್ಟು ಹುದ್ದೆಗಳು :182
ಏವಿಯೇಷನ್ ಟೆಕ್ನಾಲಜಿ:
22 ಹುದ್ದೆಗಳು
ತಾಂತ್ರಿಕ ಸಹಾಯಕ:
138 ಹುದ್ದೆಗಳು
ವಿದ್ಯಾರ್ಹತೆ:ಪದವಿ ಅಥವಾ ಪಿಜಿ
ವಯೋಮಿತಿ:30 ವರ್ಷ ದಾಟಿರಬಾರದು
ಆಯ್ಕೆ ಪ್ರಕ್ರಿಯೆ:ಲಿಖಿತ ಪರೀಕ್ಷೆ, ಸಂದರ್ಶನ
ಅರ್ಜಿ ಸಲ್ಲಿಕೆ ಆರಂಭ ದಿನಾಂಕ :31-12-2022
ಅರ್ಜಿ ಸಲ್ಲಿಕೆ ಕೊನೆ ದಿನಾಂಕ:21-1-2023
ಅರ್ಜಿ ಸಲ್ಲಿಕೆ ಶುಲ್ಕ:500 ರೂ. (ಸಡಿಲಿಕೆ ಇದೆ)
ಆಯ್ಕೆ ಪ್ರಕ್ರಿಯೆ ಬಗ್ಗೆ ಹೆಚ್ಚಿನ ಮಾಹಿತಿ:
1) ಲಿಖಿತ ಪರೀಕ್ಷೆ – 200 ಅಂಕಗಳು
2) ಸಂದರ್ಶನ – 50 ಅಂಕಗಳು
ವೇತನ ಮಾಹಿತಿ:
ಏವಿಯೇಷನ್ ಟೆಕ್ನಾಲಜಿ ಹುದ್ದೆ: ತಿಂಗಳಿಗೆ 56,100 ರಿಂದ 1,77,500 ರೂ.
ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆ: ತಿಂಗಳಿಗೆ 44,900 ರಿಂದ 1,42,400 ರೂ.
ಅರ್ಜಿ ಶುಲ್ಕ:
ಸಾಮಾನ್ಯ ವರ್ಗದ ಅಭ್ಯರ್ಥಿಗಳು: 500 ರೂ.
SC, ST, PWD ಅಭ್ಯರ್ಥಿಗಳಿಗೆ : ಉಚಿತ
ಮಹಿಳಾ ಅಭ್ಯರ್ಥಿಗಳು: ಉಚಿತ
ಈ ನೇಮಕಾತಿಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. 31 ಡಿಸೆಂಬರ್ 2022 ರಂದು ತೆರೆದಿರುತ್ತವೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21 ಜನವರಿ 2023. ಆಸಕ್ತ ಅಭ್ಯರ್ಥಿಗಳು ಅಪ್ಲಿಕೇಶನ್ ಲಿಂಕ್ ಅನ್ನು ಸಕ್ರಿಯಗೊಳಿಸಿದ ನಂತರ ಅರ್ಜಿ ಸಲ್ಲಿಸಬಹುದು.