ನ್ಯೂಸ್ ನಾಟೌಟ್ : ಇಂಡಿಯನ್ ಫುಡ್ ಅಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಇಲ್ಲಿಯ ಫುಡ್ ಗಳ ರುಚಿಯೇ ಬೇರೆ. ಭಾರತದ ಆಹಾರ ಪದ್ದತಿಗಳು ತುಂಬಾ ವಿಭಿನ್ನವಾಗಿದೆ.ಇದು ವಿದೇಶಗಳಲ್ಲಿಯೂ ಫೇಮಸ್. ಮಸಾಲೆಯುಕ್ತ ತಿನಿಸುಗಳು ಜನರನ್ನು ಅಸ್ವಾದಿಸುತ್ತದೆ. ವಿಶ್ವದ ಅತ್ಯುತ್ತಮ ಪಾಕ ಪದ್ದತಿಗಳ ಪಟ್ಟಿಯಲ್ಲಿ ಭಾರತದ ಫುಡ್ ಸಹ ಒಂದಾಗಿದೆ. ಇದೀಗ ಭಾರತೀಯ ಆಹಾರ ಪದ್ದತಿಗಳ ಪಟ್ಟಿಯಲ್ಲಿ ಐದನೇ ಸ್ಥಾನ ಗಳಿಸಿ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮೊದಲ ಸ್ಥಾನ ಯಾವ ದೇಶಕ್ಕೆ?
ಭಾರತೀಯ ಆಹಾರ ಪದ್ದತಿಗಳ ಶೈಲಿಯು ದೇಶ- ವಿದೇಶದಲ್ಲಿಯೂ ಪ್ರಸಿದ್ಧಿ ಪಡೆದಿದೆ. ಪರಿಮಳ ಭರಿತ ಫುಡ್ ಗಳು ಬಾಯಲ್ಲಿ ನೀರೂರಿವಂತೆ ಮಾಡುತ್ತವೆ.ಹಲವು ಬಗೆಯ ತಿನಿಸುಗಳು ಒಂದಕ್ಕಿಂತ ಒಂದು ಭಿನ್ನವಾಗಿದೆ. ಪ್ರವಾಸಿಗರು ಕೂಡ ಭಾರತದ ಫುಡ್ ಗಳನ್ನು ಸವಿದು ಖುಷಿ ಪಡುತ್ತಾರೆ. ಇದೀಗ ವಿಶ್ವದಲ್ಲೇ ಭಾರತದ ಪಾಕ ಪದ್ಧತಿಯಲ್ಲಿ ಐದನೇ ಸ್ಥಾನ ಲಭಿಸಿದೆ.ವಿಶ್ವದ ಅತ್ಯುತ್ತಮ ಪಾಕ ಪದ್ದತಿಗಳ ಪಟ್ಟಿಯಲ್ಲಿ ಭಾರತಕ್ಕೆ ಐದನೇ ಸ್ಥಾನ ಬಂದಿರುವಂತದ್ದು, ಜಗತ್ತಿನಾದ್ಯಂತ ಹಲವು ಆಹಾರಗಳು ಮತ್ತು ಪಾನೀಯಗಳನ್ನು ಆಧರಿಸಿ ಜನರು ನೀಡಿದ ಮತವನ್ನು ಆಧರಿಸಿ ಆಯ್ಕೆಯಾಗಿದೆ. ಗ್ರೀಸ್ ಮತ್ತು ಸ್ಪೇನ್ ನಂತರ ಇಟಲಿಯ ಆಹಾರವು ಮೊದಲ ಸ್ಥಾನದಲ್ಲಿದೆ. ಭಾರತವು 4.54 ಅಂಕಗಳನ್ನು ಪಡೆದುಕೊಂಡಿದ್ದು ಹಾಗೂ ದೇಶದ ಅತ್ಯುತ್ತಮ ರೇಟ್ ಮಾಡಿದ ಆಹಾರ ಎಂದು ಕರೆಸಿಕೊಂಡಿದೆ.
ಪಟ್ಟಿಯಲ್ಲಿ ಯಾವ್ಯಾವುದಿದೆ?
ಅತ್ಯುತ್ತಮ ಆಹಾರಗಳಲ್ಲಿ ಗರಂ ಮಸಾಲಾ, ಮಲೈ, ತುಪ್ಪ, ಬೆಣ್ಣೆ ಬೆಳ್ಳುಳ್ಳಿ ನಾನ್, ಕೀಮಾ ಸೇರಿವೆ ಎಂದು ತಿಳಿದುಬಂದಿದೆ. ಆಹಾರಪಟ್ಟಿಯಲ್ಲಿ ಒಟ್ಟು 460 ಐಟಂಗಳಿದ್ದವು. ಇದಲ್ಲದೇ, ಭಾರತೀಯ ಪಾಕಪದ್ಧತಿಯನ್ನು ಪ್ರಯತ್ನಿಸಲು ಅತ್ಯುತ್ತಮ ರೆಸ್ಟೋರೆಂಟ್ ಗಳೆಂದರೆ ಶ್ರೀ ಠಾಕರ್ ಭೋಜನಲೇ (ಮುಂಬೈ), ಕರವಲ್ಲಿ (ಬೆಂಗಳೂರು), ಬುಖಾರಾ (ಹೊಸದಿಲ್ಲಿ), ದಮ್ ಪುಖ್ತ್ (ಹೊಸದಿಲ್ಲಿ), ಕೊಮೊರಿನ್ (ಗುರುಗ್ರಾಮ್) ಮತ್ತು 450 ಇತರವುಗಳು ಎಂದು ಸೂಚಿಸಲಾಗಿದೆ.