ನ್ಯೂಸ್ ನಾಟೌಟ್ : ಉದ್ಯೋಗ ಹುಡುಕುತ್ತಿರುವವರಿಗೆ ಶುಭ ಸುದ್ದಿ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಲೆಕ್ಷನ್ ಫೆಸಿಲಿಟೇಟರ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸುತ್ತಿದೆ. ಒಟ್ಟು 1438 ಹುದ್ದೆಗಳನ್ನು ಖಾಲಿ ಇದ್ದು, ಜ. 10 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಜ.೧೦ ಕೊನೆಯ ದಿನಾಂಕ:
ಆಯ್ಕೆಯಾದ ನಿವೃತ್ತ ಅಧಿಕಾರಿಗಳು/ಸಿಬ್ಬಂದಿಯನ್ನು CPC/ಪ್ರಾದೇಶಿಕ ಕಚೇರಿ/ AO (ಆಡಳಿತಾತ್ಮಕ ಕಚೇರಿ)/ ATC (ಆಸ್ತಿಗಳ ಟ್ರ್ಯಾಕಿಂಗ್ ಕೇಂದ್ರ) ಅಥವಾ LHO ನಿರ್ಧರಿಸಿದಂತೆ ಯಾವುದೇ ಇತರ ಕಚೇರಿ ಸ್ಥಳಗಳು/ಸಂಸ್ಥೆಗಳಲ್ಲಿ ನಿಯೋಜಿಸಲಾಗುವುದು. ಆಸಕ್ತ ಅಭ್ಯರ್ಥಿಗಳು ಜ. 10ರವರೆಗೆ ಅಧಿಕೃತ ವೆಬ್ಸೈಟ್ sbi.co.in ನಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
1438 ಹುದ್ದೆಗಳು:
ಕಲೆಕ್ಷನ್ ಫೆಸಿಲಿಟೇಟರ್ (JMGS-I):291 ಹುದ್ದೆಗಳು
ಕಲೆಕ್ಷನ್ ಫೆಸಿಲಿಟೇಟರ್ (MMGS-II):507 ಹುದ್ದೆಗಳು
ಕಲೆಕ್ಷನ್ ಫೆಸಿಲಿಟೇಟರ್ (MMGS-III):142 ಹುದ್ದೆಗಳು
ಕಲೆಕ್ಷನ್ ಫೆಸಿಲಿಟೇಟರ್ (ಕ್ಲೇರಿಕಲ್ ಸ್ಟಾಫ್): 498 ಹುದ್ದೆಗಳು
ಒಟ್ಟು 1438 ಹುದ್ದೆಗಳ ವರ್ಗಾನುಸಾರ ಹಂಚಿಕೆ ಮಾಡಲಾಗಿದೆ.
ಸಾಮಾನ್ಯ: 680 ಹುದ್ದೆಗಳು
EWS: 125 ಹುದ್ದೆಗಳು
OBC: 314 ಹುದ್ದೆಗಳು
SC: 198 ಹುದ್ದೆಗಳು
ST: 121 ಹುದ್ದೆಗಳು
ಅರ್ಹತಾ ಮಾನದಂಡಗಳು:
ಎಸ್ ಬಿ ಐ ಅಥವಾ ಬ್ಯಾಂಕ್ ನ ಇತರ ಸಹವರ್ತಿಗಳ ನಿವೃತ್ತ ಅಧಿಕಾರಿ ಅಥವಾ ಸಿಬ್ಬಂದಿ ಮತ್ತು ಡಿ. ೨೦೨೨ರಂದು 63 ವರ್ಷಕ್ಕಿಂತ ಮೇಲ್ಪಟ್ಟಿರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಸೇವೆಯ ಒರಿಜಿನಲ್ ದಾಖಲೆಯನ್ನು ಹೊಂದಿರಬೇಕು ಮತ್ತು ಅವರಿಗೆ ನಿಯೋಜಿಸಲಾದ ಪಾತ್ರದಲ್ಲಿ ಅವರು ಜ್ಞಾನ ಮತ್ತು ಪರಿಣತಿಯನ್ನು ಹೊಂದಿರಬೇಕು.
ಆಯ್ಕೆ ಪ್ರಕ್ರಿಯೆ:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಿ ಬಳಿಕ ಮೆರಿಟ್ ಪಟ್ಟಿ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ವೇತನ ವಿವರ:
ವೇತನವನ್ನು ಮಾಸಿಕ ಮಧ್ಯಂತರದಲ್ಲಿ ಪಾವತಿಸಲಾಗುವುದು. ವಸೂಲಾತಿ ಫೆಸಿಲಿಟೇಟರ್ಗಳಿಗೆ ಮಾಸಿಕ ವೇತನವು ಕೆಳಕಂಡಂತಿದೆ:
ಕ್ಲೆರಿಕಲ್- 25000 ರೂ
JMGS-I- ರೂ. 35000
MMGS-II ಮತ್ತು MMGS-III- ರೂ. 40000
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜ.10 ಕ್ಕೂ ಮುನ್ನ sbi.co.in/web/careers ನಲ್ಲಿ ಅಧಿಕೃತ ವೆಬ್ಸೈಟ್ಗಳ ವೃತ್ತಿ ಪುಟವನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ.