ನ್ಯೂಸ್ ನಾಟೌಟ್ : ಒತ್ತಡದ ಜೀವನ ಹಾಗೂ ಜೀವನ ಶೈಲಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ. ಅದರಲ್ಲೂ ಹೃದಯಾಘಾತಕ್ಕೆ ಒಳಗಾಗುವ ಸುದ್ದಿಯನ್ನು ನಾವು ಕೇಳುತ್ತೇವೆ.ಚಿಕ್ಕ ಮಕ್ಕಳನ್ನು ಬಿಡದೇ ಕಾಡುತ್ತಿರುವ ಈ ಹೃದಯಾಘಾತವನ್ನು ತಡೆಯುವಂತೆ ಮಾಡುವ ಆಹಾರ ಕ್ರಮಗಳು ಯಾವುದು? ಅದರಲ್ಲೂ ಚಳಿಗಾಲ ಸಮಯದಲ್ಲಿ ನಾವು ಯಾವ ಆಹಾರಗಳನ್ನು ಸೇವಿಸಬೇಕು ಅನ್ನುವುದರ ಬಗೆಗೆ ನಮಗೆ ಅರಿವಿರಬೇಕು.ಚಳಿಗಾಲದಲ್ಲಿ ಹೃದಯಾಘಾತದ ಅಪಾಯ ಹೆಚ್ಚು ಎಂದು ಹೇಳಲಾಗುತ್ತಿದೆ.
ಬದಲಾವಣೆ ಮಾಡಿಕೊಳ್ಳಿ:
ಇತ್ತೀಚಿನ ದಿನಗಳಲ್ಲಿ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಅನೇಕ ಮಂದಿ ಬಳಲುತ್ತಿದ್ದಾರೆ.ಕೊಲೆಸ್ಟ್ರಾಲ್ ಹೆಚ್ಚಳಕ್ಕೆ ನಾವು ಸೇವಿಸುವ ಆಹಾರ ಮತ್ತು ಪಾನೀಯವೇ ಕಾರಣವಾಗುತ್ತದೆ. ಇದೇ ಕಾರಣಕ್ಕೆ ಚಳಿಗಾಲದಲ್ಲಿ ನಾವು ಸೇವಿಸುವ ಆಹಾರದಲ್ಲಿ ಅನೇಕ ರೀತಿಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಅದರಲ್ಲೂ ಕೊಲೆಸ್ಟ್ರಾಲ್ ಹೆಚ್ಚಿಸುವ ಆಹಾರಗಳಿಂದ ದೂರ ಇರಲೇಬೇಕು.ಹಾಗಾಗಿ ಬದಲಾವಣೆಗಳಿಗೆ ಒಗ್ಗಿಕೊಳ್ಳಲೇ ಬೇಕಾಗಿದೆ.
ಕರಿದ ಆಹಾರಗಳಿಂದ ದೂರವಿರಿ:
ಚಳಿಗಾಲದಲ್ಲಿ ಮಸಾಲೆಯುಕ್ತ ಆಹಾರವನ್ನು ತಿನ್ನಬೇಕು ಎಂದು ಅನ್ನಿಸುತ್ತಿರುತ್ತದೆ. ಈ ಕಾರಣದಿಂದಾಗಿ ಚಳಿ ಹೆಚ್ಚಾಗುತ್ತಿದ್ದಂತೆಯೇ ಕರಿದ ಆಹಾರಗಳ ಬೇಡಿಕೆ ಕೂಡಾ ಹೆಚ್ಚುತ್ತದೆ. ಹೀಗೆ ಹೆಚ್ಚು ಹೆಚ್ಚು ಕರಿದ ಆಹಾರ ಪದಾರ್ಥಗಳನ್ನು, ಎಣ್ಣೆಯುಕ್ತ ಆಹಾರಗಳನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಹಾಗಾಗೀ ಮಸಾಲೆಗಳನ್ನು ಆಹಾರದಲ್ಲಿ ಬಳಸಿ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿಡಬಹುದು.
ಸಿಹಿ ವಸ್ತುಗಳು ಬೇಡ :
ಚಳಿಗಾಲದಲ್ಲಿ ಸಿಹಿ ಪದಾರ್ಥಗಳನ್ನು ಕೂಡಾ ಹೆಚ್ಚಾಗಿ ಸೇವಿಸುತ್ತಾರೆ. ಅದರಲ್ಲೂ ಕಾಫಿ, ಟೀಗೆ ಸ್ವಲ್ಪ ಬೇಡಿಕೆ ಹೆಚ್ಚು ಇದೆ. ಇವುಗಳಲ್ಲಿ ಸಕ್ಕರೆಯನ್ನು ಬಳಸಲಾಗುತ್ತದೆ. ಹಾಗಾಗಿ ಈ ಆಹಾರ ಪಾನೀಯಗಳಲ್ಲಿ ಸ್ಯಾಚುರೇಟೆಡ್ ಕೊಬ್ಬು ಹೆಚ್ಚು ಕಂಡುಬರುತ್ತದೆ. ಇದು ಹೃದಯಕ್ಕೆ ಹಾನಿ ಉಂಟು ಮಾಡುತ್ತದೆ. ಹಾಗಾಗಿ ಚಳಿಗಾಲದಲ್ಲಿ ಸಿಹಿ ತಿಂಡಿಗಳನ್ನು ದೂರವಿಟ್ಟರೆ ಒಳ್ಳೆಯದು.
ಮಾಂಸಗಳನ್ನು ಸೇವಿಸಬೇಡಿ:
ಮಾಂಸಾಹಾರಿಗಳು ಚಳಿಗಾಲದಲ್ಲಿ ಹೆಚ್ಚು ಹೆಚ್ಚು ಮಾಂಸವನ್ನು ಸೇವಿಸುತ್ತಾರೆ. ಇದು ಕೊಲೆಸ್ಟ್ರಾಲ್ ಹೆಚ್ಚು ಮಾಡುವ ಆಹಾರ . ದೇಹಕ್ಕೆ ಒಳ್ಳೆಯದಲ್ಲ. ಮಾಂಸದಲ್ಲಿ ಸ್ಯಾಚುರೇಟೆಡ್ ಕೊಬ್ಬು ಅಧಿಕವಾಗಿರುತ್ತದೆ. ಹಾಗಾಗಿ ಚಳಿಗಾಲದಲ್ಲಿ ಹೆಚ್ಚು ಮಾಂಸಹಾರಗಳನ್ನು ತಿನ್ನಬಾರದು.
ಇನ್ಸ್ಟಂಟ್ ಫುಡ್ :
ಬಾಯಿ ಚಪ್ಪರಿವಂತಹ ಇನ್ಸ್ಟಂಟ್ ಫುಡ್ ಬಾಯಿ ರುಚಿಯನ್ನು ಹೆಚ್ಚಿಸುತ್ತದೆ ನಿಜ. ಆದರೆ ಈ ಆಹಾರವು ಆರೋಗ್ಯಕ್ಕೆ ಒಳ್ಳೆಯದಲ್ಲ. ಸಾಮಾನ್ಯವಾಗಿ ಇವುಗಳಲ್ಲಿ ಮೈದಾವನ್ನು ಬಳಸಲಾಗುತ್ತದೆ. ಇದು ಹೃದಯ ಮತ್ತು ರಕ್ತ ಪರಿಚಲನೆಗೆ ಹಾನಿ ಉಂಟು ಮಾಡುತ್ತದೆ.
ಚೀಸ್ ಮತ್ತು ಪನೀರ್ :
ಚೀಸ್ ಮತ್ತು ಪನೀರ್ ನಲ್ಲಿ ಕ್ಯಾಲ್ಸಿಯಂ ಮತ್ತು ಪ್ರೋಟಿನ್ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತವೆ. ಆದರೆ ಅದರಲ್ಲಿ ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣವೂ ಹೆಚ್ಚಾಗಿರುತ್ತದೆ. ಚಳಿಗಾಲದಲ್ಲಿ ಹೆಚ್ಚು ಚೀಸ್ ಮತ್ತು ಪನೀರ್ ತಿನ್ನುವುದು ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ.