ನ್ಯೂಸ್ ನಾಟೌಟ್ : ಬೆಳ್ಳಾರೆ ಯುವ ಉದ್ಯಮಿ ನವೀನ್ ಕಾಮಧೇನು ಕಿಡ್ನಾಪ್ ಪ್ರಕರಣ ಮತ್ತೊಂದು ತಿರುವನ್ನು ಪಡೆದುಕೊಂಡಿದೆ.ಕಾಮದೇನು ಮಾಧವ ಗೌಡ ಅವರ ಸೊಸೆ ಸ್ಪಂದನ ನವೀನ್ ಅವರು ಬೆಳ್ಳಾರೆ ಕಾವಿನ ಮೂಲೆಯಲ್ಲಿ ಮನೆಯಿಂದ ಚಿನ್ನಾಭರಣ ಕಳವು ಆಗಿರುವುದಾಗಿ ಪೊಲೀಸ್ ದೂರು ನೀಡಿದ ಘಟನೆ ನಡೆದಿದೆ.
ದೂರಿನಲ್ಲೇನಿದೆ?
ಪೊಲೀಸ್ ದೂರು ನೀಡಿದ ನವೀನ್ ಪತ್ನಿ ಸ್ಪಂದನ ತನ್ನ ಗಂಡ ಮದ್ಯವ್ಯಸನಿ ಎಂದು ಉಲ್ಲೇಖಿಸಿದ್ದಾರೆ.ಇದರಿಂದಾಗಿ ವೈವಾಹಿಕ ಜೀವನದಲ್ಲಿ ನೂಂದು ಬೇಸತ್ತಿದ್ದೇನೆ. ಕಳೆದ ಕೆಲವು ತಿಂಗಳುಗಳಿಂದ ಇವರ ಮದ್ಯವ್ಯಸನದಿಂದ ಸಹಿಸಲು ಅಸಾಧ್ಯವಾದ ಹಂತಕ್ಕೆ ತಲುಪಿದ್ದೇನೆ.ನವೀನ್ ತಂದೆ ಮಾಧವ ಗೌಡರವರು ಮದ್ಯ ವ್ಯಸನ ಮುಕ್ತ ಚಿಕಿತ್ಸೆಗಾಗಿ ಬೆಂಗಳೂರಿನ ಕಡಂಬಸ್ ಆಸ್ಪತ್ರೆಗೆ ದಾಖಲಿಸಲು ತೀರ್ಮಾನಿಸಿದ್ದರು. ಅದರಂತೆ ಇವರನ್ನು ಕಡಂಬಸ್ ಆಸ್ಪತ್ರೆಗೂ ದಾಖಲು ಮಾಡಲಾಗಿತ್ತು.
ಚಿನ್ನಾಭರಣ ಕಳವು:
ಮೊನ್ನೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ , ನೀರಜಾಕ್ಷಿಯವರು ಮಾಧವ ಗೌಡ, ದಿವ್ಯಪ್ರಭಾ, ಪರಶುರಾಮ, ಸ್ಪ೦ದನ, ಸ್ಪರ್ಶಿತ್ ಹಾಗೂ ನವೀನ ರೈ ಎ೦ಬವರ ಮೇಲೆ ಪೊಲೀಸ್ ದೂರು ಕೊಟ್ಟಿದ್ದು ಅದರಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ನಾವು ಜಾಮೀನು ಪಡೆದು ಅದರಿಂದ ಹೊರಗೆ ಬಂದೆವು.ಆ ದಿನ ಮನೆಯ ಒಳಗೆ ಹೋಗಿ ನೋಡಿದಾಗ ಮನೆಯಿಂದ ಲಾಕರ್ ನಲ್ಲಿಟ್ಟಿದ್ದ ಚಿನ್ನಾಭರಣಗಳು ಕಳವಾಗಿದ್ದವು. ವಜ್ರದ ಹಾರ,ನೆಕ್ಲಸ್,ಉಂಗುರ, ಕಿವಿಯ ಓಲೆಗಳು, ಕರಿಮಣಿ ತಾಳಿ ಚೈನು ಹಾಗೂ ಇತರ ಚಿನ್ನಾಭರಣಗಳು ಮತ್ತು ರಶೀದಿಗಳು ಕಳವಾಗಿದೆ. ಈ ಚಿನ್ನಾಭರಣಗಳನ್ನು ನೀರಜಾಕ್ಷಿ, ತಾರಾ ಕುಮಾರಿ, ವಿನ್ಯಾಸ್, ಪ್ರಜ್ಞಾ ಎಂಬವರು ಕಳ್ಳತನ ಮಾಡಿರುವುದಾಗಿ ಬಲವಾದ ಸಂಶಯವಿದ್ದು ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ” ಎಂದು ಸ್ಪ೦ದನಾ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ ನೀರಜಾಕ್ಷಿ ತಾರಾಕುಮಾರಿ, ವಿನ್ಯಾಸ್ ಪ್ರಥ್ವಿರವರ ಮೇಲೆ ಪ್ರಕರಣ ದಾಖಲಾಗಿರುವುದಾಗಿ ತಿಳಿದು ಬಂದಿದೆ.