ನ್ಯೂಸ್ ನಾಟೌಟ್:ಬೆಳ್ತಂಗಡಿಯಲ್ಲಿ ನಡೆದಿದೆ ಎನ್ನಲಾದ ಲವ್ ಜಿಹಾದ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.ಕಾಲೇಜ್ ನಲ್ಲಿ ಹಿಂದೂ ವಿದ್ಯಾರ್ಥಿನಿಯನ್ನು ಡಿಬಾರ್ ಮಾಡಲಾಗಿದ್ದು,ಮುಸ್ಲಿಂ ವಿದ್ಯಾರ್ಥಿಯನ್ನು ಡಿಬಾರ್ ಮಾಡಿಲ್ಲ ಯಾಕೆ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.ಇದೀಗ ಆತನನ್ನು ಸಸ್ಪೆಂಡ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬೆಳ್ತಂಗಡಿ ಕಾಲೇಜೊಂದರಲ್ಲಿ ಮಾಜಿ ಶಾಸಕ ವಸಂತ್ ಬಂಗೇರ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅತಿಥಿಯಾಗಿ ಆಗಮಿಸಿದ್ದರು. ಕಾರ್ಯಕ್ರಮದ ವೇಳೆ ಕಾಲೇಜು ಅವರಣದಲ್ಲಿಯೇ ಮುಸ್ಲಿಂ ವಿದ್ಯಾರ್ಥಿ ಹಾಗೂ ಹಿಂದೂ ವಿದ್ಯಾರ್ಥಿನಿ ಹಗ್ ಮಾಡಿ ಕಿಸ್ ಮಾಡಿದ್ದಾರೆ ಎನ್ನುವ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೂ ಕಾರಣವಾಗಿತ್ತು.
ಈ ಮಧ್ಯೆ ಕಾಲೇಜ್ ನ ಹಿಂದೂ ವಿದ್ಯಾರ್ಥಿಯನ್ನು ಡಿಬಾರ್ ಮಾಡಲಾಗಿತ್ತು.ಇದರಿಂದ ಸಿಡಿದೆದ್ದ ಹಿಂದೂ ಕಾರ್ಯಕರ್ತರು ಡಿಬಾರ್ ಮಾಡುವುದಾದರೆ ಇಬ್ಬರನ್ನು ಡಿಬಾರ್ ಮಾಡಿ, ‘ಶಿಕ್ಷೆ ಇಬ್ಬರಿಗೂ ಆಗಬೇಕು . ಜಿಹಾದಿಯನ್ನು ಡಿಬಾರ್ ಮಾಡದಿದ್ದರೆ ಮುಂದಿನ ದಿನ ನಾವು ಮಾಡಬೇಕಾದ ಕೆಲಸ ಮಾಡುತ್ತೇವೆ’ಎಂದು ತಿಳಿಸಿದ್ದರು. ಮುಸ್ಲಿಂ ವಿದ್ಯಾರ್ಥಿಗೆ ಹಿಂದೂ ಕಾರ್ಯಕರ್ತರು ತರಾಟೆಗೂ ತೆಗೆದುಕೊಂಡಿದ್ದು,ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾದ ಸುದ್ದಿ ಕೂಡ ಹೊರಬಿದ್ದಿತ್ತು. ಸದ್ಯ ಕಾಲೇಜು ಆಡಳಿತ ಮಂಡಳಿ ಇಬ್ಬರನ್ನೂ ಸಸ್ಪೆಂಡ್ ಮಾಡಿರುವುದಾಗಿ ತಿಳಿಸಿದೆ.