ನ್ಯೂಸ್ ನಾಟೌಟ್ : ಬೆಳ್ಳಾರೆಯ ಪ್ರತಿಷ್ಟಿತ ಚಿನ್ನಾಭರಣ ಮಳಿಗೆ ಕಾಮಧೇನು ಇದರ ಮಾಲಕ , ಯುವ ಉದ್ಯಮಿ ನವೀನ್ ಎಂಬವರನ್ನು ಬಲವಂತವಾಗಿ ಆಂಬುಲೆನ್ಸ್ ನಲ್ಲಿ ಕೊಂಡೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನರ ವಿರುದ್ದ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದರಲ್ಲಿ ಐದನೇ ಆರೋಪಿಯಾಗಿ ಬೆಳ್ಳಾರೆ ಸಮೀಪದ ತಂಬಿನಮಕ್ಕಿ ಮನೆ ನಿವಾಸಿ ನವೀನ್ ಕುಮಾರ್ ರೈ ಟಿ ಎಂಬವರನ್ನು ಹೆಸರಿಸಲಾಗಿದೆ. ಆದರೇ ಈ ಪ್ರಕರಣಕ್ಕೂ ತನಗೂ ಸಂಬಂಧವಿಲ್ಲ ಎಂದು ನವೀನ್ ಕುಮಾರ್ ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ನವೀನ್ ಕಾಮಧೇನು ಅವರನ್ನು ಆಂಬುಲೆನ್ಸ್ ನಲ್ಲಿ ಕೊಂಡೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನನ್ನು ಪ್ರಕರಣದ 5ನೇ ಆರೋಪಿಯನ್ನಾಗಿ ಮಾಡಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆದರೆ ಈ ಘಟನೆಗೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ ಮತ್ತು ಇವರ ಯಾವುದೇ ವ್ಯವಹಾರಗಳಲ್ಲಿ ನಾನು ಭಾಗಿಯಾಗಿರುವುದಿಲ್ಲ ಎಂದಿದ್ದಾರೆ. ಈ ಘಟನೆಗೆ ಸಂಬಂಧಿಸದ ನನ್ನ ವಿರುದ್ದ ವಿನಾಕಾರಣ ದೂರು ನೀಡಿರುವ ನೀರಜಾಕ್ಷಿ ಅವರು ಮಾಧ್ಯಮಗಳ ಮೂಲಕ ಈ ಕುರಿತು ಸ್ಪಷ್ಟೀಕರಣ ನೀಡಬೇಕೆಂದು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.