ಮಡಿಕೇರಿ: ಪ್ರಸಿದ್ಧ ಪ್ರವಾಸಿ ತಾಣ ಮಾಂದಲ್ ಪಟ್ಟಿಯಲ್ಲಿ 12 ವರ್ಷಗಳ ಬಳಿಕ ನೀಲಕುರಿಂಜಿ ಹೂವು ಅರಳಿದೆ. ಬೆಟ್ಟದ ಶ್ರೇಣಿ ಈಗ ನೀಲಿಮಯವಾಗಿ ಕಂಗೊಳಿಸುತ್ತಿದೆ. ವಾರಾಂತ್ಯ ಕರ್ಫ್ಯೂ ಕಾರಣಕ್ಕೆ ವಾರದ ಮಧ್ಯದಲ್ಲೂ ಪ್ರವಾಸಿಗರು ಬಂದು ನೀಲಿ ಬೆಟ್ಟದ ಅಂದವನ್ನು ಸವಿಯುತ್ತಿದ್ದಾರೆ. ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ. ಹೂವು ಅರಳಿ ಒಂದು ವಾರವಾಗಿದೆ. ಇನ್ನೂ ಕೆಲವು ದಿನಗಳ ಸೊಬಗನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಸಂಘಜೀವಿಯಾಗಿ ಅರಳುವ ಹೂವು ಅಪರೂಪಕ್ಕೊಮ್ಮೆ ಅರಳಿ ಕಾಫಿ ನಾಡಿನ ಬೆಟ್ಟಗಳ ಅಂದ ಹೆಚ್ಚಿಸುತ್ತಿವೆ. ಪಶ್ಚಿಮಘಟ್ಟದ ಸಾಲಿನ ಕೋಟೆಬೆಟ್ಟ, ಪುಷ್ಪಗಿರಿ, ಕುಮಾರ ಪರ್ವತದಲ್ಲಿ ಹೂವುಗಳು ಅರಳುತ್ತದೆ. ಸ್ಥಳೀಯವಾಗಿ, ಅವುಗಳನ್ನು ಕುರಿಂಜಿ ಹೂವುಗಳು ಎಂದು ಕರೆಯಲಾಗುತ್ತದೆ ಮತ್ತು ವೈಜ್ಞಾನಿಕವಾಗಿ ಅವುಗಳನ್ನು ಸ್ಟ್ರೋಬಿಲಾಂಥೆಸ್ ಕುಂಥಿಯಾನ ಎಂದು ಕರೆಯಲಾಗುತ್ತದೆ.
- +91 73497 60202
- [email protected]
- November 26, 2024 8:16 PM