ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಸಾಲು ಸಾಲು ಹತ್ಯೆ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇದೆ. ಇಲ್ಲೊಬ್ಬ ಭೂಪ ತನ್ನ ಚಿಕ್ಕಮ್ಮನನ್ನೇ ಕೊಲೆಗೈದು 10 ತುಂಡುಗಳಾಗಿ ಕತ್ತರಿಸಿ ಸೂಟ್ ಕೇಸ್ನಲ್ಲಿ ತುಂಬಿಸಿರುವ ದಾರುಣ ಘಟನೆ ನಡೆದಿದೆ. ಆರೋಪಿ ಅನುಜ್ ಶರ್ಮಾ ಸೂಟ್ ಕೇಸ್ ಅನ್ನು ತೆಗೆದುಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಘಟನೆಯ ವಿವರ:
ಆರೋಪಿ ಅನುಜ್ ಶರ್ಮಾ ಆರೋಪಿಯು ಬಿಟೆಕ್ ಪದವೀಧರನಾಗಿದ್ದು, ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದವನು. ಆದರೆ ಕಳೆದ ಎಂಟು ವರ್ಷಗಳಿಂದ ಅವನು ಸರಿಯಾದ ಉದ್ಯೋಗವಿಲ್ಲದೆ ಕೆಲವು ಧಾರ್ಮಿಕ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ. ಕೆಲಸವಿಲ್ಲದ ಕಾರಣ ಆರ್ಥಿಕವಾಗಿ ಚಿಕ್ಕಮ್ಮ ನನ್ನೇ ಅವಲಂಬಿತನಾಗಿದ್ದನು ಎಂದು ತಿಳಿದು ಬಂದಿದೆ.
ಡಿ.11ರಂದು ಅನುಜ್ ದೆಹಲಿಗೆ ತೆರಳಬೇಕಿತ್ತು ಇದಕ್ಕೆ ಚಿಕ್ಕಮ್ಮ ನಿರಾಕರಿಸಿದ್ದಾಳೆ. ಇದು ಇಬ್ಬರ ನಡುವೆ ವಾಗ್ವಾದಕ್ಕೂ ಕಾರಣವಾಗಿದೆ. ಇದರಿಂದ ಕೋಪಗೊಂಡು ಅನುಜ್, ಚಿಕ್ಕಮ್ಮನ ತಲೆಗೆ ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿದ್ದಾನೆ.ಚಿಕ್ಕಮ್ಮನ ದೇಹವನ್ನು ಕತ್ತರಿಸಲು ಅನುಷ್, ಸ್ಥಳೀಯ ಮಾರುಕಟ್ಟೆಯಿಂದ ಮಾರ್ಬಲ್ ಕಟರ್ ಖರೀದಿಸಿದ್ದಾನೆ. ಇದರ ಸಹಾಯದಿಂದ ದೇಹವನ್ನು ಹತ್ತು ತುಂಡುಗಳನ್ನಾಗಿ ಮಾಡಿ ದೆಹಲಿ ಜೈಪುರ ಹೆದ್ದಾರಿ ಬಳಿಯ ಅರಣ್ಯ ಪ್ರದೇಶಗಳಲ್ಲಿ ಹಾಕಿದ್ದಾನೆ ಎಂದು ತಿಳಿದು ಬಂದಿದೆ.
ಪ್ರಕರಣ ಬೆಳಕಿಗೆ ಬಂದದ್ದು ಹೇಗೆ?
ಆರೋಪಿ ಅನುಜ್ ಶರ್ಮಾ ತನ್ನ ಚಿಕ್ಕಮ್ಮ ಸರೋಜ್ ಶರ್ಮಾ(60) ಕುರಿತು . ಡಿ.11ರಂದು ವಿದ್ಯಾಧರ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ. ನಂತರ ಪೊಲೀಸರು ಬಂದು ಮನೆ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮನೆಯ ಬಾತ್ರೋಮ್ನಲ್ಲಿ ರಕ್ತ ಕಲೆ ಇರುವುದು ಪತ್ತೆಯಾಗಿದೆ ಅನುಮಾನ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.