ನ್ಯೂಸ್ ನಾಟೌಟ್ : ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ.
ತಾಯಿ ಯಶೋಧ (70), ಇಬ್ಬರು ಮಕ್ಕಳು ಸುಮನ್ ಗುಪ್ತಾ(41) ಹಾಗೂ ನರೇಶ್ ಗುಪ್ತಾ (36) ಮೃತಪಟ್ಟವರು.ಒಂದೇ ಕುಟುಂಬದ ಮೂವರು ಮಹಾಲಕ್ಷ್ಮಿ ಲೇಔಟ್ ನ ಫ್ಲಾಟ್ ನಲ್ಲಿ ವಾಸವಿದ್ದರು.ತಾಯಿ ಯಶೋಧರಿಗೆ ಮೂವರು ಮಕ್ಕಳಿದ್ದರು. ಅದರಲ್ಲಿ ಒಬ್ಬಳು ಮಗಳಿಗೆ ಮದುವೆ ಆಗಿ ರಾಜಾಜಿ ನಗರದಲ್ಲಿ ನೆಲೆಸಿದ್ದರು. ಇನ್ನು ಇಬ್ಬರು ಮಕ್ಕಳಿಗೆ ಮದುವೆಯಾಗಿರಲಿಲ್ಲ. ತಾಯಿ ಯಶೋಧಾ ಹಾಗೂ ಮಗಳು ಸುಮಾನ್ ಮತ್ತು ಮಗ ನರೇಶ್ ಮಹಾಲಕ್ಷ್ಮಿ ಲೇಔಟ್ ನ ಫ್ಲ್ಯಾಟ್ ನಲ್ಲಿ ಒಟ್ಟಿಗೆ ನೆಲೆಸಿದ್ದರು. ಮಗ ನರೇಶ್ ಗುತ್ತಿಗೆದಾರರಾಗಿ ಕೆಲಸ ಮಾಡಿಕೊಂಡಿದ್ದರು.
ತಾಯಿ ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮೇಲ್ನೋಟಕ್ಕೆ ವಿಷ ಸೇವಿಸಿ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.ಸ್ಥಳಕ್ಕೆ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಈ ಮೂವರ ಆತ್ಮಹತ್ಯೆಗೆ ನಿಜವಾದ ಕಾರಣ ಇನ್ನು ತಿಳಿದು ಬಂದಿಲ್ಲ. ಈಗಾಗಲೇ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದು, ಮೃತದೇಹಗಳನ್ನು ರಾಮಯ್ಯ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಇದೀಗ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ .