ನ್ಯೂಸ್ ನಾಟೌಟ್ : ಚಳಿಗಾಲದಲ್ಲಿ ಹೆಚ್ಚಾಗಿ ಹಸಿರು ತರಕಾರಿಗಳು ಸೊಪ್ಪು ತರಕಾರಿಗಳು ಸಿಗುತ್ತದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗಾಗಿ ಹೆಚ್ಚಾಗಿ ಹಸಿರು ತರಕಾರಿಗಳನ್ನೇ ಸೇವಿಸಬೇಕು. ಅದರ ಜೊತೆಗೆ ಈ ಹಸಿರು ಬಟಾಣಿಯು ದೇಹಕ್ಕೆ ಹಲವು ಆರೋಗ್ಯ ಸಮಸ್ಯೆಗಳನ್ನು ದೂರ ಮಾಡುತ್ತದೆ.
ತಾಜಾ ಹಸಿರು ಬಟಾಣಿ ಬಾಯಿಗೂ ರುಚಿ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಹಸಿರು ಬಟಾಣಿ ಹೃದಯ ಮತ್ತು ಮೂತ್ರಪಿಂಡಗಳನ್ನು ಆರೋಗ್ಯಕರವಾಗಿಡುತ್ತದೆ. ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ. ಬಿಪಿಗೂ ಈ ಬಟಾಣಿ ಔಷಧಿಯಾಗಿದೆ. ಮಧುಮೇಹ ರೋಗಿಗಳಿಗೂ ತುಂಬಾ ಸಹಾಯಕಾರಿ. ಹಸಿರು ಬಟಾಣಿಯನ್ನು ಪ್ರತಿದಿನ ಸೇವನೆ ಮಾಡಿದರೆ ದೇಹದ ತೂಕ ಕಡಿಮೆ ಆಗುತ್ತದೆ. ಈ ಬಟಾಣಿಯನ್ನು ಮ್ಯಾಗಿ, ಬಿರಿಯಾನಿ, ಪುಲಾವ್ ಮೊದಲಾದ ತಿನಿಸುಗಳಿಗೆ ಬಳಸುತ್ತಾರೆ.
ಹಸಿರು ಬಟಾಣಿಯು ಕಬ್ಬಿಣ್ಣ, ಜಿಂಕ್, ಮ್ಯಾಂಗನೀಸ್ ಮತ್ತು ಕಾಪರ್ ಹಾಗೂ ಪ್ರೋಟೀನ ಅಂಶಗಳನ್ನು ಹೊಂದಿದೆ. ಬಟಾಣಿ ಚಳಿಗಾಲದಲಿ ದೇಹಕ್ಕೆ ಒಳ್ಳೆಯ ಪೋಷಕಾಂಶಗಳನ್ನು ನೀಡುತ್ತದೆ. ಲ್ಯೂಟೀನ್ ಜಿಯಾಕ್ಸಾಂಥಿ ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುತ್ತದೆ. ಹೃದಯ, ಮೂತ್ರಪಿಂಡಗಳನ್ನು ಆರೋಗ್ಯಕರವಾಗಿಡುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಹಿಮ್ಮಡಿ ಮತ್ತು ತುಟಿಗಳು ಬಿರುಕು ಬಿಡದಂತೆ ರಕ್ಷಿಸುತ್ತದೆ. ಹೊಟ್ಟೆಯನ್ನು ಸ್ವಚ್ಛಗೊಳಿಸುತ್ತದೆ. ಸಕ್ಕರೆಯನ್ನು ನಿಯಂತ್ರಿಸುತ್ತದೆ. ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಚರ್ಮವನ್ನು ಸ್ವಚ್ವಗೊಳಿಸುತ್ತದೆ. ಮುಖದ ಹೊಳಪು ಹೆಚ್ಚುತ್ತದೆ. ತಲೆನೊವು,ಸಂಧಿವಾತ, ಕೀಲು ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ. ನಿಯಮಿತವಾಗಿ ಸೇವಿಸುವುದನ್ನು ಮರೆಯಬೇಡಿ. ಗ್ಯಾಸ್ ಸಮಸ್ಯೆ ಇರುವವರು ಸ್ವಲ್ಪ ಎಚ್ಚರಿಕೆಯಿಂದ ಸೇವಿಸಿ. ಕೆಲವೊಂದು ಬಾರಿ ಸೇವಿಸುವುದು ತುಂಬಾ ಅತಿಯಾದರೆ ಸಮಸ್ಯೆಗಳು ಬರುತ್ತದೆ. ಹಾಗಾಗಿ ಅರೋಗ್ಯದ ಬಗ್ಗೆ ಹೆಚ್ಚು ಜಾಗರೂಕತೆ ವಹಿಸಿಕೊಳ್ಳುವುದು ಉತ್ತಮ.