ನ್ಯೂಸ್ ನಾಟೌಟ್ : ಮನುಷ್ಯನಿಗೆ ನಂಬಿಕೆ ಅನ್ನುವುದು ಅನಾದಿ ಕಾಲದಿಂದಲೂ ಬಂದಿದೆ. ಆಚಾರ-ವಿಚಾರ, ಪೂಜೆ, ಸಂಸ್ಕೃತಿ, ಭಾಷೆ ಎಲ್ಲರದಲ್ಲೂ ಒಂದಲ್ಲ ಒಂದು ರೀತಿಯ ನಂಬಿಕೆ ಇದ್ದೇ ಇದೆ. ಅದರಲ್ಲೂ ಒಂದು ಧಾರ್ಮಿಕ ವಿಚಾರ. ಮನೆಯ ಮುಂದೆ ಸಂಪ್ರದಾಯ ಪ್ರಕಾರ ಒಂದಿಷ್ಟು ಕಾರ್ಯ ಮಾಡಿದರೆ ಮನೆಗೆ ಯಾವುದೇ ದುಷ್ಟ ಶಕ್ತಿಗಳ ಪ್ರವೇಶ ಆಗುವುದಿಲ್ಲ ಅನ್ನುವ ನಂಬಿಕೆ ಇರುತ್ತದೆ. ಎಷ್ಟೋ ಮನೆಗಳಲ್ಲಿ ಒಂದು ತಂತಿ ಅಥವಾ ದಾರದಲ್ಲಿ ಮೆಣಸಿನಕಾಯಿ, ನಿಂಬೆ ಹಣ್ಣನ್ನು ಕಟ್ಟಿ ಇಟ್ಟಿರುತ್ತಾರೆ. ಅದು ಯಾಕೆ ಅನ್ನುವುದು ಯಾರಿಗೂ ಗೊತ್ತಿರುವುದಿಲ್ಲ. ಈ ಬಗೆಗಿನ ಡಿಟೇಲ್ಸ್ ಇಲ್ಲಿದೆ ನೋಡಿ.
ನಕರಾತ್ಮಕ ಶಕ್ತಿಯನ್ನು ದೂರವಿಡುತ್ತದೆ. ಜೊತೆಗೆ ಮನೆ, ಕುಟುಂಬ ಮತ್ತು ವ್ಯವಹಾರದಲ್ಲಿ ಪ್ರಗತಿ ಇರುತ್ತದೆ. ಅಲ್ಲದೆ ಮನೆ ಮತ್ತು ವ್ಯಾಪಾರದ ಮೇಲೆ ಯಾರಾದ್ದಾದರೂ ಕೆಟ್ಟ ಕಣ್ಣು ಬಿದ್ದರೆ ಎಲ್ಲವೂ ಹಾಳಾಗುತ್ತದೆ ಎಂದು ವಾಸ್ತು ಶಾಸ್ತ್ರಜ್ಞರು ಹೇಳುತ್ತಾರೆ. ಮೆಣಸಿನಕಾಯಿ ಖಾರದಿಂದ ಮನೆಯ ಒಳಗೆ ನೊಣ, ಕೀಟ, ಸೊಳ್ಳೆ ಬರುವುದಿಲ್ಲ ಎಂದು ಕೆಲವರು ವಾದಿಸುತ್ತಾರೆ. ಪ್ರೇತ ಬಾಧೆ ದೂರ ಮಾಡಲು ,ಕಣ್ಣಿನ ಏಕಾಗ್ರತೆ ಮೂಡಿಸಲು ಮನೆಯ, ವಾಹನದ, ಅಂಗಡಿಗಳ ದ್ವಾರದಲ್ಲಿ ನಿಂಬೆ ಮತ್ತು ಮೆಣಸಿನಕಾಯಿ ತೂಗುವುದು ನಂಬಿಕೆಯಾಗಿದೆ.