ನ್ಯೂಸ್ ನಾಟೌಟ್: ತಂತ್ರಜ್ಞಾನ ಬೆಳೆದಂತೆಲ್ಲ ಮನುಷ್ಯ ಸೋಮಾರಿಯಾಗುತ್ತಿದ್ದಾನೆ. ಮಕ್ಕಳನ್ನು ಹೆರುವುದು ಕೂಡ ಇಂದಿನ ದಿನಗಳಲ್ಲಿ ಸೋಮಾರಿತನದ ಒಂದು ಭಾಗವಾಗಿ ಬಿಟ್ಟಿದೆ. ದುಡ್ಡಿನ ದುನಿಯಾದಲ್ಲಿ ಹಣವೇ ಎಲ್ಲ ಆಗಿಬಿಟ್ಟಿದೆ. ಹೀಗಿರುವಾಗ ತಾಯಿಯಾಗುವ ಕನಸು ಮಹಿಳೆಯರಲ್ಲಿ ಇಂದು ಕ್ಷೀಣಿಸುತ್ತಾ ಬರುತ್ತಿದೆ. ಇದೇ ಕಾರಣಕ್ಕೇ ಇರಬೇಕು ಮುಂದಿನ ದಿನಗಳಲ್ಲಿ ಮಕ್ಕಳನ್ನು ಹೇರುವುದಕ್ಕಾಗಿಯೇ ಕಾರ್ಖಾನೆ ನಿರ್ಮಾಣಗೊಳ್ಳುತ್ತಿದೆ. ಈ ತಂತ್ರಜ್ಞಾನವನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಈ ಕುರಿತು ಎಲ್ಲಾ ಕಡೆ ಚರ್ಚೆ ಆಗುತ್ತಿದೆ. ಅಂದಹಾಗೆ ಈ ತಂತ್ರಜ್ಞಾನಕ್ಕೆ ಎಕ್ಟೋಲೈಫ್ ಎಂದು ಹೆಸರಿಸಲಾಗಿದೆ.
ಎಕ್ಟೋಲೈಫ್ ತಂತ್ರಜ್ಞಾನದ ಉದ್ದೇಶವೇನೆಂದರೆ ಬಂಜೆತನ ಎಂಬ ಸಮಸ್ಯೆಯನ್ನು ಬಗೆಹರಿಸುವುದು. ವೈದ್ಯಕೀಯ ಲೋಕದಲ್ಲಿ ಬಂಜೆತನಕ್ಕೆ ಐವಿಎಫ್, ಐಯುಐ ಈ ಬಗೆಯ ಚಿಕಿತ್ಸೆಗಳಿವೆ, ಇದರಿಂದಾಗಿ ತುಂಬಾ ಜನರಿಗೆ ಮಗು ಪಡೆಯಲು ಸಾಧ್ಯವಾಗಿದೆ. ಆದರೆ ಎಷ್ಟೋ ಜನರಿಗೆ ಈ ರೀತಿಯ ಚಿಕಿತ್ಸೆಯ ಬಳಿಕ ಕೂಡ ಮಗು ಪಡೆಯಲು ಅಸಾಧ್ಯವಾಗುವುದು. ಆದರೆ ಈಗ ಬಂದಿರುವ ತಂತ್ರಜ್ಞಾನದಿಂದಾಗಿ ಮಗು ಬಯಸುವ ಪ್ರತಿಯೊಬ್ಬರು ಮಗುವನ್ನು ಪಡೆಯಲು ಸಾಧ್ಯವಾಗುವುದು.
ವಿಜ್ಞಾನಿಗಳು ಕಳೆದ 50 ವರ್ಷಗಳಿಂದ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದಾರೆ. ಇದೀಗ ಹೊಸ ಯಂತ್ರವನ್ನು ತಯಾರಿಸಿದ್ದಾರೆ. . 75 ಲ್ಯಾಬ್ಗಳಿರುವ ಮನೆಯಲ್ಲಿ 400 ಗ್ರೋಥ್ ಪಾಡ್ಸ್ ಹಾಗೂ ಕೃತಕ ಗರ್ಭಕೋಶಗಳನ್ನು ಬಳಸಿ ಮಗುವನ್ನು ತಯಾರಿಸಲಾಗುವುದು. ಇದರಲ್ಲಿ ಪೋಷಕರು ತಮ್ಮ ಮಗು ಹೇಗೆ ಬೆಳೆಯುತ್ತಿದೆ ಎಂಬ ಕುರಿತು ಸಂಪೂರ್ಣ ಮಾಹಿತಿ ಸ್ಕ್ರೀನ್ ಮೇಲೆ ಬರುತ್ತದೆ, ಅದನ್ನು ನೋಡಿ ಮಗುವಿನ ಆರೋಗ್ಯ ಸ್ಥಿತಿ ತಿಳಿಯಬಹುದಾಗಿದೆ, ಈ ಡಾಟಾಗಳನ್ನು ಮೊಬೈಲ್ ಆಪ್ ಮೂಲಕ ಟ್ರ್ಯಾಕ್ ಮಾಡಬಹುದು. ಇದರಲ್ಲಿ ಪೋಷಕರು ತಮ್ಮ ಮಗು ಹೇಗೆ ಬೆಳೆಯುತ್ತಿದೆ ಎಂಬ ಕುರಿತು ಸಂಪೂರ್ಣ ಮಾಹಿತಿ ಸ್ಕ್ರೀನ್ ಮೇಲೆ ಬರುತ್ತದೆ, ಅದನ್ನು ನೋಡಿ ಮಗುವಿನ ಆರೋಗ್ಯ ಸ್ಥಿತಿ ತಿಳಿಯಬಹುದಾಗಿದೆ, ಈ ಡಾಟಾಗಳನ್ನು ಮೊಬೈಲ್ ಆಪ್ ಮೂಲಕ ಟ್ರ್ಯಾಕ್ ಮಾಡಬಹುದು. ಗರ್ಭದಲ್ಲಿ ಬೆಳೆಯುವ ರೀತಿಯಲ್ಲಿಯೇ ಮಗು ಬೆಳೆಯುತ್ತದೆ. ಈ ವಿಧಾನದಲ್ಲಿ ಗರ್ಭದಲ್ಲಿ ಹೇಗೆ ಭ್ರೂಣ ಬೆಳೆಯುತ್ತದೆಯೋ ಅದೇ ರೀತಿ ಈ ಕೃತಕ ಮಗು ಮಾಡುವ ವಿಧಾನದಲ್ಲಿಯೂ ಭ್ರೂಣ 9 ತಿಂಗಳು ಬೆಳೆಯುತ್ತದೆ. ನಂತರ ಹೆರಿಗೆಯಾಗುವ ರೀತಿಯಲ್ಲಿ ಬಟನ್ ಫುಶ್ ಮಾಡುವ ಮೂಲಕ ಪಾಡ್ನಿಂದ ಮಗುವನ್ನು ಹೊರಗಡೆ ತೆಗೆಯಲಾಗುವುದು. ಎಕ್ಟೋಲೈಫ್ ಸುರಕ್ಷಿತ ಹಾಗೂ ಹೆರಿಗೆಯ ನೋವು ಇಲ್ಲ. ಇದರಲ್ಲಿ ಹೆರಿಗೆಯ ವಿಧಾನ ತುಂಬಾ ಸರಳ, ಮಗುವಿನ ಮೇಲೂ ಯಾವುದೇ ಒತ್ತಡ ಬೀಳುವುದಿಲ್ಲ, ಪಾಡ್ನಲ್ಲಿರುವ ಮಗು 9 ತಿಂಗಳು ಬೆಳವಣಿಗೆಯಾದ ಬಳಿಕ ಒಂದು ಬಟನ್ ಪ್ರೆಸ್ ಮಾಡಿದರೆ ಮಗು ಈ ಲೋಕಕ್ಕೆ ಬರುತ್ತದೆ.