ನ್ಯೂಸ್ ನಾಟೌಟ್: ಕೆಲವರಿಗೆ ಹಲಸಿನ ಹಣ್ಣೆಂದ್ರೆ ಪಂಚ ಪ್ರಾಣ. ಒಮ್ಮೆ ಹಲಸಿನ ಸೀಸನ್ ಶುರುವಾಗಲಿ ಎಂದು ಹಪಹಪಿಸುತ್ತಿರುತ್ತಾರೆ. ಹಲಸಿನ ಹಣ್ಣಿನ ಮೇಲೆ ವಿಪರೀತ ಪ್ರೀತಿ ಇರುವವರು ಈಗ ತಲೆಕೆಡಿಸಿಕೊಳ್ಳಬೇಕಿಲ್ಲ. ನಿಮಗಾಗಿ ಸರ್ವ ಋತು ಹಲಸಿನ ಗಿಡ ಸಿದ್ಧವಾಗಿದೆ. ಈ ಗಿಡ ನೆಟ್ಟು ಕೆಲವು ವರ್ಷಗಳಲ್ಲಿ ನೀವು ಅಂದುಕೊಂಡಂತೆ ಯಾವಾಗ ಬೇಕಿದ್ದರೂ ಹಲಸಿನ ಹಣ್ಣು ತಿನ್ನಬಹುದು. ಸದ್ಯ ಸುಳ್ಯದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಈ ಸರ್ವ ಋತು ಹಲಸಿನ ಹಣ್ಣು ಗಮನ ಸೆಳೆದಿದೆ. ಹಲವಾರು ಕೃಷಿಕರು ಸ್ಟಾಲ್ನಲ್ಲಿದ್ದ ಹಲಸಿನ ಹಣ್ಣಿನ ಗಿಡವನ್ನು ನೋಡಿ ಖುಷಿ ಪಟ್ಟಿದ್ದಾರೆ.
ಸರ್ವ ಋತು ಹಲಸಿನ ಈ ತಳಿಯು ಕೇವಲ ಒಂದೇ ವರುಷದಲ್ಲಿ ಬೆಳೆಯುವ ಗಿಡವಾಗಿದೆ. ನೋಡಲು ಆಕರ್ಷಕವಾಗಿದೆ. ತಿನ್ನಲು ರುಚಿಕರವಾಗಿರುತ್ತದೆ. ಹಣ್ಣಿನ ಒಳ ಭಾಗದ ಬಣ್ಣ ಕೇಸರಿಯಾಗಿದೆ. ಗಿಡವು ಹೆಚ್ಚು ಎತ್ತರವಾಗದೆ ಕೆಳಭಾಗದಲ್ಲಿ ಹಣ್ಣು ಬಿಡುತ್ತದೆ. ಆರೋಗ್ಯಕ್ಕೂ ಒಳ್ಳೆಯದಾಗಿದೆ. ಇದಕ್ಕೆ ಸಾವಯುವ ಗೊಬ್ಬರವಾದ ಅರಳಿನ ಹಿಂಡಿ, ಬೇವಿನ ಹಿಂಡಿ ಬಳಸುವುದರಿಂದ ಗಿಡ ಉತ್ತಮವಾಗಿ ಬೆಳೆಯುತ್ತದೆ. ಇವರ ಬಳಿ ಇನ್ನೂ ವಿವಿಧ ರೀತಿಯ ಹಣ್ಣಿನ ಗಿಡಗಳಿವೆ. ಅದರಲ್ಲಿ ಚಂದ್ರ ಹಲಸು, ರಂಬುಟಾನ್ ಗಿಡ, ಮಾವಿನ ಗಿಡಗಳು ಹಾಗೂ ಪೇರೆಲ ಇನ್ನಿತರ ಹಣ್ಣುಗಳು ಲಭ್ಯವಿದೆ. ಇದು ಪುತ್ತೂರಿನ ಕಬಕದ ಪೊಳ್ಯದ ನರ್ಸರಿಯಲ್ಲಿ ಸಿಗುತ್ತದೆ. ಇವರನ್ನು ಸಂಪರ್ಕಿಸಲು 7349145931 ಕರೆ ಮಾಡಿ.