ನ್ಯೂಸ್ ನಾಟೌಟ್: ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಪಟ್ಲಿ ಕಮರಿಯಾ ಮೊರಿ ಹಾಯ್ ಹಾಯ್ ಹಾಯ್ ಎಂಬ ಹಾಡು ವಿವಾದಕ್ಕೆ ಕಾರಣವಾಗುತ್ತಿದೆ. ಈ ಹಾಡಿಗೆ ಸಾವಿರಾರು ಜನ ಸೊಂಟ ಬಳುಕಿಸಿದ್ದಾರೆ. ಹಲವಾರು ಜನ ರೀಲ್ಸ್ಗಳನ್ನು ನೀವು ನೋಡಿರಬಹುದು. ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಅಷ್ಟೊಂದು ಕ್ರೇಜ್ ಸೃಷ್ಟಿಸಿದ ಭೋಜ್ಪುರಿ ಹಾಡು ಇದಾಗಿದ್ದು, ಈ ಹಾಡಿಗೆ ತುಂಬಾ ಜನ ಸೊಂಟ ಬಳುಕಿಸಿದ್ದಾರೆ. ನೀವು ಕೂಡ ರೀಲ್ಸ್ ಮಾಡುವವರಾಗಿದ್ದರೆ ಈ ಹಾಡಿಗೆ ಹೆಜ್ಜೆ ಹಾಕಿರಬಹುದು. ಅದೇ ರೀತಿ ಎಲ್ಲರಂತೆ ಈ ಹಾಡಿಗೆ ಹೆಜ್ಜೆ ಹಾಕಿ ರೀಲ್ಸ್ ಮಾಡಿದ ಮಹಿಳಾ ಪೊಲೀಸರಿಗೆ ಮಾತ್ರ ಈಗ ಈ ಹಾಡು ಸಂಕಷ್ಟ ತಂದಿದೆ. ಈ ಹಾಡಿಗೆ ಡಾನ್ಸ್ ಮಾಡಿದ ಕಾರಣಕ್ಕೆ ನಾಲ್ವರು ಮಹಿಳಾ ಪೊಲೀಸರನ್ನು ಬೇರೆಡೆ ವರ್ಗಾವಣೆ ಮಾಡಲಾಗಿದೆ. ಉತ್ತರಪ್ರದೇಶದ ಆಯೋಧ್ಯದಲ್ಲಿ ಈ ಘಟನೆ ನಡೆದಿದೆ.
ಮೂಲತಃ ಇದು ಭೋಜ್ಪುರಿ ಭಾಷೆಯ ಅಶ್ಲೀಲ ಹಾಡು. ಕೆಲವರು ಭಾಷೆ ಅರ್ಥ ತಿಳಿದೂ ಡಾನ್ಸ್ ಮಾಡಿದರೆ ಬಹುತೇಕರು ಡಾನ್ಸ್ ಮಾಡುವಾಗ ಸಾಹಿತ್ಯದ ಮೇಲೆ ಗಮನ ಹರಿಸುವುದಿಲ್ಲ. ಗುಂಪಿನಲ್ಲಿ ಗೋವಿಂದ ಅಂತ ಸಂಗೀತಾದ ಜೋಶ್ನಲ್ಲಿ ಆಗಿದ್ದಾಗಲಿ ಅಂತ ನಾಲ್ಕು ಸ್ಟೆಪ್ ಹಾಕಿ ಬಿಡುತ್ತಾರೆ. ಹಾಗೆಯೇ ಇಲ್ಲಿ ಪಾಪ ಮಹಿಳಾ ಪೊಲೀಸ್ ಪೇದೆಯರು ಅರ್ಥ ಗೊತ್ತಿದ್ದು, ಕುಣಿದರೋ ಗೊತ್ತಿಲ್ಲದೇ ಕುಣಿದರೋ ತಿಳಿಯದು ಒಟ್ಟಿನಲ್ಲಿ ಅವರಿಗೆ ಈ ಹಾಡಿನಿಂದ ಅಮಾನತಿನ ಶಿಕ್ಷೆಯಾಗಿದೆ. ಪತ್ಲಿ ಕಮರಿಯಾ ಮೊರಿ ಹಾಡಿಗೆ ಇವರು ಕುಣಿದು ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಇವರು ಕರ್ತವ್ಯದಲ್ಲಿದ್ದ ವೇಳೆ ಈ ಡಾನ್ಸ್ ಮಾಡಿದ್ದಾರೆ ಎಂದು ತಿಳಿದು ಬಂದಿದ್ದು, ಅವರನ್ನು ಅವರು ಕರ್ತವ್ಯದಲ್ಲಿದ್ದ ರಾಮಜನ್ಮ ಭೂಮಿ ಅಯೋಧ್ಯೆಯ ಸ್ಥಳದಿಂದ ಪೊಲೀಸ್ ಲೈನ್ಗೆ ವರ್ಗಾಯಿಸಲಾಗಿದೆ.