ನ್ಯೂಸ್ ನಾಟೌಟ್ : ಚಳಿಗಾಲ ಶುರು ಆದರೆ ಸಾಕು ಶೀತ, ಕೆಮ್ಮಿನ ಸಮಸ್ಯೆ ಸಾಮಾನ್ಯ. ಒಮ್ಮೆ ಶೀತ ಶುರುವಾದರೆ ಸಾಕು ಸೀನು, ಮೂಗು ಸುರಿಯುವುದು ಬಂದೇಬಿಡುತ್ತೆ. ಇದಕ್ಕಾಗಿ ವೈದ್ಯರ ಬಳಿ ಹೋಗಿ ಹಣ ಖರ್ಚು ಮಾಡುತ್ತಾರೆ. ಆದರೆ ಈ ಮನೆ ಮದ್ದು ಆರೋಗ್ಯಕ್ಕೆ ಒಳ್ಳೆಯದು ಎಂದು ಇನ್ನೂ ತಿಳಿದಿಲ್ಲ.
-ರಾತ್ರಿ ಮಲಗುವ ಮುನ್ನ ಬಿಸಿ ನೀರಿಗೆ ಅರಿಶಿಣ ಪುಡಿ ಹಾಕಿ ಕಲಸಿ ಕುಡಿದರೆ ಮೂಗಿನಿಂದ ನೀರು ಸೋರುತ್ತಿದ್ದರೆ ನಿಲ್ಲುತ್ತದೆ.
-ಹಸಿ ಶುಂಠಿಯನ್ನು ನೀರಲ್ಲಿ ಚೆನ್ನಾಗಿ ಕುದಿಸಿ ಕಷಾಯ ತಯಾರಿಸಿ. ಕಷಾಯ ಸ್ವಲ್ಪ ಬೆಚ್ಚಗೆ ಇರುವಾಗ ಅದಕ್ಕೆ ಜೇನುತುಪ್ಪ ಸೇರಿಸಿ ಕುಡಿದರೆ ಪ್ರಯೋಜನವಿದೆ.
-ಬೆಳ್ಳುಳ್ಳಿಯನ್ನು ನೀರಲ್ಲಿ ಚೆನ್ನಾಗಿ ಬೇಯಿಸಿ ಸೂಪ್ ಮಾಡಿ. ಅದಕ್ಕೆ ಕಲ್ಲುಸಕ್ಕರೆ ಬೆರೆಸಿ ಕುಡಿದರೂ ಮೂಗು ಸೋರುವುದು ನಿಲ್ಲುತ್ತದೆ.
-ನೀರನ್ನು ಚೆನ್ನಾಗಿ ಕುದಿಸಿ ಅದಕ್ಕೆ ಎರಡು ಹನಿ ನೀಲಗಿರಿ ಎಣ್ಣೆ ಹಾಕಿ ಮುಖಕ್ಕೆ ಹಬೆ ತೆಗೆದುಕೊಂಡರೆ ಪ್ರಯೋಜನವಿದೆ.
-ನೀರಿಗೆ ನಿಂಬೆ ರಸ, ಜೇನುತುಪ್ಪ , ಸೈಂಧವ ಉಪ್ಪು ಸೇರಿಸಿ ದಿನಕ್ಕೆ ಒಂದು ಬಾರಿ ಸೇವಿಸುವುದು
-ಬೆಳಗ್ಗೆ ಖಾಲಿ ಹೊಟ್ಟೆಗೆ ಮತ್ತು ರಾತ್ರಿ ಮಲಗುವ ಮುಂಚೆ 2 ರಿಂದ 3 ತುಳಸಿ ಎಲೆಗಳನ್ನು ಅಗಿದು ತಿಂದರೆ ಪ್ರಯೋಜನವಿದೆ. ಹಾಗೂ ಹಸುವಿನ ತುಪ್ಪದಲ್ಲಿ -ಎಳ್ಳನ್ನು ಹುರಿದು ಅದಕ್ಕೆ ಬೆಲ್ಲ ಸೇರಿಸಿ ಉಂಡೆ ತಯಾರಿಸಿ. ಈ ಉಂಡೆಯನ್ನು ಪ್ರತಿ ದಿನ ಸೇವಿಸಿದರೆ ಮೂಗು ಸೋರುವುದು ನಿಲ್ಲುತ್ತದೆ.