ನ್ಯೂಸ್ ನಾಟೌಟ್: ಪ್ರೀತಿ ಕುರುಡು ಅನ್ನುವುದನ್ನು ಕೇಳಿದ್ದೇವೆ. ಅದು ನಿಜ ಅನ್ನುವುದು ಇದೀಗ ಬಹಿರಂಗವಾಗಿಯೇ ಸಾಬೀತಾಗಿದೆ.
ಹೌದು, ಇನ್ನೇನು ಮುದುಕಿಯಾಗುವುದಕ್ಕೆ ಸಿದ್ಧವಾಗಿರುವ ಆಂಟಿ ಜತೆ ಹದಿಹರೆಯದ (೨೧ ವರ್ಷ) ಯುವಕ ಹಸೆಮಣೆ ಏರಿದ್ದಾನೆ. ಇಬ್ಬರ ಮದುವೆಯೂ ಸ್ನೇಹಿತರ, ಬಂಧು ಬಳಗದವರ ಮುಂದೆ ಅದ್ಧೂರಿಯಾಗಿ ನಡೆದಿದೆ. ಬಂದವರೆಲ್ಲ ನೂರು ಕಾಲ ಸುಖವಾಗಿ ಬಾಳಿ ಎಂದು ಹಾರೈಸಿ ಭರ್ಜರಿ ಊಟ ಮಾಡಿ ತಮ್ಮ ತಮ್ಮ ಮನೆಗೆ ತೆರಳಿದ್ದಾರೆ. ಇದೀಗ ನವಜೋಡಿ ಹನಿಮೂನ್ಗೂ ಸಿದ್ಧವಾಗಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.
21 ವರ್ಷದ ಹುಡುಗನೊಬ್ಬ ತನಗಿಂತ 31 ವರ್ಷ ಹಿರಿಯ ಮಹಿಳೆಯನ್ನು ಮದುವೆಯಾಗಿದ್ದಾನೆ. ಈ ಸುದ್ದಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಹದಿಹರೆಯದ ಹುಡುಗನು ಹಿರಿಯ ಮಹಿಳೆಯ ಜತೆಗೆ ಹಾರ ಹಾಕಿಕೊಂಡು ನಿಂತಿರುವುದನ್ನು ನೋಡಬಹುದು. ಇಬ್ಬರ ಮದುವೆಯನ್ನು ವ್ಯಕ್ತಿಯೊಬ್ಬ ವಿಡಿಯೋ ರೆಕಾರ್ಡಿಂಗ್ ಮಾಡಿದ್ದಾನೆ. ಈ ವೇಳೆ ಅವರಿಬ್ಬರ ವಯಸ್ಸು ಕೇಳಿದಾಗ ಇಬ್ಬರು ತಿಳಿಸಿದ್ದಾರೆ. ನೀವು ಈ ಮದುವೆಯಿಂದ ಸಂತೋಷವಾಗಿದ್ದೀರಾ ಎಂದು ಕೇಳಿದಾಗ ಮಹಿಳೆ, ಹೌದು, ನಾವಿಬ್ಬರೂ ಸಂತೋಷವಾಗಿದ್ದೇವೆ. ನಾನು ನನಗಿಂತ ಹೆಚ್ಚಾಗಿ ಅವನನ್ನು ನಂಬುತ್ತೇನೆ. ಏಕೆಂದರೆ ನಾನು ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಹುಡುಗ ಮಾತನಾಡಿ, ಪ್ರೀತಿಗೆ ವಯಸ್ಸಿಲ್ಲ, ಹೃದಯ ಮಾತ್ರ ಕಾಣುತ್ತದೆ. ಮನುಷ್ಯ ಒಳ್ಳೆಯವನಾಗಿದ್ದರೆ ಎಲ್ಲವೂ ಚೆನ್ನಾಗಿರುತ್ತದೆ ಎಂದು ಹೇಳಿದ್ದಾನೆ. ಈ ಮದುವೆ ವಿಚಾರ ಈಗ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.