ನ್ಯೂಸ್ ನಾಟೌಟ್ :ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಪರಮ ಪೂಜ್ಯ ಜಗದ್ಗುರು ಡಾ| ನಿರ್ಮಲಾನಂದನಾಥ ಸ್ವಾಮೀಜಿಯವರು ಡಿ.20, 21 ಮತ್ತು 22ರಂದು ಮೂರು ದಿನಗಳ ಕಾಲ ಸುಳ್ಯ ತಾಲೂಕಿನಲ್ಲಿ ಗ್ರಾಮ ವಾಸ್ತವ್ಯ ಮತ್ತು ಸಮುದಾಯ ಸಮ್ಮಿಲನ ಕಾರ್ಯಕ್ರಮದಲ್ಲಿ ಜಾಗೃತಿ ಮೂಡಿಸಲಿದ್ದಾರೆ.ಮಂಗಳೂರು ಶಾಖಾ ಮಠದ ಪೂಜ್ಯ ಶ್ರೀ ಶ್ರೀ ಡಾ. ಧರ್ಮಪಾಲನಾಥ ಸ್ವಾಮಿಯವರು ಸಾಥ್ ನೀಡಲಿದ್ದಾರೆ.
ಡಿ. 20ರಂದು ಮಂಗಳವಾರ ಡಾ. ನಿರ್ಮಲಾನಂದನಾಥ ಮಹಾಸ್ವಾಮಿಯವರು ಸುಳ್ಯ ತಾಲೂಕಿಗೆ ಆಗಮಿಸಲಿದ್ದು ಅವರನ್ನು ಅದ್ದೂರಿ ಸ್ವಾಗತದೊಂದಿಗೆ ಬರಮಾಡಿಕೊಳ್ಳಲು ಸರ್ವ ಸಿದ್ದತೆಗಳು ನಡೆಯುತ್ತಿವೆ. ಅಂದು ಬೆಳಗ್ಗೆ 10.30ಕ್ಕೆ ಕಿಶೋರ್ ಕುಮಾರ್ ಕೂಜುಗೋಡು ಮನೆಯಲ್ಲಿ ಅನುಗ್ರಹ ಸಂದೇಶ ಕಾರ್ಯಕ್ರಮ ನಡೆಯಲಿದೆ. ಹರಿಹರ ಪಲ್ಲತ್ತಡ್ಕ- ಐನೆಕಿದು, ಸುಬ್ರಹ್ಮಣ್ಯ, ಏನೆಕಲ್ಲು ಬಾಳುಗೋಡು, ಕಲ್ಮಕಾರು, ಕೊಲ್ಲಮೊಗ್ರು ಗ್ರಾಮದ ಗೌಡ ಸಮಿತಿಯವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಪರಾಹ್ನ 1 ಗಂಟೆಗೆ ನಿತ್ಯಾನಂದ ಮುಂಡೋಡಿಯವರ ಮನೆಗೆ ಆಗಮಿಸುವ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ.
ಮಡಪ್ಪಾಡಿ, ಗುತ್ತಿಗಾರು, ನಾಲ್ಕೂರು, – ದೇವಚಳ್ಳ ಗ್ರಾಮ ಗೌಡ ಸಮಿತಿಯವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಂಜೆ 5 ಗಂಟೆಗೆ ಸರಕಾರಿ ಪ್ರೌಢಶಾಲೆ ಎಲಿಮಲೆ ಇಲ್ಲಿ ಸಾರ್ವಜನಿಕ ಸಭಾ ಕಾರ್ಯಕ್ರಮದಲ್ಲಿ ಅನುಗ್ರಹ ಸಂದೇಶವನ್ನು ನೀಡಲಿದ್ದಾರೆ . ದೇವಚಳ್ಳ, ನೆಲ್ಲೂರು ಕೆಮ್ರಾಜೆ, ಅಮರ ಮೂಡ್ನೂರು,ಗುತ್ತಿಗಾರು,ದುಗಲಡ್ಕ,ಮರ್ಕಂಜ ಗ್ರಾಮ ಗೌಡ ಸಮಿತಿಯವರು ಭಾಗವಹಿಸಲಿದ್ದಾರೆ. ಅಂದು ರಾತ್ರಿ ಎ.ವಿ. ತೀರ್ಥರಾಮರ ಮನೆಯಲ್ಲಿ ಸ್ವಾಮೀಜಿಯವರು ವಾಸ್ತವ್ಯವಿರಲಿದ್ದಾರೆ.
ಡಿ.21ರಂದು ೯.೩೦ಕ್ಕೆ ಪಂಜದ ಪಂಚಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಸಾರ್ವಜನಿಕ ಸಭೆ ಜರುಗಲಿದೆ. ಅಲ್ಲಿ ಗ್ರಾಮ ಗೌಡ ಸಮಿತಿ ಐವತ್ತೊಕ್ಲು, ಪಂಬೆತ್ತಾಡಿ, ಬಳ್ಪ, ಕೂತ್ಕುಂಜ, ಕಲ್ಮಡ್ಕ ಭಾಗದವರು ಭಾಗವಹಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಕಳಂಜ ಕಜೆಮೂಲೆ ಚೆನ್ನಪ್ಪ ಗೌಡರ ಮನೆಗೆ ಭೇಟಿ ನೀಡಲಿರುವ ಸ್ವಾಮೀಜಿಯವರು ಆಶೀರ್ವಚನ ನೀಡಲಿರುವರು. ಬಾಳಿಲ, ಕಳಂಜ, ಮುಪ್ಪೇರಿಯ, ಅಮರಪಡ್ನೂರು, ಮುರುಳ್ಯ ಗ್ರಾಮ ಗೌಡ ಸಮಿತಿ ಪಾಲ್ಗೊಳ್ಳಲಿದೆ. ಸಂಜೆ 5ಕ್ಕೆ ಬರಮೇಲು ಶ್ರೀ ಉದ್ಭವ ತ್ರಿಶಕ್ತಿ ಸ್ವರೂಪಿನಿ ಮಹಾಕಾಳಿ ಕ್ಷೇತ್ರ ದೇವರಕಾನದಲ್ಲಿ ಸಾರ್ವಜನಿಕ ಕಾರ್ಯಕ್ರಮ ಮತ್ತು ಅನುಗ್ರಹ ಸಂದೇಶ ಕಾರ್ಯಕ್ರಮ ನಡೆಯಲಿದೆ. ಐವರ್ನಾಡು, ಬೆಳ್ಳಾರೆ, ಪೆರುವಾಜೆ, ಕೊಡಿಯಾಲ ಗ್ರಾಮ ಗೌಡ ಸಮಿತಿ ಭಾಗವಹಿಸಲಿದೆ. ರಾತ್ರಿ ಅರಂತೋಡಿಗೆ ಭೇಟಿ ನೀಡುವ ಸ್ವಾಮೀಜಿಯವರು ಅಲ್ಲಿ ಡಾ| ಲಕ್ಷ್ಮೀಶ್ ಕೆ. ಎಸ್. ಕಲ್ಲುಮುಟ್ಲು ಅವರ ಮನೆಯಲ್ಲಿ ತಂಗಲಿದ್ದಾರೆ.
ಡಿ.22ರಂದು ಬೆಳಗ್ಗೆ ಅರಂತೋಡು ನೆಹರೂ ಸ್ಮಾರಕ ಪ.ಪೂ. ವಿದ್ಯಾಲಯದಲ್ಲಿ ಸಾರ್ವಜನಿಕ ಸಭೆ ನಡೆಯಲಿದ್ದು, ಅರಂತೋಡು, ತೋಡಿಕಾನ, ಪೆರಾಜೆ, ಸಂಪಾಜೆ, ಚೆಂಬು,ಮರ್ಕಂಜ, ಕೊಡಗು ಸಂಪಾಜೆ, ಗ್ರಾಮ ಗೌಡ ಸಮಿತಿಯವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಪರಾಹ್ನ 12ಕ್ಕೆ ಕೇರಳ ರಾಜ್ಯದ ಬಂದಡ್ಕ ಮುತ್ತಣ್ಣ ಮಾಸ್ತರ್ ಕಟ್ಟಕ್ಕೋಡಿಯವರ ಮನೆಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಬಂದಡ್ಕ, ಆಲೆಟ್ಟಿ, ಕಲ್ಲಪಳ್ಳಿ ಗ್ರಾಮ ಗೌಡ ಸಮಿತಿಯವರು ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂಜೆ 5ಕ್ಕೆ ಜಾಲ್ಸೂರು ಗ್ರಾಮದ ಅಡ್ಕಾರು ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸುವ ಸ್ವಾಮೀಜಿಯವರು ಅನುಗ್ರಹ ಸಂದೇಶವನ್ನು ನೀಡಲಿದ್ದಾರೆ. ಜಾಲ್ಸೂರು, ಕನಕಮಜಲು, ಮಂಡೆಕೋಲು, ಅಜ್ಜಾವರ, ದೇಲಂಪಾಡಿ, ಸುಳ್ಯ ನಗರ, ಉಬರಡ್ಕ ಮಿತ್ತೂರು ಭಾಗದ ಗೌಡ ಸಮಿತಿಯರು ಭಾಗವಹಿಸಲಿದ್ದಾರೆ.ಅಲ್ಲಿನ ಕಾರ್ಯಕ್ರಮದ ಬಳಿಕ ಸ್ವಾಮೀಜಿಯವರು ಅಲ್ಲಿಂದ ನಿರ್ಗಮಿಸಲಿದ್ದಾರೆ. ಗೌಡ ಸಮಿತಿ ಪ್ರಮುಖರಾದ ಎ.ವಿ. ತೀರ್ಥರಾಮ, ನಿತ್ಯಾನಂದ ಮುಂಡೋಡಿ, ದೊಡ್ಡಣ್ಣ ಬರಮೇಲು, ಬೆಳ್ಯಪ್ಪ ಗೌಡ, ರಜತ್ ಗೌಡ ಅಡ್ಕಾರ್ , ಚಂದ್ರಶೇಖರ ಪೇರಾಲು, ಡಾ| ಎಸ್. ಎ. ಜ್ಞಾನೇಶ್, ಪಿ.ಎಸ್. ಗಂಗಾಧರ್, ವೀರಪ್ಪ ಗೌಡ ಕಣ್ಕಲ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.