ನ್ಯೂಸ್ ನಾಟೌಟ್ : ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಸಂಚರಿಸುವ ಎಲ್ಲಾ ಆಟೋ ಚಾಲಕರಿಗೆ ಜಿಲ್ಲಾಡಳಿತ ಮಹತ್ವದ ಆದೇಶವೊಂದನ್ನು ಹೊರಡಿಸಿದೆ.
ಮಂಗಳೂರು ನಗರ ವ್ಯಾಪ್ತಿಯ ವಲಯ 1 ಹಾಗೂ ಗ್ರಾಮಾಂತರ ವ್ಯಾಪ್ತಿಯ ವಲಯ 2ರ ಎಲ್ಲಾ ಆಟೋರಿಕ್ಷಾಗಳು ಜಿಲ್ಲಾಡಳಿತ ಸೂಚಿಸಿದ ಬಣ್ಣದ ಜತೆ ಪೊಲೀಸ್ ಠಾಣೆಯಲ್ಲಿ ನೀಡುವ ಸ್ಟಿಕ್ಕರ್ ಅನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.ಕಪ್ಪು ಮತ್ತು ಹಳದಿ ಬಣ್ಣದಲ್ಲಿ ಸಂಚರಿಸುತ್ತಿದ್ದ ಎಲ್ಲಾ ಆಟೋರಿಕ್ಷಾಗಳು ಇನ್ನು ಮುಂದೆ ವಲಯ 1ರ ವ್ಯಾಪ್ತಿಯ ಆಟೋಗಳು ಹಳದಿ ಮತ್ತು ಕಪ್ಪು ಬಣ್ಣ ಹಾಗೂ ಗ್ರಾಮಾಂತರ ವ್ಯಾಪ್ತಿಯ ಆಟೋಗಳು ಹಸಿರು ಮತ್ತು ಹಳದಿ ಬಣ್ಣದಲ್ಲಿ ಸಂಚರಿಸುವಂತೆ ಆದೇಶ ಹೊರಡಿಸಿದೆ.
ಟ್ರಾಫಿಕ್ ಪೊಲೀಸರು ಸುಲಭವಾಗಿ ಆಟೋಗಳ ವ್ಯಾಪ್ತಿಯನ್ನು ಅಂದಾಜಿಸಬಹುದಾಗಿದೆ ಮತ್ತು ಆಯಾ ವಲಯದ ಆಟೋ ಇನ್ನೊಂದು ವಲಯಕ್ಕೆ ಸಂಚರಿಸುವಂತಿಲ್ಲ. ತುರ್ತು ಸಂದರ್ಭದಲ್ಲಿ ಮಾತ್ರ ಅಗತ್ಯ ದಾಖಲೆಗಳೊಂದಿಗೆ ಬೇರೆ ವಲಯಗಳಲ್ಲಿ ಸಂಚರಿಸಬಹುದಾಗಿದೆ. ಈ ಆದೇಶವನ್ನು ಉಲ್ಲಂಘಿಸಿದ್ದಲ್ಲಿ ಸಂಬಂಧಪಟ್ಟ ಪ್ರಾಧಿಕಾರದವರು ಕ್ರಮ ಕೈಗೊಳ್ಳುವರು ಎಂದು ಜಿಲ್ಲಾಡಳಿತ ತಿಳಿಸಿದೆ.