ನ್ಯೂಸ್ ನಾಟೌಟ್ : ಇತ್ತೀಚಿನ ದಿನಗಳಲ್ಲಿ ಯುವ ಜನತೆ ಹೃದಯಾಘಾತದಿಂದ ಮರಣ ಹೊಂದುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಆತಂಕದ ಬೆನ್ನಲ್ಲೇ ಇದೀಗ ಯುವ ಕೋಚ್ ವೊಬ್ಬರು ನಿಧನರಾಗಿದ್ದಾರೆ. ರಾಷ್ಟ್ರಮಟ್ಟದ ವೇಟ್ಲಿಫ್ಟರ್ ಆಗಿದ್ದ ಮೂಡುಬಿದಿರೆ ಅಳ್ವಾಸ್ ಕಾಲೇಜಿನ ಉದ್ಯೋಗಿ ರಾಜೇಂದ್ರ ಪುಸಾದ್ (39 ವ) ಹೃದಯಾಘಾತದಿಂದ ಮೃತಪಟ್ಟವರು.
ರಾಜೇಂದ್ರ ಪುಸಾದ್ ಪುತ್ತೂರಿನ ಕೆಮ್ಮಿಂಜೆ ನಿವಾಸಿ. ಪುತ್ತೂರು ಫಿಲೋಮಿನಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರೈಸಿದ್ದರು. ಕಾಲೇಜು ಸಮಯದಲ್ಲಿ ವೇಟ್ಲಿಫ್ಟರ್ ಆಗಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಬಳಿಕ ಎಸ್.ಡಿ.ಎಂ ಕಾಲೇಜಿನಲ್ಲಿ ಹಾಗೂ ಮೂಡುಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ಕೋಚ್ ಆಗಿ ನೇಮಕವಾದರು. ಡಿ.12 ರಂದು ಪುತ್ತೂರಿನ ಪಡೀಲ್ ನಲ್ಲಿರುವ ಮನೆಯಲ್ಲಿ ಹೃದಯಾಘಾತ ಸಂಭವಿಸಿದೆ. ಕೂಡಲೇ ಕುಟುಂಬದವರು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆತಂದಾಗ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು. ಕೋಚ್ ಆಗಿ ಅತ್ಯುತ್ತಮ ಶಿಷ್ಯರ ತಂಡವನ್ನು ಕಟ್ಟಿದ್ದ ಅವರು ತಮ್ಮ ವಿದ್ಯಾರ್ಥಿಗಳನ್ನು ರಾಷ್ಟ್ರಮಟ್ಟದಲ್ಲಿ ಮಿಂಚುವಂತೆ ಮಾಡಿದ್ದಾರೆ. ಇದೀಗ ಅವರ ಅಂತಿಮ ದರ್ಶನಕ್ಕೆ ಹೊರ ಜಿಲ್ಲೆಗಳಿಂದಲೂ ಶಿಕ್ಷಣ ನಿರ್ದೇಶಕರು ಹಾಗೂ ವಿದ್ಯಾರ್ಥಿಗಳು ಪುತ್ತೂರಿನ ಪಡೀಲು ನಿವಾಸ ಆಗಮಿಸಿ ಅಂತಿಮ ದರ್ಶನ ಪಡೆದಿದ್ದಾರೆ. ಮೃತರು ಪತ್ನಿ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.