ನ್ಯೂಸ್ ನಾಟೌಟ್: ಇತ್ತೀಚೆಗೆ ಮನುಷ್ಯನಿಗೆ ಹೃದಯದ ಸಮಸ್ಯೆಗಳೇ ಹೆಚ್ಚಾಗಿ ಸಾವಿಗೀಡಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಿದೆ. ಅದರಲ್ಲೂ ಯುವಕರೇ ಹೃದಯಾಘಾತಕ್ಕೆ ಬಲಿಯಾಗಿ ಸಾವಿಗೀಡಾಗುತ್ತಿರುವುದು ವಿಪರ್ಯಾಸವೇ ಸರಿ.
ಹೃದಯಾಘಾತಕ್ಕೆ ಕಾರಣವೇನು ಅನ್ನುವುದನ್ನು ಹುಡುಕುತ್ತಾ ಹೊರಟರೆ ಅನೇಕ ವಿಚಾರಗಳು ಬೆಳಕಿಗೆ ಬರುತ್ತದೆ. ಮೊದಲನೆಯದಾಗಿ ಕಳಪೆ ಜೀವನ ಶೈಲಿ, ಕಲಬೆರಕೆ ಆಹಾರ ವಸ್ತುಗಳು, ಕೊಬ್ಬಿನಾಂಶದಿಂದ ಕೂಡಿದ ಆಹಾರ, ವ್ಯಾಯಾಮದ ಕೊರತೆಯಿಂದ ಅನೇಕರು ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹಾಗಾದರೆ ಹೃದಯ ಸಮಸ್ಯೆ ಬಾರದಂತೆ ತಡೆಗಟ್ಟುವುದಕ್ಕೆ ಏನು ಮಾಡಬೇಕು. ಹೇಗೆ ಇದನ್ನು ನಿಯಂತ್ರಣ ಮಾಡಿಕೊಳ್ಳಬೇಕು ಅನ್ನುವುದಕ್ಕೆ ಉತ್ತರ ಇಲ್ಲಿದೆ ಓದಿ.
ಈ ಆಹಾರ ತಿನ್ನುವ ಮುಂಚೆ ಯೋಚಿಸಿ! ಸ್ಯಾಚುರೇಟೆಡ್ ಫ್ಯಾಟ್, ಟ್ರಾನ್ಸ್ ಫ್ಯಾಟ್ ಮತ್ತು ಕೊಬ್ಬು ಹೆಚ್ಚಿರುವ ಆಹಾರವನ್ನು ಸೇವಿಸುವುದರಿಂದ ಮತ್ತು ಜಂಕ್ ಪುಡ್ ಗಳ ಸೇವನೆಯಿಂದ ಹೃದ್ರೋಗದಂತಹ ಸಮಸ್ಯೆ ಬೇಗ ಮನುಷ್ಯನಿಗೆ ಅಂಟುಕೊಳ್ಳುತ್ತದೆ. ಅಲ್ಲದೇ ಇನ್ನಿತರ ರೋಗಕ್ಕೂ ಕಾರಣವಾಗುತ್ತದೆ.
ದೈಹಿಕ ಚಟುವಟಿಕೆ ಮಾಡುವುದರಿಂದ ಮನಸ್ಸು ಶಾಂತಿಯಾಗುತ್ತದೆ. ದೇಹಕ್ಕೆ ಸಾಮರ್ಥ್ಯ ಬರುತ್ತದೆ. ಹಾರ್ಮೋನ್ ಗಳು, ಇನ್ನಿತರ ದೇಹದ ಭಾಗಗಳು ಜೀವ ಪಡೆದುಕೊಳ್ಳುತ್ತದೆ. ವ್ಯಾಯಾಮ, ಯೋಗ, ವಾಕಿಂಗ್ ನಂತಹ ದೈಹಿಕ ಚಟುವಟಿಕೆ ನಡೆಸಬೇಕು. ಉಸಿರಾಟವೂ ಉತ್ತಮವಾಗುತ್ತದೆ.
ಮದ್ಯಪಾನ ಮಾಡುವುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತು. ಮದ್ಯಪಾನದಿಂದ ಬಿಪಿ, ಶುಗರ್ ನಂತಹ ರೋಗ ಮನುಷ್ಯನನ್ನು ಆವರಿಸುತ್ತದೆ. ಆಯಸ್ಸನ್ನು ಕಡಿಮೆ ಮಾಡುತ್ತದೆ.
ಧೂಮಪಾನ ಹೃದ್ರೋಗ ಮತ್ತು ಹೃದಯಾಘಾತಕ್ಕೆ ನೇರ ಕಾರಣವಾಗಬಹುದು. ಹೌದು, ಸಿಗರೇಟ್ ಸೇವನೆಯು ಹೃದಯ ಮತ್ತು ರಕ್ತನಾಳಗಳನ್ನು ಹಾನಿಗೊಳಿಸುತ್ತದೆ. ಇದು ಹೃದಯಾಘಾತಕ್ಕೆ ಕಾರಣವಾಗುತ್ತದೆ. ಇನ್ನು ನಿಕೋಟಿನ್ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಇನ್ನು ಸಿಗರೇಟ್ ಹೊಗೆಯಿಂದ ಬರುವ ಕಾರ್ಬನ್ ಮಾನಾಕ್ಸೈಡ್ ನಿಮ್ಮ ರಕ್ತದಲ್ಲಿರುವ ಆಮ್ಲಜನಕದ ಪ್ರಮಾಣವನ್ನು ಕುಗ್ಗಿಸುತ್ತದೆ.