ನ್ಯೂಸ್ ನಾಟೌಟ್: ಒತ್ತಡದ ಜೀವನವೋ, ಆಹಾರ ಪದ್ದತಿಗಳಿಗೋ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ.ಅದರಲ್ಲೂ ದೊಡ್ಡವರಿಂದ ಹಿಡಿದು ಚಿಕ್ಕ ಮಕ್ಕಳು ಕೂಡ ಹೃದಯಾಘಾತಕ್ಕೆ ಬಲಿಯಾಗುತ್ತಿರುವುದು ವಿಪರ್ಯಾಸ. ಇದೀಗ ರಾಜ್ಯ ಪಾಲರನ್ನು ಕರೆದೊಯ್ಯಲು ಬಂದಿದ್ದ ಗೌವರ್ನರ್ ಕಾರು ಚಾಲಕ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಕೆಂಪೇ ಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ರವಿಕುಮಾರ್, ಎಸ್. ಕಾಳೆ ಮೃತಪಟ್ಟಿರುವ ಕಾರು ಚಾಲಕ. ಹುಬ್ಬಳ್ಳಿಯಿಂದ ತಡರಾತ್ರಿ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ಆಗಮಿಸಿದ್ದರು. ಈ ವೇಳೆ ಅವರನ್ನು ಕಾರಿನಲ್ಲಿ ಕರೆದೊಯ್ಯಲು ಚಾಲಕ ರವಿಕುಮಾರ್ ಬಂದಿದ್ದರು.
ರಾಜ್ಯಪಾಲರು ವಿಮಾನ ನಿಲ್ದಾಣಕ್ಕೆ ಬಂದು ವಿಐಪಿ ಲಾಂಜ್ ನಲ್ಲಿರುವ ವೇಳೆ ಕಾರು ಚಾಲಕನಿಗೆ ಚಾಲಕನಿಗೆ ಎದೆ ನೋವು ಕಾಣಿಸಿಕೊಂಡಿದೆ.ಇದೇ ವೇಳೆ ಚಾಲಕನಿಗೆ ಹೃದಯಾಘಾತವಾಗಿ ಕಾರಲ್ಲಿ ಕುಸಿದು ಬಿದ್ದಿದ್ದಾರೆ.ಕಾರು ಚಾಲಕನಿಗೆ ಎದೆನೋವು ಕಾಣಿಸುತ್ತಿದ್ದಂತೆ ತಕ್ಷಣ ಆಂಬುಲೆನ್ಸ್ನಲ್ಲಿ ಕರೆದೊಯ್ಯಲಾಗಿದೆ. ಆದರೆ ದಾರಿ ಮಧ್ಯೆಯೇ ಚಾಲಕ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.