ಕೊಡಗು

ಏಪ್ರಿಲ್ ಅಥವಾ ಮೇ ಮೊದಲ ವಾರದಲ್ಲಿ ರಾಜ್ಯ ಚುನಾವಣೆ: ಶಾಸಕ ಕೆ.ಜಿ ಬೋಪಯ್ಯ

74
Spread the love

ನ್ಯೂಸ್ ನಾಟೌಟ್ : ಏಪ್ರಿಲ್ 23 ಅಥವಾ ಮೇ ಮೊದಲನೇ ವಾರದಲ್ಲಿ ಕರ್ನಾಟಕ ಚುನಾವಣೆ ನಡೆಯುತ್ತದೆ ಎಂದು ರಾಜ್ಯ ಚುನಾವಣೆ ಬಗ್ಗೆ ಮಾಜಿ ಸ್ಪೀಕರ್ ಹಾಲಿ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಮುನ್ಸೂಚನೆ ನೀಡಿದ್ದಾರೆ.

ಗುಜರಾತ್ ಚುನಾವಣೆ ಮುಗಿದ ಬಳಿಕ ಕರ್ನಾಟಕದಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆ ರಾಜ್ಯ ಚುನಾವಣೆ ಬಗ್ಗೆ ಮಡಿಕೇರಿಯಲ್ಲಿ ‌ಮಾತನಾಡಿದ ಅವರು‌, ಏಪ್ರಿಲ್ 23 ಅಥವಾ ಮೇ ಮೊದಲನೇ ವಾರದಲ್ಲಿ ಎಲೆಕ್ಷನ್ ಇದೆ ಎಂದು ನಮಗೆ ಮುಂಚಿತವಾಗಿಯೇ ಗೊತ್ತಿತ್ತು. ಹೀಗಾಗಿ ಕೊಡಗು ಜಿಲ್ಲೆಯಲ್ಲೂ ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ. ಪಕ್ಷ ಚುನಾವಣೆಗೆ ಕಾರ್ಯಕರ್ತರು ಸೇರಿದಂತೆ ಎಲ್ಲರೂ ಸಂಪೂರ್ಣ ಸನ್ನದ್ದರಾಗಿದ್ದೇವೆ. ಗುಜರಾತ್ ಮಾದರಿಯಲ್ಲಿ ರಾಜ್ಯದಲ್ಲೂ ಹೊಸ ಮುಖಗಳಿಗೆ ಆದ್ಯತೆ ನೀಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ಅದು ಪಕ್ಷದ ನಿರ್ಧಾರ ಇದರ ಬಗ್ಗೆ ಹೆಚ್ಚು ಮಾತಾನಾಡುವುದಿಲ್ಲ ಎಂದು ತಿಳಿಸಿದರು.

See also  ಮಡಿಕೇರಿ: ದೇವರಕೊಲ್ಲಿ ಕಾಡಿನಲ್ಲಿ ಧಗ..ಧಗ ಹೊತ್ತಿಕೊಂಡ ಬೆಂಕಿ..!
    Ad Widget   Ad Widget