ನ್ಯೂಸ್ ನಾಟೌಟ್ : ಬೇಸಿಗೆ ಸಮಯದಲ್ಲಿ ಎಳನೀರು ಎಲ್ಲರಿಗೂ ಬೇಕೇ ಬೇಕು. ಈ ಎಳನೀರಿನಲ್ಲಿ ಹಲವು ವೈದ್ಯಕೀಯ ಗುಣಗಳಿವೆ. ಪೋಷಕಾಂಶಗಳು ಹಲವು ಸತ್ವಗಳು ಎಳನೀರಿನಲ್ಲಿ ಹೇರಳವಾಗಿದೆ. ಹಲವರಿಗೆ ಎಳನೀರಿನ ನೈಜ ವಿಚಾರದ ಬಗ್ಗೆ ಗೊತ್ತಿಲ್ಲ. ಎಳನೀರು ದೇಹದ ಗುಣಮಟ್ಟ ಕಾಯ್ದುಕೊಳ್ಳಲು ನೆರವಾಗುತ್ತದೆ. ಚರ್ಮದ ರೋಗಗಳಿಗೂ ಅತ್ಯುತ್ತಮ ಔಷಧ.
ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿದರೆ ಹೆಚ್ಚು ಆರೋಗ್ಯ ಲಾಭವಿದೆ. ಎಳನೀರಿನಲ್ಲಿ ಲೌರಿಕ್ ಆಮ್ಲವಿದ್ದು, ಪ್ರತಿರೋಧಕ ಶಕ್ತಿ ವೃದ್ಧಿಸುವುದು, ಚಯಾಪಚಯ ಹೆಚ್ಚಿಸುತ್ತದೆ. ತೂಕ ಇಳಿಸಲು ಸಹಕಾರಿ. ಮಲಬದ್ಧತೆ ಮತ್ತು ನಿರ್ಜಲೀಕರಣ ನಿವಾರಣೆಯಾಗುತ್ತದೆ. ಗರ್ಭಿಣಿಯರು ಎಳನೀರು ಕುಡಿಯಬೇಕು. ಹ್ಯಾಂಗ್ ಓವರ್ ಸಮಸ್ಯೆ ಇದ್ದರೆ ಒಂದು ಲೋಟ ಎಳನೀರು ಕುಡಿದರೆ ಉತ್ತಮ. ಎಳನೀರಿನಲ್ಲಿ ಒಮೆಗಾ 3 ಫ್ಯಾಟಿ ಆಸಿಡ್, ವಿಟಮಿನ್ ಸಿ, ಅಮೈನೊ ಆಮ್ಲಗಳು ಮತ್ತು ಮೆಗ್ನೀಷಿಯಂ, ಪೊಟ್ಯಾಶಿಯಂ ತರಹದ ಖನಿಜಾಂಶಗಳ ಜೊತೆಗೆ ನೈಸರ್ಗಿಕವಾದ ಎಲೆಕ್ಟ್ರೋಲೈಟ್ ಅಂಶಗಳು ಇರುವುದರಿಂದ ನಮ್ಮ ದೇಹದಲ್ಲಿ ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡುತ್ತವೆ.ಪೌಷ್ಟಿಕಾಂಶಗಳ ಅಗರ , ಮಧುಮೇಹಿಗಳಲ್ಲಿ ರಕ್ತ ಸಕ್ಕರೆ ಪ್ರಮಾಣ ಕಡಿಮೆ ಮಾಡಬಹುದು, ಕಿಡ್ನಿಯಲ್ಲಿ ಕಲ್ಲು ಬಾರದಂತೆ ತಡೆಯತ್ತದೆ, ಹೃದಯ ಆರೋಗ್ಯ ಪೂರಕ, ದೀರ್ಘಕಾಲದ ವ್ಯಾಯಾಮದ ಸಹಕಾರಿ, ಮುಖದ ಸೌಂದರ್ಯಕ್ಕೆ, ಚರ್ಮರೋಗ ನಿವಾರಣೆಗೆ ಪ್ರಯೋಜನಕಾರಿ.