ನ್ಯೂಸ್ ನಾಟೌಟ್ : ಜಲ ಮತ್ತು ವಿದ್ಯುತ್ ಕನ್ಸಲ್ಟೆನ್ಸಿ ಸರ್ವೀಸಸ್ ಲಿಮಿಟೆಡ್ ಸಂಸ್ಥೆಯಲ್ಲಿ ಡಿಪ್ಲೋಮಾ, ಎಂಜಿನಿಯರಿಂಗ್ ಅಭ್ಯರ್ಥಿಗಳಿಗೆ ಉದ್ಯೋಗ ಖಾಲಿ ಇದೆ. ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.
ಒಟ್ಟು 82 ಫೀಲ್ಡ್ ಎಂಜಿನಿಯರ್ ಫೀಲ್ಡ್ ಸೂಪರ್ ವೈಸರ್ ಹುದ್ದೆಗಳು ಖಾಲಿ ಇದೆ. ಆಸಕ್ತರು ಡಿ. 16 ರೊಳಗೆ ಆಫ್ ಲೈನ್ ಮೂಲಕ ಅರ್ಜಿ ಹಾಕಬಹುದು.
ಹುದ್ದೆಯ ಮಾಹಿತಿ:
-ಫೀಲ್ಡ್ ಎಂಜಿನಿಯರ್- ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ನಲ್ಲಿ ಬಿಇ/ ಬಿ.ಟೆಕ್ ಆಗಿರಬೇಕು.
-ಫೀಲ್ಡ್ ಸೂಪರ್ವೈಸರ್-ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ನಲ್ಲಿ ಡಿಪ್ಲೋಮಾ ಆಗಿರಬೇಕು.
-ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ಹಾಗೂ ದಾಖಲಾತಿಗಳೊಂದಿಗೆ ಡಿ. 16ರೊಳಗೆ ಪೋಸ್ಟ್ ಮುಖಾಂತರ ಕಳುಹಿಸಬೇಕು.
-ಫೀಲ್ಡ್ ಎಂಜಿನಿಯರ್- 18, ಫೀಲ್ಡ್ ಸೂಪರ್ವೈಸರ್- 64 ಖಾಲಿ ಇರುವ ಹುದ್ದೆಗಳು.
-ಲಿಖಿತ ಪರೀಕ್ಷೆ, ಸ್ಕಿಲ್ ಟೆಸ್ಟ್, ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.
-ಮಾಸಿಕ ವೇತನ, ಫೀಲ್ಡ್ ಎಂಜಿನಿಯರ್- ₹ 25,000-30,000. ಫೀಲ್ಡ್ ಸೂಪರ್ ವೈಸರ್- ₹ 20,000-25,000
-ಜಲ ಮತ್ತು ವಿದ್ಯುತ್ ಕನ್ಸಲ್ಟೆನ್ಸಿ ಸರ್ವೀಸಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 45 ವರ್ಷ ಮೀರಿರಬಾರದು.
-ಅರ್ಜಿ ಸಲ್ಲಿಸಬೇಕಾದ ವಿಳಾಸ , ಮುಖ್ಯಸ್ಥರು(HR), WAPCOS ಲಿಮಿಟೆಡ್, ಪ್ಲಾಟ್ ನಂ.76-ಸಿ, ಇನ್ಸ್ಟಿಟ್ಯೂಶನಲ್ ಏರಿಯಾ, ಸೆಕ್ಟರ್- 18, ಗುರುಗ್ರಾಮ, ಹರಿಯಾಣ-122015.