ನ್ಯೂಸ್ ನಾಟೌಟ್ : ಕಾಲೇಜು ವಿದ್ಯಾರ್ಥಿನಿಯೋರ್ವಳ ಮೃತದೇಹ ಕಾಸರಗೋಡಿನ ರೈಲ್ವೇ ಹಳಿಯಲ್ಲಿ ನಿಗೂಢವಾಗಿ ಪತ್ತೆಯಾಗಿದೆ.
ಮೃತಪಟ್ಟವರು ಅಂಜನಾ ಎಸ್( 22) ಎಂದು ಗುರುತಿಸಲಾಗಿದೆ. ಈಕೆ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಬಯೋ ಕೆಮಿಸ್ಟ್ರಿ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಚೌಕಿ ಕಾವುಗೋಳಿ ಕಡಪ್ಪುರದ ಸುರೇಂದ್ರನ್ ಅವರ ಪುತ್ರಿ ಅಂಜನಾ ಸೋಮವಾರದಂದು ರಾತ್ರಿ ಊಟ ಮಾಡಿ ಮಲಗಿದ್ದಳು. ಆದರೆ ಬೆಳಗ್ಗೆ ಮನೆಯವರು ಏಳುವ ವೇಳೆಗೆ ಆಕೆ ನಾಪತ್ತೆಯಾಗಿದ್ದಳು. ಆ ವಿಷಯ ತಿಳಿದ ಬಳಿಕ ಮನೆಯವರು ಹುಡುಕಾಟ ನಡೆಸಿದರು . ಬಳಿಕ ಮನೆಯ ಸಮೀಪದಲ್ಲಿ ಇರುವ ರೈಲು ಪಟ್ಟೆಯಲ್ಲಿ ಆಕೆಯ ದೇಹ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ನಂತರ ಸ್ಥಳಕ್ಕೆ ಕಾಸರಗೋಡಿನ ನಗರ ಠಾಣಾ ಪೊಲೀಸರು ಆಗಮಿಸಿ ತನಿಖೆ ನಡೆಸಿದ್ದಾರೆ. ಇದು ಆತ್ಮಹತ್ಯೆಯೋ ಅಥವಾ ಆಕಸ್ಮಿಕ ಸಾವೇ ಎಂದು ಇನ್ನೂ ತಿಳಿದು ಬಂದಿಲ್ಲ.